ಜಾಲ್ಸೂರು: ಬಸ್ ನಿಲುಗಡೆ ನಾಮಫಲಕ ಅಳವಡಿಕೆ
ಜಾಲ್ಸೂರು: ಬಸ್ ನಿಲುಗಡೆ ನಾಮಫಲಕ ಅಳವಡಿಕೆ
ಜಾಲ್ಸೂರು, ಜ.24: ಜಾಲ್ಸೂರು ಮುಖ್ಯ ಪೇಟೆಯಲ್ಲಿನ ಬಸ್ ನಿಲ್ದಾಣದ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಗ್ರಾ.ಪಂ. ವತಿಯಿಂದ ‘ಬಸ್ ನಿಲುಗಡೆ’ ನಾಮಫಲಕವನ್ನು ಅಳವಡಿಸಲಾಯಿತು. ಪ್ರಯಾಣಿಕರು ಕಾಯುತ್ತಿದ್ದ ಜಾಗದಲ್ಲಿ ಬಸ್ಸುಗಳು ನಿಲ್ಲದೆ, ಮುಂದಕ್ಕೆ ಓಡಿ ಹೋಗಿ ಬಸ್ಸ್ ಹತ್ತಬೇಕಾದ ಪರಿಸ್ಥಿತಿಯಿತ್ತು. ಈ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು. ಶೀಘ್ರ ಸ್ಪಂದಿಸಿದ ಗ್ರಾ.ಪಂ. ಇದೀಗ ಕಜೆಗದ್ದೆ ಕಾಂಪ್ಲೆಕ್ಸ್ ಬಳಿ ‘ಬಸ್ ನಿಲುಗಡೆ’ ನಾಮಫಲಕ ಅಳವಡಿಸಿದೆ.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ತಿರುಮಲೇಶ್ವರಿ ಅರ್ಭಡ್ಕ, ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸದಸ್ಯರುಗಳಾದ ಎನ್. ಎಂ. ಸತೀಶ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಶಿವಪ್ರಸಾದ್ ನೀರಬಸಿರು, ಸಾವಿತ್ರಿ ಅಡ್ಕಾರುಬೈಲು, ಗೀತಾ ಚಂದ್ರಹಾಸ ಅರ್ಭಡ್ಕ, ಅಂಬಿಕಾ ಕುಕ್ಕಂದೂರು, ಈಶ್ವರ ನಾಯ್ಕ ಸೋಣಂಗೇರಿ, ಜಾಲ್ಸೂರು ಬಿ. ಎಂ. ಎಸ್. ಅಟೋಚಾಲಕ ಸಂಘದ ಅಧ್ಯಕ್ಷ ಗೋಪಾಲ ಅಡ್ಕಾರುಪದವು, ಕಜೆಗದ್ದೆ ಕಾಂಪ್ಲೆಕ್ಸ್ ನ ವರ್ತಕರು, ಸ್ಥಳೀಯ ಅಟೋರಿಕ್ಷಾ ಚಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.