ಅಬುಧಾಬಿಯಲ್ಲಿ ಐಐಟಿ ದೆಹಲಿ ಕ್ಯಾಂಪಸ್ ತೆರೆಯಲು ಭಾರತ ಮತ್ತು ಯುಎಇ ಒಪ್ಪಂದ
ಅಬುಧಾಬಿಯಲ್ಲಿ ಐಐಟಿ ದೆಹಲಿ ಕ್ಯಾಂಪಸ್ ತೆರೆಯಲು ಭಾರತ ಮತ್ತು ಯುಎಇ ಒಪ್ಪಂದ
ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಅಬುಧಾಬಿಯ ಶಿಕ್ಷಣ ಮತ್ತು ಜ್ಞಾನ ಇಲಾಖೆ ಶನಿವಾರ ಗಲ್ಫ್ ದೇಶದಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಸ್ಥಾಪನೆ ಸಂಬಂಧ ಒಪ್ಪಂದಕ್ಕೆ ಸಹಿ ಮಾಡಿದೆ.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯು ಐಐಟಿ ಮದ್ರಾಸ್ ನಂತರ ವಿದೇಶದಲ್ಲಿ ಕ್ಯಾಂಪಸ್ ಸ್ಥಾಪಿಸುತ್ತಿರುವ ಎರಡನೇ ಐಐಟಿಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲೇ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಐಐಟಿ ಮದ್ರಾಸ್ ತಾಂಜಾನಿಯಾದ ಜಂಜಿಬಾರ್‌ನಲ್ಲಿ ತನ್ನ ಕ್ಯಾಂಪಸ್ ತೆರೆಯಲು ಎಂಒಯುಗೆ ಸಹಿ ಹಾಕಿದೆ. ಭಾರತ ನಾವೀನ್ಯತೆ ಮತ್ತು ಪರಿಣತಿಗೆ ಒಂದು ಉದಾಹರಣೆಯಾಗಿದೆ. ಇದು ಭಾರತದ ಶಿಕ್ಷಣ, ಅಂತರಾಷ್ಟ್ರೀಯೀಕರಣದಲ್ಲಿ ಹೊಸ ಅಧ್ಯಾಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಟ್ವೀಟ್ ಮಾಡಿದರೆ.ಸೆಪ್ಟೆಂಬರ್ 2024 ರಿಂದ ಪದವಿ ಕೋರ್ಸ್ ಗಳನ್ನು ಆರಂಭಿಸಲಿದೆ ಹಾಗೂ ಮುಂದಿನ ವರ್ಷ ಜನವರಿಯಿಂದ ಐಐಟಿ ದೆಹಲಿಯು, ಅಬುಧಾಬಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಿದೆ.