• 21 ಮೇ 2024

ಇಸ್ರೇಲಿನ ಸೈನಿಕರಿಗೆ ಮೆಕ್‌ಡೊನಾಲ್ಡ್ಸ್​​ನಿಂದ ಉಚಿತ ಆಹಾರ!ಮೆಕ್‌ಡೊನಾಲ್‌ಗೆ ಬಹಿಷ್ಕಾರದ ಬಿಸಿ….

 ಇಸ್ರೇಲಿನ ಸೈನಿಕರಿಗೆ ಮೆಕ್‌ಡೊನಾಲ್ಡ್ಸ್​​ನಿಂದ ಉಚಿತ ಆಹಾರ!ಮೆಕ್‌ಡೊನಾಲ್‌ಗೆ ಬಹಿಷ್ಕಾರದ ಬಿಸಿ….
Digiqole Ad

ಇಸ್ರೇಲಿನ ಸೈನಿಕರಿಗೆ ಮೆಕ್‌ಡೊನಾಲ್ಡ್ಸ್​​ನಿಂದ ಉಚಿತ ಆಹಾರ: ಮೆಕ್‌ಡೊನಾಲ್‌ಗೆ ಬಹಿಷ್ಕಾರದ ಬಿಸಿ….!

ಇಸ್ರೇಲ್‌ ಸೈನಿಕರಿಗೆ ಉಚಿತ ಊಟ ನೀಡೋದಾಗಿ ಮೆಕ್‌ಡೊನಾಲ್ಡ್ಸ್‌ನ ಇಸ್ರೇಲ್‌ ಘಟಕ ಘೋಷಣೆ ಮಾಡಿದೆ. ಪ್ರತಿದಿನ ಸಾವಿರಾರು ಜನರಿಗೆ ಊಟ ತಯಾರಿಸಲಾಗುತ್ತಿದ್ದು, ಇದಕ್ಕಾಗಿಯೇ ವಿಶೇಷವಾಗಿ 5 ರೆಸ್ಟೋರೆಂಟ್ ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದೆ. ಇದಕ್ಕೆ ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸೈನಿಕರಿಗೆ ಆಹಾರವನ್ನು ನೀಡುವುದನ್ನು ವಿರೋಧಿಸಿದ ಕೆಲ ನೆಟ್ಟಿಗರು ‘Boycott McDonald’s’ ಎಂದು ಟ್ವಿಟ್ ಮಾಡುತ್ತಿದ್ದಾರೆ. ಇಸ್ರೇಲಿ ಪಡೆಗಳಿಗೆ ಉಚಿತ ಆಹಾರವನ್ನು ಒದಗಿಸುವ ಮೆಕ್ ಡೊನಾಲ್ಡ್ ಕ್ರಮದ ನಂತರ ಅಕ್ಟೋಬರ್ 13 ರಂದು ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸ್ಪಿನ್ನೀಸ್ ನಲ್ಲಿರುವ ಮೆಕ್‌ಡೊನಾಲ್ಡ್ ಮೇಲೆ ಪ್ಯಾಲೇಸ್ಟಿನಿಯನ್ ಗುಂಪುಗಳು ದಾಳಿ ಮಾಡಿವೆ.

ಈ ಹಿನ್ನಲೆಯಲ್ಲಿ ಮೆಕ್‌ಡೊನಾಲ್ಡ್ ಒಮಾನ್ X ನಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್ ಅನ್ನು ಪೋಸ್ಟ್ ಮಾಡಿದೆ. ಗಾಜಾದಲ್ಲಿನ ಪ್ರಯತ್ನಗಳಿಗೆ ಸಹಾಯ ಮಾಡಲು ಕಂಪನಿಯು 100,000 ದೇಣಿಗೆ ನೀಡಿದೆ ಎಂದು ಮೆಕ್‌ಡೊನಾಲ್ಡ್ಸ್ ಹೇಳಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!