ಕುಂದಾಪುರದಲ್ಲಿ ತುಳುವ ಬೆರ್ಮೆರ್ ರ ಹಳೆ ವಿಗ್ರಹ ಪತ್ತೆ
ಕುಂದಾಪುರದಲ್ಲಿ ತುಳುವ ಬೆರ್ಮೆರ್ ರ ಹಳೆ ವಿಗ್ರಹ ಪತ್ತೆ
ಕುಂದಾಪುರದ ಬಸ್ರೂರು ಮಾರ್ಗೋಳಿ ಪಾಳುಬಿದ್ದ ಚಿತ್ತೇರಿ ಬ್ರಹ್ಮಗುಂಡದಲ್ಲಿ ತುಳು ನಾಡ ಸಿರಿಯ ಬದುಕಿನ ಪೂರ್ವಾಧ ಭಾಗದ ಪ್ರಾಚೀನ ಕಾಲದ ಬ್ರಹ್ಮ (ಬೆರ್ಮರ್) ಮೂರ್ತಿ ಈ ಹಿಂದೆ ಪತ್ತೆಯಾಗಿತ್ತು. ಈ ಹಿಂದೆ ಬ್ರಹ್ಮ ಮೂರ್ತಿಗೂ ಆರಾಧನೆ ಮಾಡುತ್ತಿದ್ದರು ಅಂತ ಹೇಳುವುದಕ್ಕೆ ಈ ಮೂರ್ತಿಯೇ ಸಾಕ್ಷಿಯಾಗಿದೆ.
ಕದುರೆಯೇರಿದ ಯೋಧನಂತಿದೆ ಈ ಮೂರ್ತಿ!
ಬ್ರಹ್ಮ ದೇವರಿಗೆ ಎಲ್ಲಿಯೂ ಹೆಚ್ಚು ದೇವಾಲಯಗಳಿಲ್ಲ. ಸೃಷ್ಟಿಕರ್ತ ಬ್ರಹ್ಮನಾದ್ರೂ ಭೂಮಿ ಮೇಲೆ ಬ್ರಹ್ಮ ದೇವರನ್ನು ಪೂಜೆ ಮಾಡುವವರ ಸಂಖ್ಯೆ ಅತೀ ವಿರಳ ಎನ್ನಬಹುದು. ಈ ಪತ್ತೆಯಾದ ಬ್ರಹ್ಮನ ಶಿಲಾಮೂರ್ತಿ ಕುದುರೆಯೇರಿದ ಯೋಧನಂತಿದ್ದು, ಕೈಯಲ್ಲಿ ಛಾವಟಿ ಹಿಡಿದಿ ಭಂಗಿಯಲ್ಲಿದೆ.
ಈ ಸುದ್ದಿ ಓದಿದ್ದೀರಾ?: ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ ‘ಬ್ಲಿಂಕ್ ಡಿಟೆಕ್ಟಿಂಗ್’ ಅಳವಡಿಕೆ
ವಿಗ್ರಹದ ವಿಶೇಷತೆ ಒಂದೆರೆಡಲ್ಲ!
ಕಾಲಬಳಿಯಲ್ಲಿ ಹುಲಿಯಿದೆ. ಕಿರೀಟ ಧರಿಸಿದ್ದು, ಯೋಗ್ಯವಾದ ಉಡುಗೆ ತೊಡಿಗೆ ಧರಿಸಿದ್ದಾನೆ. ಕುದುರೆ ಏರಿದ ಬ್ರಹ್ಮನ ಕೈಯಲ್ಲಿ ಛಾವಟಿಯಿದ್ದು, ಪ್ರಭಾವಳಿಯಲ್ಲಿ ನಾಗನಂತೆ ಗುರುತಿಸುವ ಕೆತ್ತನೆ ಇದೆ. ಕಾಲಬಳಿ ಹುಲಿ ಸಹಿತ ಈ ಎಲ್ಲಾ ಕುರುಹುಗಳು ಜೈನ ಬ್ರಹ್ಮ ಹಾಗೂ ಯಕ್ಷ ಬ್ರಹ್ಮನ ಕಲ್ಪನೆಯಿಂದ ಭಿನ್ನವಾಗಿದ್ದು ಪುರಾತನ ತುಳು ಕ್ರಮ ಎಂದು ಗುರುತಿಸಬಹುದು. ಲಾಂಛನದಲ್ಲಿ ಅವಳಿ ನಾಗನ ಹೆಡೆಯಿದ್ದು, ನಾಗ ಹಾಗೂ ಬ್ರಹ್ಮನ ಸಂಯುಕ್ತವಾಗಿ ಆರಾಧನೆ ಮಾಡುತ್ತಿರುವ ಪದ್ದತಿಗೆ ಪೂರಕವಾಗಿದೆ.
8ನೇ ಶತಮಾನದ ಶಿಲಾಮೂರ್ತಿ!
ಸುಮಾರು ಎಂಟನೇ ಶತಮನಾದ ಕಾಲದ ಶಿಲಾಮೂರ್ತಿ ಎಂದು ಹೇಳಲಾಗಿದೆ. ಮಾರ್ಗೋಳಿ ಪಾಳುಬಿದ್ದ ಕಟ್ಟಡ ಬಳಿ ಮತ್ತಷ್ಟು ಉತ್ಖನನ ನಡೆಸಿದರೆ ಮತ್ತಷ್ಟು ಐತಿಹಾಸಿಕ ಕರುಹುಗಳು ಪತ್ತೆಯಾಗುವ ಸಾಧ್ಯತೆ ಇದೆ. ಇದೇ ಜಾಗದಲ್ಲಿ ಈ ಹಿಂದೆ ಸಾಕಷ್ಟು ಮೂರ್ತಿಗಳು, ವಿಗ್ರಹಗಳು ಪತ್ತೆಯಾಗಿದ್ದವಂತೆ.
ಭೂಮಿ ಮೇಲೆ ಬ್ರಹ್ಮದೇವನನ್ನು ಪೂಜಿಸಲ್ಲ ಯಾಕೆ? ಬ್ರಹ್ಮನ ನಾಲ್ಕು ಶಿರಗಳೂ ನಾಲ್ಕು ವೇದಗಳ ಸಂಕೇತ. ಬ್ರಹ್ಮನ ಐದನೇ ಶಿರವನ್ನು ಶಿವನು ಕತ್ತರಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಬ್ರಹ್ಮನು ಸೃಷ್ಟಿಕಾರ್ಯದ ವೇಳೆ ಶತರೂಪ ಎಂಬ ಸುಂದರಿಯನ್ನು ದೇವತೆಯಾಗಿ ಸೃಷ್ಟಿಸಿದ. ಅವಳ ರೂಪವನ್ನು ನೋಡಿ ಬ್ರಹ್ಮನು ಮೋಹಗೊಳ್ಳುತ್ತಾನೆ. ಆಕೆ ಬ್ರಹ್ಮನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾಳೆ. ಆದರೂ ನಾಲ್ಕು ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮನು ತಲೆಯೊಂದನ್ನು ಸೃಷ್ಟಿಸುತ್ತಾನೆ. ನಾಲ್ಕು ದಿಕ್ಕುಗಳಲ್ಲೂ ನೋಡಲು ನಾಲ್ಕು ತಲೆ ಹಾಗೂ ಇವುಗಳ ಮೇಲೊಂದು ತಲೆಯನ್ನು ಹೊಂದಿದ್ದ ಬ್ರಹ್ಮನಿಗೆ ತಾನೇ ಸೃಷ್ಟಿಸಿದ ಶತರೂಪಳನ್ನು ಮೋಹಿಸುವುದು ತಪ್ಪೆಂದು ಹೇಳುತ್ತಾನೆ. ಆದರೆ ಬ್ರಹ್ಮನು ಒಪ್ಪದಿದ್ದಾಗ ಶಿವನು ಬ್ರಹ್ಮನನ್ನು ನಿಯಂತ್ರಿಸಲು ಐದನೇ ತಲೆಯನ್ನು ಕತ್ತರಿಸಿ, ಭೂಲೋಕದಲ್ಲಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದು ಶಾಪ ನೀಡುತ್ತಾನೆ. ಆದರೆ ಈ ವಿಗ್ರಹ ಪತ್ತೆಯಾಗಿರೋದು ಬ್ರಹ್ಮ ದೇವರಿಗೂ ಭೂಮಿಯಲ್ಲಿ ಆರಾಧನೆ ನಡೆಯುತ್ತಿತ್ತು ಅಂತ ಹೇಳುತ್ತವೆ. ಹಾಗಂತ ಈ ಪುರಾತನ ವಿಗ್ರಹ ಸಿಕ್ಕಿರೋದು ಈಗಲ್ಲ. 2019ರ ಮೇ ತಿಂಗಳಲ್ಲಿ ಈ ಜಾಗದಲ್ಲಿ ಈ ಬ್ರಹ್ಮ ದೇವರ ವಿಗ್ರಹ ಪತ್ತೆಯಾಗಿರುತ್ತದೆ.