ಕುಂಬ್ರ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆ; ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ, ಸ್ವಚ್ಛಕ್ಕಿಲ್ಲ ಆದ್ಯತೆ
ಕುಂಬ್ರ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆ; ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ, ಸ್ವಚ್ಛಕ್ಕಿಲ್ಲ ಆದ್ಯತೆ
ಕುಂಬ್ರ ಡಿ.27: ಪುತ್ತೂರು ತಾಲೂಕಿನ ಕುಂಬ್ರ ಮುಖ್ಯ ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆಯನ್ನು ಕೇಳೋರೆ ಇಲ್ಲದಂತಾಗಿದೆ. ಸರಿಯಾದ ನಿರ್ವಹಣೆ ವ್ಯವಸ್ಥೆಯಿಲ್ಲದೆ, ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯದ ಪರಿಸರದಲ್ಲಿ ಕೊಳಕು ತ್ಯಾಜ್ಯಗಳು ತುಂಬಿದ್ದು ಕೆಟ್ಟವಾಸನೆ ಬರುತ್ತಿದೆ. ಶೌಚಾಲಯ ಒಳಗಡೆ ಗುಟ್ಕಾ, ಪಾನ್, ಎಳೆ ಅಡಿಕೆ ಜಗಿದು ಉಗುಳಿದ್ದು ಗೋಡೆಯಲ್ಲೆಲ್ಲ ಅದರದ್ದೆ ಕಲೆಗಳಾಗಿವೆ. ಸಿಗರೇಟು, ಗುಟ್ಕ ಪ್ಯಾಕೇಟುಗಳು ವಾಶ್ ಬೇಸಿನ್, ಗೋಡೆಗಳ ಮೂಲೆಗಳಲ್ಲಿ ಎಸೆಯಲಾಗಿದೆ.
‘ನಮ್ಮ ಹೆಜ್ಜೆ ಸ್ವಚ್ಛತೆಯ ಕಡೆಗೆ’ ಎಂಬುದು ಗೋಡೆ ಬರಹಗಳಲ್ಲಿ ಮಾತ್ರ ಕಾಣುತ್ತದೆಯೇ ಹೊರತು, ಪ್ರಾಯೋಗಿಕವಾಗಿ ಶೇ. 1ರಷ್ಟು ಸ್ವಚ್ಛತೆ ಕೂಡ ಇಲ್ಲಿ ಕಾಣುತ್ತಿಲ್ಲ! ನಿರ್ವಹಣೆ ಕಡೆಗೆ ಗಮನ ಕೊಡದಿರುವುದೇ ಇಂತಹ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕಾರ್ಯಪ್ರವೃತ್ತರಾಗಬೇಕಾಗಿದೆ.