ಏನಿದು…. ನೋವೇನಿದು…
ಏನಿದು ನೋವೇನಿದು…..
ನನ್ನ ತಾಯಿಯ ಪ್ರೀತಿ ಸೊಬಗಿದು….
ಹೆಣ್ಣಾಗಿ ಹುಟ್ಟಿದರೆ ಕುಲದ ಹೊರಗೆಂಬ ಕಟ್ಟುಪಾಡದು…..
ಹೇಗೆ ಬಾಳಲಿ ತಾಯಿಯ ಬಿಟ್ಟು ಅತ್ತೆ ಮನಿಯಲ್ಲಿ….
ಏನಿದು ನೋವೇನಿದು ನನ್ನ ತಾಯಿಯ ಪ್ರೀತಿ ಸೊಬಗಿದು…..
ಬೆಳಗಿನ ಜಾವ ಎದ್ದೇಳೆಂದು ಅವಳ ದನಿಯಿಲ್ಲ …
ಜೋರಾಗಿ ಮಾತಾಡಿದರೆ ….
ಸದ್ದಾಯಿತಲ್ಲೆಂಬ ಜರೆ ಇಲ್ಲ..
ಹೇಗಿರಲಿ ನಾನು, ಹೇಗೆಂದು ಚಿಂತೆ ಎನಗಿದು..
ಏನಿದು ನೋವೇನಿದು, ನನ್ನ ತಾಯಿಯ ಪ್ರೀತಿ ಸೊಬಗಿದು…..
ಊಟಕ್ಕೆಂದೇ ಕರೆಯುವಳು ಹತ್ತು ಬಾರಿ…
ಕೊಂಚ ಬಿಟ್ಟರೂ ಬಯ್ಯುವಳು ಸಾರಿ ಸಾರಿ…
ಜ್ವರ ಬಂದರೆ ಆರೈಕೆ, ಚಿಕ್ಕೇಟಾದರೂ ತಾಳಲಾರದ ಮನಸವಳು…..
ತನ್ನ ಮನಸ್ಸಿನೊಳು ನೋವಿನ ಬರೆ ಬಿದ್ದ ಹಾಗೆ …..
ಹೇಗಿರಲಿ ಇನ್ನು ನಾ, ಯಾರು ಆರೈಸುವರೆನ್ನ ಅಲ್ಲಿ?
ಏನಿದು ನೋವೇನಿದು ನನ್ನ ತಾಯಿಯ ಪ್ರೀತಿ ಸೊಬಗಿದು …..
ಇಲ್ಲಿವರೆಗೂ ಅವಳ ಬಿಟ್ಟು ಇದ್ದವಳಲ್ಲ ….
ಹೇಗಿರುವಳು ಅವಳಿನ್ನು ನನ್ನ ಬಿಟ್ಟು …….????
ಏನಿದು ನೋವೇನಿದು …..
ಅವಳ ಪ್ರೀತಿಯೇ ಹಾಗೆ ….
ಇಂಚಷ್ಟು …. ಕರಗದು ……..!