ಅಪಾಯದ ಮುನ್ಸೂಚನೆ ನೀಡುತ್ತಿರುವ ಮಂಡೆಕೋಲು ಗ್ರಾಮದ ಮುರೂರಿನ ವಿದ್ಯುತ್ ತಂತಿಗಳು!
ಅಪಾಯದ ಮುನ್ಸೂಚನೆ ನೀಡುತ್ತಿರುವ ಮಂಡೆಕೋಲು ಗ್ರಾಮದ ಮುರೂರಿನ ವಿದ್ಯುತ್ ತಂತಿಗಳು!
ಸುಳ್ಯ:(ನವೆಂಬರ್:05) ಮಂಡೆಕೋಲು ಗ್ರಾಮದ ಮುರೂರು ಜಾಲ್ಸೂರು-ಚೆರ್ಕಳ ಹೆದ್ದಾರಿಯ ತಿರುವುಗಳಲ್ಲಿ ರಸ್ತೆ ಬದಿಯಲ್ಲಿರುವ ಕಾಡು ಪೊದೆಗಳು ರಸ್ತೆಗೆ ತಾಗಿಕೊಂಡಿದ್ದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಕಾಡು ಪೊದೆಗಳು ಬೃಹತಾಕಾರದಲ್ಲಿ ರಸ್ತೆಗೆ ವಾಲಿಕೊಂಡಿದ್ದು ಒಂದು ಕಡೆಯಿಂದ ಬರುವ ವಾಹನಗಳಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುವ ಆತಂಕ ಕಂಡು ಬರುತ್ತಿದೆ. ಅಲ್ಲದೆ ಈ ಭಾಗದ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಕಾಡು ಬಳ್ಳಿಗಳು ಸುತ್ತಿಕೊಂಡಿದ್ದ ಮುಂದಿನ ದಿನಗಳಲ್ಲಿ ವಿದ್ಯುತ್ ಸ್ಪಾರ್ಕ್ ಗೊಳ್ಳುವ ಆತಂಕ ಕೂಡ ಇದೆ.
ಈ ಹಿಂದೆ ಗ್ರಾಮಸ್ಥರು ಪಂಚಾಯತ್ ಅಭಿವೃದ್ದಿ ಅಧ್ಯಕ್ಷರಿಗೆ ದೂರು ಬರೆದಿದ್ದರು ಆದರೆ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.
ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಇನ್ನಾದರೂ ಯೆಚ್ಚೆತ್ತು ಕೊಳ್ಳದಿದ್ದಲ್ಲಿ ಮುಂದಿನ ಸಮಸ್ಯೆಗಳಿಗೆ ಉತ್ತರವಾಗಬೇಕಾದೀತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.