ಮಂಗಳೂರು: ವಂದೇ ಭಾರತ್ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ
ಮಂಗಳೂರು: ವಂದೇ ಭಾರತ್ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ
ಕರಾವಳಿ ಜನರ ಬಹುನಿರೀಕ್ಷೆಯ ಮಂಗಳೂರು-ಮಡ್ಗಾಂವ್ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಸಂಚಾರಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕರು ಹಾಗೂ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟಿರುವ ಈ ರೈಲು ಮಧ್ಯಾಹ್ನ 1:15ರ ವೇಳೆಗೆ ಮಡಗಾಂವ್ ತಲುಪುವ ನಿರೀಕ್ಷೆಯಿದೆ. ಮಧ್ಯಾಹ್ನ 1:45ಕ್ಕೆ ಮಡಗಾಂವ್ ನಿಂದ ವಾಪಾಸ್ ಹೊರಟು ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ.
ಈ ರೈಲಿಗೆ ಉಡುಪಿ & ಕಾರವಾರದಲ್ಲಿ ನಿಲುಗಡೆ ಇರುತ್ತದೆ. ಮಂಗಳೂರು – ಗೋವಾ ನಡುವಿನ ವಂದೇ ಭಾರತ್ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ, ಮಂಗಳವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ.