• 5 ಡಿಸೆಂಬರ್ 2024

ಪೆಟ್ರೋಲ್, ಡೀಸೆಲ್ ತೆರಿಗೆ ದರ ಹೆಚ್ಚಿಸಿದ ರಾಜ್ಯಸರ್ಕಾರ 

 ಪೆಟ್ರೋಲ್, ಡೀಸೆಲ್ ತೆರಿಗೆ ದರ ಹೆಚ್ಚಿಸಿದ ರಾಜ್ಯಸರ್ಕಾರ 
Digiqole Ad

ಪೆಟ್ರೋಲ್, ಡೀಸೆಲ್ ತೆರಿಗೆ ದರ ಹೆಚ್ಚಿಸಿದ ರಾಜ್ಯಸರ್ಕಾರ 

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೆಟ್ರೋಲ್‌ ಚಿಲ್ಲರೆ ಮಾರಾಟದ ಬೆಲೆ ಇಂದಿನಿಂದ ₹102.85 ಹಾಗೂ ಡೀಸೆಲ್ ಬೆಲೆ ₹88.93 ಆಗುತ್ತದೆ. ಈ ದರವು, ಸಾಗಣೆ ವೆಚ್ಚದ ಆಧಾರದಲ್ಲಿ ರಾಜ್ಯದ ಬೇರೆಬೇರೆ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಾಗಲಿದೆ.ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ದರ ಇಳಿಸಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ₹2ರಷ್ಟು ಇಳಿಕೆಯಾಗಿತ್ತು.ಈ ಹಿಂದೆ ಇದ್ದ ಪೆಟ್ರೋಲ್ ತೆರಿಗೆ ದರ 25.92% ನಿಂದ 29.84% ಗೆ ಏರಿಕೆಯಾಗಿದ್ದು ಈಗ 3.9% ಹೆಚ್ಚಳವಾಗಲಿದೆ. ಡೀಸೆಲ್ ತೆರಿಗೆ ದರ ಈ ಹಿಂದೆ 14.34% ಇದ್ದಿದ್ದು 18.44%ಗೆ ಏರಿಕೆಯಾಗಿದ್ದು ಈಗ 4.1% ಹೆಚ್ಚಳವಾಗಲಿದೆ.

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ