ಕಣ್ಣು ಎಷ್ಟು ಮೆಗಾ ಪಿಕ್ಸೆಲ್ ಗೊತ್ತಾ?
ಮಾನವ ದೇಹದಲ್ಲಿ ಕಣ್ಣುಗಳ ರಚನೆಯೇ ಅಧ್ಭುತ. ಕಣ್ಣುಗಳು ಇತರ ಜೀವಿಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿರುವ ಸಂಕೀರ್ಣ ದೇಹದ ಅಂಗಗಳಾಗಿವೆ.ದೃಷ್ಟಿ ಕಣ್ಣುಗಳಿಂದ ಗ್ರಹಿಸಲ್ಪಟ್ಟಿದೆ ಮತ್ತು ಮೆದುಳಿನಿಂದ ಅರ್ಥೈಸಲ್ಪಡುತ್ತದೆ. ಕಾರ್ನಿಯಾದ ಮೂಲಕ ಪ್ರವೇಶಿಸುವ ಬೆಳಕಿನ ಕಿರಣಗಳನ್ನು ಹೊಂದಿರುತ್ತದೆ.ಕಣ್ಣು ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಒಳಭಾಗದ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ.
ಜೀವಂತ ಜೀವಿಗಳಿಗೆ ದೃಷ್ಟಿ ಕೊಡುವ ಕಣ್ಣು ದೃಶ್ಯ ವಿವರಗಳನ್ನು
ಸ್ವೀಕರಿಸುವ ಮತ್ತು ಪ್ರಕ್ರಿಯೆಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಉನ್ನತ ಜೀವಿಗಳಲ್ಲಿ ಕಣ್ಣು ಆಫ್ಟಿಕಲ್ ವ್ಯವಸ್ಥೆಯಾಗಿದ್ದು ಸುತ್ತಮುತ್ತಲಿನ ಬೆಳಕನ್ನು ಸಂಗ್ರಹಿಸುತ್ತದೆ, ಡಯಾಪ್ಹ್ರಾಮ್ ಮೂಲಕ ತೀವ್ರತೆಯನ್ನು ನಿಯಂತ್ರಿಸುತ್ತದೆ.
ನಮ್ಮ ಕಣ್ಣಿದೆಯಲ್ಲಾ, ಅದಕ್ಕಿಂತ ಗುಣಮಟ್ಟದ, ಆಧುನಿಕ ತಂತ್ರಜ್ಞಾನದ ಇನ್ನೊಂದು ಕ್ಯಾಮೆರಾ ಈ ಜಗತ್ತಿನಲ್ಲೇ ಇರಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಇದನ್ನು ಡಿಜಿಟಲ್ ಕ್ಯಾಮೆರಾ ಎನ್ನಬಹುದು. ಅಪಾರ್ಚರ್, ಲೆನ್ಸ್, ಲೈಟಿಂಗ್ ಎಲ್ಲವನ್ನೂ ತಾಂತ್ರಿಕವಾಗಿ ಅದೇ ಸೆಟಿಂಗ್ ಮಾಡಿಕೊಂಡು ಚಿತ್ರೀಕರಿಸುತ್ತದೆ. ನಿಮಗೆ ಗೊತ್ತಾ ನಮ್ಮ ಕಣ್ಣುಗಳಲ್ಲಿ ಸೆರೆ ಹಿಡಿಯುವ ಚಿತ್ರ ಪ್ರಿಂಟ್ ಹಾಕಿಸಿದರೆ, ಅದರ ಗುಣಮಟ್ಟ 576 ಮೆಗಾಪಿಕ್ಸೆಲ್ ಗಳಿಗಿಂತ ಹೆಚ್ಚಿರುತ್ತದೆ.