ವಿದ್ಯಾರ್ಥಿಗಳಿಗೆ ಬ್ರಿಟನ್ ವೀಸಾ ಶುಲ್ಕ ಏರಿಕೆ: ಅ.04 ರಿಂದ ಜಾರಿ
ವಿದ್ಯಾರ್ಥಿಗಳಿಗೆ ಬ್ರಿಟನ್ ವೀಸಾ ಶುಲ್ಕ ಏರಿಕೆ: ಅ.04 ರಿಂದ ಜಾರಿ
ಅಕ್ಟೋಬರ್ 4 ರಿಂದ ವೀಸಾ ಶುಲ್ಕಗಳನ್ನು ಹೆಚ್ಚಳ ಮಾಡಲು ಯುನೈಟೆಡ್ ಕಿಂಗ್ ಡಮ್ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ. ವಿದ್ಯಾಭ್ಯಾಸ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು 13 ಸಾವಿರ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಸ್ಟೂಡೆಂಟ್ ವೀಸಾ ಶುಲ್ಕವನ್ನು ಒಟ್ಟು 490 ಪೌಂಡ್ಸ್ ಗೆ ಏರಿಕೆ ಮಾಡಲಾಗಿದೆ.
ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಶಾಸನವನ್ನು ಅನುಸರಿಸಿ, UK ಗೃಹ ಕಛೇರಿಯು ಬದಲಾವಣೆಗಳ ಪ್ರಕಾರ ಆರು ತಿಂಗಳಿಗಿಂತ ಕಡಿಮೆ ಅವಧಿಯ ಭೇಟಿ ವೀಸಾದ ವೆಚ್ಚವು 115 ಗ್ರೇಟ್ ಬ್ರಿಟನ್ ಪೌಂಡ್ (ಜಿಬಿಪಿ) ಗಳಿಗೆ ಏರುತ್ತದೆ ಮತ್ತು ಬ್ರಿಟನ್ ವಿದೇಶಿ ವಿದ್ಯಾರ್ಥಿ ವೀಸಾಕ್ಕೆ ಅರ್ಜಿ ಸಲ್ಲಿಸುವ ಶುಲ್ಕ 490 ಜಿಬಿಪಿಗೆ ಏರಿಕೆಯಾಗುತ್ತದೆ ಇದು ದೇಶದೊಳಗಿನ ಅಪ್ಲಿಕೇಶನ್‌ಗಳಿಗೆ ವಿಧಿಸಲಾದ ಮೊತ್ತಕ್ಕೆ ಸಮನಾಗಿರುತ್ತದೆ.
ದೇಶದ ಸಾರ್ವಜನಿಕ ವಲಯದ ವೇತನ ಹೆಚ್ಚಳವನ್ನು ಪೂರೈಸಲು ವೀಸಾ ಅರ್ಜಿದಾರರಿಂದ ಯುಕೆ ರಾಜ್ಯ-ನಿಧಿಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಗೆ ಪಾವತಿಸುವ ಶುಲ್ಕಗಳು ಮತ್ತು ಆರೋಗ್ಯ ಹೆಚ್ಚುವರಿ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ಜುಲೈನಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ ನಂತರ ಪರಿಷ್ಕರಣೆ ಜಾರಿಯಾಗಿದೆ.
2023ನೇ ಸಾಲಿನಲ್ಲಿ ಭಾರತೀಯರಿಗೆ ಒಟ್ಟು 1,42,848 ಪ್ರಾಯೋಜಿತ ಅಧ್ಯಯನ ವೀಸಾವನ್ನು ನೀಡಲಾಗಿದೆ. ಇದು 2022ರ ಜೂನ್ ಅಂತ್ಯಕ್ಕೆ ಹೋಲಿಸಿದಲ್ಲಿ 49,883 ವೀಸಾ ಹೆಚ್ಚಳ ಮಾಡಿದಂತಾಗಿದೆ ಎಂದು ಬ್ರಿಟನ್ ಮಾಹಿತಿ ನೀಡಿದೆ.