ಅಮ್ಮಾ….
ಅಮ್ಮಾ….
ಕರುಣೆಯ ಕಡಲು ಅಮ್ಮನ ಒಡಲು;
ಅಗಾಧ ಶಕ್ತಿಯ ನಿನ್ನಯ ಮಡಿಲು;
ನನಗೆ ಸಾಧ್ಯವೇ ಅದರ ಆಳವಳೆಯಲು;
ಉಸಿರ ಕೊಟ್ಟು ಜನ್ಮ ನೀಡಿದವಳೇ ಅವಳು;
ರಕ್ತ ಸುರಿದು ಹಾಲುಣಿಸಿದವಳೇ ಅವಳು;
ಹೆಸರನ್ನಿಟ್ಟು ಜಗವ ತೋರಿದವಳೇ ಅವಳು;
ಮುತ್ತನ್ನಿಟ್ಟು ತುತ್ತು ತಿನ್ನಿಸಿದವಳೇ ಅವಳು;
ತನಗಾಗಿ ಏನನ್ನು ಬಯಸದಿರುವವಳೇ ಅವಳು;
ಮಕ್ಕಳ ಹಿತಕ್ಕಾಗಿ ಪ್ರಾಣವನ್ನು ನೀಡುವವಳೇ ಅವಳು;
ಹಗಲಿರುಳೆನ್ನದೆ ಮಕ್ಕಳನ್ನು ಸಾಕುವವಳೇ ಅವಳು;
ಮಕ್ಕಳಿಗಾಗಿ ಏನೇ ಕಷ್ಟ ಬಂದರೂ ಸಹಿಸುವವಳೇ
ಅವಳು;
ಪ್ರತಿಯೊಂದು ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತವಳೇ ಅವಳು;
ಸಾಕಿ ಸಲುಹಿ ಬೆಳೆಸಿದವಳೇ ಅವಳು ;
ತನಗಾಗಿ ಏನನ್ನೂ ಕೂಡಿಡದವಳೇ ಅವಳು;
ಮಕ್ಕಳ ನಗುವಲ್ಲೇ ತನ್ನ ಖುಷಿಯನ್ನು ಕಾಣುವವಳೇ ಅವಳು;
ಪ್ರೀತಿ ಎಂಬ ಶಬ್ದಕ್ಕೆ ಜೀವ ತುಂಬಿದ ಅದ್ಭುತಳೇ ಅವಳು ;
ಜಗವೇ ಕಂಡಿರುವ ಮೊದಲ ಗುರುವೇ ಅವಳು;
ದೇವಿಯ ಪರೋಕ್ಷ ಸ್ವರೂಪವೇ ಅವಳು;
ನಮಗಾಗಿ ಇಡೀ ಜೀವನವನ್ನು ಮೀಸಲಿಟ್ಟವಳೇ ಅವಳು;
ಅವಳೆಂದರೆ…. ನನ್ನಯ ಮುದ್ದಿನ ಅಮ್ಮಾ
✍️ ಕಾವ್ಯಶ್ರೀ. ಎಸ್