• 3 ಡಿಸೆಂಬರ್ 2024

ಪಿಲಿಕುಳ ಕಂಬಳ ಮುಂದೂಡಿಕೆ ಸಾಧ್ಯತೆ !

 ಪಿಲಿಕುಳ ಕಂಬಳ ಮುಂದೂಡಿಕೆ ಸಾಧ್ಯತೆ !
Digiqole Ad

ಪಿಲಿಕುಳ ಕಂಬಳ ಮುಂದೂಡಿಕೆ ಸಾಧ್ಯತೆ !

ಜಿಲ್ಲಾಡಳಿತ ವತಿಯಿಂದ ಆಯೋಜಿಸಲು ಉದ್ದೇಶಿಸಲಾಗಿರುವ ಬಹು ನಿರೀಕ್ಷಿತ ಪಿಲಿಕುಳ “ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳ ಮೂಡುಶೆಡ್ಡೆ ಪಂಚಾಯತ್‌ ಚುನಾವಣೆ ಕಾರಣಕ್ಕೆ ಮುಂದೂಡಿಕೆಯಾಗುವ ಬಹುತೇಕ ಸಾಧ್ಯತೆಯಿದೆ.
ಹತ್ತು ವರ್ಷಗಳ ಬಳಿಕ ಇದೀಗ ನ.17 ಮತ್ತು 18ರಂದು ಪಿಲಿಕುಳದ ಜೋಡುಕರೆಯಲ್ಲಿ ಕಂಬಳ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಈ ನಡುವೆ ಪಿಲಿಕುಳ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
ನ.23ರಂದು ಚುನಾವಣೆ ನಡೆಯಲಿದ್ದು, ಇದರಿಂದಾಗಿ ಕಂಬಳ ಆಯೋಜಿಸಿದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.ಆದ್ದರಿಂದ ಈ ಬಗ್ಗೆ ನ.11ರಂದು ಜಿಲ್ಲಾಡಳಿತ, ಕಂಬಳ ಸಮಿತಿಯವರ ಸಭೆ ನಡೆಯಲಿದ್ದು, ಇದರಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ಕಂಬಳ ಮುಂದೂಡಿಕೆಯಾದರೆ ನ.17ರಂದು ಪೂರ್ವಭಾವಿ ಕುದಿ ಕಂಬಳ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಕಂಬಳದ ಮುಂದಿನ ದಿನಾಂಕವೂ ಅಂತಿಮಪಡಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ಉದಯವಾಣಿ’ ಜತೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಅವರು ಪಂಚಾಯತ್‌ ಚುನಾವಣೆ ಹಿನ್ನೆಲೆ ಯಲ್ಲಿ ಪಿಲಿಕುಳದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕಂಬಳ ಮುಂದೂಡಬೇಕಾದ ಅನಿವಾರ್ಯತೆ ಇದೆ. ಶಾಸಕರು, ಕಂಬಳ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳ ಜತೆ ಚರ್ಚಿಸಿ, ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದರು.

Digiqole Ad

ಈ ಸುದ್ದಿಗಳನ್ನೂ ಓದಿ