• 8 ಸೆಪ್ಟೆಂಬರ್ 2024

HAL ನಿಂದ ಮೊದಲ LCA ತರಬೇತಿ ವಿಮಾನ ವಾಯುಸೇನೆಗೆ ಹಸ್ತಾಂತರ

 HAL ನಿಂದ ಮೊದಲ LCA ತರಬೇತಿ ವಿಮಾನ ವಾಯುಸೇನೆಗೆ ಹಸ್ತಾಂತರ
Digiqole Ad

HAL ನಿಂದ ಮೊದಲ LCA ತರಬೇತಿ ವಿಮಾನ ವಾಯುಸೇನೆಗೆ ಹಸ್ತಾಂತರ

ಆತ್ಮನಿರ್ಭರ್​ ಯೋಜನೆಯಡಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿರುವ ಮೊದಲ ಸುಧಾರಿತ ತೇಜಸ್​ ಲಘು ಯುದ್ಧ ವಿಮಾನವನ್ನು ಸೇನೆಗೆ ಬುಧವಾರ ಹಸ್ತಂತರಿಸಲಾಯಿತು. ಇದು ಎರಡು ಸೀಟಿನ ತರಬೇತಿ ವಿಮಾನವಾಗಿದ್ದು,  83 ಯುದ್ಧ ವಿಮಾನಗಳ ತಯಾರಿಕೆಗೆ ಕೇಂದ್ರ ಸರ್ಕಾರ, ಎಚ್​ಎಎಲ್​ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮಾತನಾಡಿ, ಕೆಲವು ವರ್ಷಗಳ ಹಿಂದೆ ಯುದ್ಧವಿಮಾನಗಳಿಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದ್ದೆವು. ಆತ್ಮನಿರ್ಭರ್ ಯೋಜನೆಯಡಿ ಎಚ್​ಎಎಲ್​ ಜೊತೆಗೆ ಒಪ್ಪಂದ ಮಾಡಿಕೊಂಡು ಸೇನೆಗೆ ವಿಮಾನಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಬೆಂಗಳೂರಿನ ಎಚ್‌ಎಎಲ್‌ ಈಗಾಗಲೇ 123 ವಿಮಾನಗಳ ನಿರ್ಮಾಣಕ್ಕೆ ಆದೇಶವನ್ನು ಸ್ವೀಕರಿಸಿದೆ. ಅದರಲ್ಲಿ 32 ಯುದ್ಧವಿಮಾನಗಳನ್ನು ಭಾರತೀಯ ವಾಯಪಡೆಗೆ ಸರಬರಾಜು ಮಾಡಲಾಗಿದೆ. ಎಲ್‌ಸಿಎ ತೇಜಸ್ ಟ್ವಿನ್ ಸೀಟರ್ ಹಗುರವಾದ, ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವ ಮಲ್ಟಿಪಲ್‌ ರೋಲ್‌ನ 4.5 ಪೀಳಿಗೆಯ ವಿಮಾನ ಇದು ಆಗಿದೆ.

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ