• 22 ನವೆಂಬರ್ 2024

ಜಿ 20 ಶೃಂಗಸಭೆಗೆ ಸಿದ್ಧವಾಗಿದೆ ಅತ್ಯಾಧುನಿಕ ಮಾಧ್ಯಮ ಕೇಂದ್ರ

Digiqole Ad

ಜಿ 20 ಶೃಂಗಸಭೆಗೆ ಸಿದ್ಧವಾಗಿದೆ ಅತ್ಯಾಧುನಿಕ ಮಾಧ್ಯಮ ಕೇಂದ್ರ

ಪ್ರಗತಿ ಮೈದಾನದ ಐಇಸಿಸಿ ಸಂಕೀರ್ಣದಲ್ಲಿ ನಿರ್ಮಿಸಲಾದ ‘ಭಾರತ ಮಂಟಪ ದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ 25 ಕ್ಕೂ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಜಿ20 ಶೃಂಗಸಭೆಗೆ ನವದೆಹಲಿಯಲ್ಲಿ ಭರದಿಂದ ಸಿದ್ಧತೆ ಸಾಗಿದೆ. ಅತ್ಯಾಧುನಿಕ ಕೇಂದ್ರವು ವಿಶಾಲವಾದ ಸಭಾಂಗಣಗಳು, ಒಂಬತ್ತು ಕೆಲಸದ ವಲಯಗಳು, ಸ್ಟುಡಿಯೋಗಳು, ನಾಲ್ಕು ಮಾಧ್ಯಮ ಬ್ರೀಫಿಂಗ್ ಹಾಲ್‌ಗಳು, ಆರು ಸಂದರ್ಶನ ಕೊಠಡಿಗಳು ಮತ್ತು ಸುಮಾರು 1,300 ವರ್ಕ್‌ಸ್ಟೇಷನ್‌ಗಳನ್ನು ಹೊಂದಿದೆ. ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ20 ಶೃಂಗಸಭೆಗೆ ಎರಡು ದಿನಗಳ ಶೃಂಗಸಭೆಯಲ್ಲಿ 20 ಸದಸ್ಯ ರಾಷ್ಟ್ರಗಳು ಸೇರಿದಂತೆ 40 ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಿ20 ಶೃಂಗಸಭೆಯನ್ನು ಪ್ರಗತಿ ಮೈದಾನದಲ್ಲಿರುವ ಅತ್ಯಾಧುನಿಕ ಭಾರತ್ ಮಂಡಪಂ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.ಭರದಿಂದ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಐಟಿಪಿಒ ಕಾಂಪ್ಲೆಕ್ಸ್‌ನಲ್ಲಿರುವ ಭವ್ಯವಾದ ಅಂತರರಾಷ್ಟ್ರೀಯ ಮಾಧ್ಯಮ ಕೇಂದ್ರದ ವಿಡಿಯೋ ತುಣುಕನ್ನು ಹಂಚಿಕೊಂಡಿದೆ. ಇದು ವಿಶ್ವದಾದ್ಯಂತದ ಸಾವಿರಾರು ಪತ್ರಕರ್ತರು ಮತ್ತು ಮಾಧ್ಯಮ ವ್ಯಕ್ತಿಗಳಿಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಮಾಧ್ಯಮ ಕೇಂದ್ರದ ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ, ಮುಂಬರುವ ಜಿ20 ಶೃಂಗಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಸ್ವಾಗತಿಸಲು ಸಿದ್ಧವಾಗಿರುವ ಅಂತಾರಾಷ್ಟ್ರೀಯ ಮಾಧ್ಯಮ ಕೇಂದ್ರದ ಒಂದು ನೋಟ ಇಲ್ಲಿದೆ. ಜಾಗತಿಕ ಮಾಧ್ಯಮ ಪ್ರತಿನಿಧಿಗಳಿಗೆ ಸ್ವಾಗತ ಎಂದು ಅವರು ಉಲ್ಲೇಖಿಸಿದ್ದಾರೆ. ಅತ್ಯಾಧುನಿಕ ಕೇಂದ್ರವು ವಿಶಾಲವಾದ ಸಭಾಂಗಣಗಳು, ಒಂಬತ್ತು ಕೆಲಸದ ಝೋನ್​ಗಳು, ಸ್ಟುಡಿಯೋಗಳು, ನಾಲ್ಕು ಮೀಡಿಯಾ ಬ್ರೀಫಿಂಗ್ ಹಾಲ್‌ಗಳು, ಆರು ಸಂದರ್ಶನ ಕೊಠಡಿಗಳು, ಸುಮಾರು 1,300 ವರ್ಕ್‌ಸ್ಟೇಷನ್‌ಗಳು ಮತ್ತು ಜಿ20 ಶೃಂಗಸಭೆಯನ್ನು ಕವರ್ ಮಾಡುವ ಪತ್ರಕರ್ತರಿಗಾಗಿ ತೆರೆದ ಕಾರ್ಯಸ್ಥಳಗಳನ್ನು ಹೊಂದಿದೆ.ಸುಮಾರು 2,700 ಕೋಟಿ ವೆಚ್ಚದಲ್ಲಿ ಭಾರತ ಮಂಟಪವನ್ನು ನಿರ್ಮಿಸಲಾಗಿದೆ.

ಇದು ಸುಮಾರು 123 ಎಕರೆ ಕ್ಯಾಂಪಸ್ ಪ್ರದೇಶವನ್ನು ಹೊಂದಿದೆ ಮತ್ತು ಇದು ದೇಶದ ಅತಿದೊಡ್ಡ ಎಂಐಸಿಇ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ವಿಶ್ವದಾದ್ಯಂತದ ಮಾಧ್ಯಮ ವ್ಯಕ್ತಿಗಳಿಗೆ ಆತಿಥ್ಯ ವಹಿಸಲು ಸಜ್ಜಾಗಿದೆ.ಜಗತ್ತಿನಾದ್ಯಂತದ ಮಾಧ್ಯಮ ವ್ಯಕ್ತಿಗಳನ್ನು ಹೋಸ್ಟ್ ಮಾಡಲು ಸಿದ್ಧವಾಗುತ್ತಿರುವ ಕೇಂದ್ರವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಯುಕೆ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇತರರು 18 ನೇ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ