• 22 ನವೆಂಬರ್ 2024

ಗಾಜಾದಲ್ಲಿ ಐಸ್ ಕ್ರೀಮ್ ಟ್ರಕ್‌ಗಳ ಮೂಲಕ ಮೃತದೇಹಗಳ ಸಾಗಾಟ!

 ಗಾಜಾದಲ್ಲಿ ಐಸ್ ಕ್ರೀಮ್ ಟ್ರಕ್‌ಗಳ ಮೂಲಕ ಮೃತದೇಹಗಳ ಸಾಗಾಟ!
Digiqole Ad

ಗಾಜಾದಲ್ಲಿ ಐಸ್ ಕ್ರೀಮ್ ಟ್ರಕ್‌ಗಳ ಮೂಲಕ ಮೃತದೇಹಗಳ ಸಾಗಾಟ!

ಇಸ್ರೇಲ್‌ನಲ್ಲಿ ದೇಹಗಳನ್ನು ರಕ್ಷಿಸಿ ಇಡಲು ಬೇರೆ ಎಲ್ಲೂ ವ್ಯವಸ್ಥೆ ಇರದ ಕಾರಣ ಐಸ್ ಕ್ರೀಮ್ ಟ್ರಕ್‌ಗಳಲ್ಲಿ ದೇಹವನ್ನು ಇಡಲಾಗುತ್ತಿದೆ. ಗಾಜಾಪಟ್ಟಿಯಲ್ಲಿರುವ ಆಸ್ಪತ್ರೆಗಳ ಶವಾಗಾರಗಳನ್ನು ಹೆಚ್ಚೆಂದರೆ 10 ಶವಗಳನ್ನು ಏಕಕಾಲದಲ್ಲಿ ಇರಿಸಿಕೊಳ್ಳಬಹುದಾಗಿದೆ. ಇಡೀ ರಸ್ತೆಗಳು ದಾಳಿಯಿಂದ ಹಾನಿಗೆ ಒಳಗಾಗಿರುವ ಕಾರಣ, ಆಸ್ಪತ್ರೆಯ ಶವಾಗಾರಗಳಿಗೆ ದೇಹವನ್ನು ಶಿಫ್ಟ್ ಮಾಡುವುದು ಸಾಧ್ಯವಾಗುತ್ತಿಲ್ಲ. ಸ್ಮಶಾನಗಳಲ್ಲೂ ಸ್ಥಳಾವಕಾಶದ ಕೊರತೆ ಕಾಣುತ್ತಿದ್ದು, ಶವಗಳನ್ನು ಹೂಳುವವರೆಗೆ ಅವುಗಳನ್ನು ಐಸ್‌ಕ್ರೀಮ್ ಟ್ರಕ್‌ಗಳಲ್ಲಿ ಇಡಲಾಗುತ್ತಿದೆ ಎಂದು ದೇರ್ ಅಲ್-ಬಾಲಾಹ್‌ನಲ್ಲಿರುವ ಶುಹಾದಾ ಅಲ್-ಅಕ್ಸಾ ಆಸ್ಪತ್ರೆಯ ಡಾ. ಯಾಸರ್ ಅಲಿ ಹೇಳಿದ್ದಾರೆ.
ಪ್ಯಾಲಿಸ್ತೇನ್‌ ದೇಶದ ಭಯೋತ್ಪಾದಕ ಗುಂಪು ಹಮಾಸ್‌ಅನ್ನು ಮಟ್ಟಹಾಕುವ ನಿಟ್ಟಿನಲ್ಲಿ ಇಸ್ರೇಲ್‌ ಕಳೆದ 10 ದಿನಗಳಿಂದ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವೈಮಾನಿಕ ದಾಳಿಯನ್ನು ನಡೆಸುತ್ತಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ