ರಾಜ್ಯ ಸರ್ಕಾರದಿಂದ 5 ಮಹತ್ವದ ಮಸೂದೆ ಮಂಡನೆ
ರಾಜ್ಯ ಸರ್ಕಾರದಿಂದ 5 ಮಹತ್ವದ ಮಸೂದೆ ಮಂಡನೆ
ಬಿಜೆಪಿ ಸದಸ್ಯರ ಧರಣಿ ನಡುವೆಯೇ ವಿಧಾನಸಭೆಯಲ್ಲಿ ಐದು ವಿಧೇಯಕಗಳು ಅಂಗೀಕಾರಗೊಂಡಿದೆ. ನ್ಯಾಯವಾದಿಗಳ ಮೇಲೆ ದೌರ್ಜನ್ಯ, ಹಲ್ಲೆ ಹಿಂಸಾಚಾರಗಳನ್ನು ತಡೆಯುವ ಹಾಗೂ ಶಿಕ್ಷೆ ವಿಧಿಸುವ ನ್ಯಾಯವಾದಿಗಳ ಮೇಲೆ ಹಿಂಸಾಚಾರ ನಿಷೇಧ ವಿಧೇಯಕ ಸೇರಿ ಐದು ಮಹತ್ವದ ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಸ್ಟಾಂಪ್ ಶುಲ್ಕ ಹೆಚ್ಚಳ ವಿಧೇಯಕ, ಎಂಬಿಬಿಎಸ್ ಗ್ರಾಮೀಣ ಸೇವೆ ಕಡ್ಡಾಯಕ್ಕೆ ವಿನಾಯಿತಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ, ಜಿ.ಪಂ ಕ್ಷೇತ್ರದ ಜನಸಂಖ್ಯೆ ಮಿತಿ ಮಲೆನಾಡಲ್ಲಿ 25 ಸಾವಿರಕ್ಕೆ ಇಳಿಕೆ ಸೇರಿದಂತೆ ಆನ್‌ಲೈನ್ ಗೇಮಿಂಗ್, ಆನ್‌ಲೈನ್ ಜೂಜು, ಲಾಟರಿ ಜಿಎಸ್‌ಟಿಯನ್ನು ಶೇ.18ರಿಂದ ಶೇ.28ಕ್ಕೆ ಏರಿಕೆ ಮಾಡುವ ವಿಧೇಯಕಗಳು ಅಂಗೀಕಾರಗೊಂಡಿದೆ.