• 22 ನವೆಂಬರ್ 2024

ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ : ಯಶಸ್ವಿ ಗುರಿ ತಲುಪಿದ ‘ಆದಿತ್ಯ L-1’

 ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ : ಯಶಸ್ವಿ ಗುರಿ ತಲುಪಿದ ‘ಆದಿತ್ಯ L-1’
Digiqole Ad

ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ : ಯಶಸ್ವಿ ಗುರಿ ತಲುಪಿದ ‘ಆದಿತ್ಯ L-1’

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿ ಇತಿಹಾಸ ಬರೆದಿದ್ದ ಇಸ್ರೋ ಮತ್ತೊಂದು ಮಹತ್ವದ ಐತಿಹಾಸಿಕ ಸಾಧನೆ ಮಾಡಿದ್ದು, ಆದಿತ್ಯ ಎಲ್-1 ಯಶಸ್ವಿಯಾಗಿ ಗುರಿ ತಲುಪಿದೆ.

ಸೂರ್ಯನಿಂದ ಕೆಲವೇ ದೂರದ ಲ್ಯಾಂಗ್ರೇಜ್ ಪಾಯಿಂಟ್ ನಲ್ಲಿ ಇಸ್ರೋ ನೌಕೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಬಾಹ್ಯಾಕಾಶ ಸಂಸ್ಥೆಯ 5 ವರ್ಷಗಳ ಪರಿಶ್ರಮ ಫಲ ನೀಡಿದೆ.

ಇಸ್ರೋ ಸಂಸ್ಥೆ ಕಳೆದ ವರ್ಷ ಸೆ.2ರಂದು ಸೂರ್ಯನ ಕಕ್ಷೆಯತ್ತ ಉಡಾಯಿಸಿದ್ದ ಆದಿತ್ಯ ಎಲ್-1 ಉಪಗ್ರಹವು ಲಗ್ರೇಂಜಿಯನ್ ಪಾಯಿಂಟ್(ಎಲ್ ಪಾಯಿಂಟ್) ಅನ್ನು ಇಂದು ಸಂಜೆ ತಲುಪುವಲ್ಲಿ ಯಶಸ್ವಿಯಾಗಿದೆ. ಎಲ್-1 ಪಾಯಿಂಟ್ ಭೂಮಿಯಿಂದ ಸುಮಾರು 15 ಲಕ್ಷ ಕಿಮೀ. ದೂರದಲ್ಲಿದ್ದು, ಆ ಪ್ರದೇಶ ಭೂಮಿ-ಸೂರ್ಯನಿಗೆ ಸಮನಾಂತರದ ಪಾಯಿಂಟ್ ಆಗಿದ್ದು ಅದರ ಆಚೆಗೆ ಹೋಗುವುದು ಅಸಾಧ್ಯ. ಆದಿತ್ಯ ಎಲ್-1 ಉಪಗ್ರಹ ಈ ಕಕ್ಷೆಯಲಿದ್ದು ಮುಂದಿನ 5ವರ್ಷ ಸೂರ್ಯನಿಂದ ಹೊರ ಬರುವ ಕ್ಷಕಿರಣಗಳು, ಸೌರಜ್ವಾಲೆ/ಸೌರ ಮಾರುತಗಳು & ಅದರ ಅಪಾಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಎಲ್1 ಪಾಯಿಂಟ್ ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರ ಭಾಗವಾಗಿದೆ. ಇಲ್ಲಿಂದ, ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಆದಿತ್ಯ ಎಲ್1 ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಆದಿತ್ಯ ಎಲ್1 ಅಧ್ಯಯನ ನಡೆಸಲಿದೆ. ಆದಿತ್ಯ ಎಲ್1 ನಾಲ್ಕು ಪೆಲೋಡ್‍ಗಳನ್ನು ಹೊಂದಿದ್ದು, ಅಲ್ಲಿಂದ ನೇರವಾಗಿ ಇಸ್ರೋಗೆ ಮಾಹಿತಿ ರವಾನಿಸಲಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ