ಬಾಯಿಕಟ್ಟೆಯಲ್ಲಿ ‘ಸದ್ದಿಲ್ಲದ ಸಾಧಕ’ ಕೃತಿ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭ!
ಬಾಯಿಕಟ್ಟೆಯಲ್ಲಿ ‘ಸದ್ದಿಲ್ಲದ ಸಾಧಕ’ ಕೃತಿ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭ!
ಕಾಸರಗೋಡು : ಬೆಂಗಳೂರಿನ ಶಂಪಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ಪ್ರೊ. ಪಿ.ಎನ್. ಮೂಡಿತ್ತಾಯ ಇವರನ್ನು ಕುರಿತು ಡಾ. ಪ್ರಮೀಳಾ ಮಾಧವ್ ರಚಿಸಿದ ‘ಸದ್ದಿಲ್ಲದ ಸಾಧಕ’ ಕೃತಿ ಸಮರ್ಪಣೆ ಮತ್ತು ಅಭಿನಂದನಾ ಸಮಾರಂಭವು ದಿನಾಂಕ 26-01-2024ರಂದು ಬೆಳಿಗ್ಗೆ 10 ಗಂಟೆಗೆ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.
ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ, ಕ.ಸಾ.ಪ. ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಪ್ರಾಧ್ಯಾಪಕರಾದ ಡಾ. ಟಿ.ಎ.ಎನ್. ಖಂಡಿಗೆ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಿದರು
ಪ್ರೊ. ಮೂಡಿತ್ತಾಯರ ಸಾಹಿತ್ಯ ಕೃತಿಗಳಲ್ಲಿ ಹಾಸ್ಯ ಸಾಹಿತ್ಯದ ಕುರಿತು ಕಲಾವಿದರಾದ ಶ್ರೀ ಬಾಲ ಮಧುರಕಾನನ, ಅನುವಾದದ ಬಗ್ಗೆ ಪ್ರಾಧ್ಯಾಪಕರಾದ ಡಾ. ಸವಿತಾ ಬೇವಿಂಜೆ, ಕಾವ್ಯದ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಸಂಶೋಧನೆ ಕುರಿತು ಶಿಕ್ಷಕರಾದ ಡಾ. ಸುಭಾಷ್ ಪಟ್ಟಾಜೆ ಮತ್ತು ಮಲಯಾಳ ಕೃತಿಗಳ ಕುರಿತು ಶಿಕ್ಷಕರಾದ ಶ್ರೀ ಶೈಲೇಂದ್ರನ್ ಇವರುಗಳು ವಿಚಾರ ಮಂಡನೆ ಮಾಡಿದ್ದಾರೆ. ಅಪರಾಹ್ನ 1.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಅಭಿನಂದಿತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಗಂಟೆ 3.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ. ಪಿ.ಎನ್. ಮೂಡಿತ್ತಾಯ ಮತ್ತು ಶ್ರೀಮತಿ ಶಕುಂತಲಾ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು ಹಾಗೂ. ವೈದ್ಯರು, ಸಾಹಿತಿ, ಯಕ್ಷಗಾನ ಕಲಾವಿದರಾದ ಡಾ. ರಾಮಾನಂದ ಬನಾರಿಯವರು ಅಧ್ಯಕ್ಷತೆ ವಹಿಸಿದರು, ನಿವೃತ್ತ ಆಕಾಶವಾಣಿ ನಿರ್ದೇಶಕರಾದ ಡಾ. ವಸಂತ ಕುಮಾರ ಪೆರ್ಲ ಇವರು ಅಭಿನಂದನಾ ಭಾಷಣ ಮಾಡಿದರು.
ಹಿರಿಯ ಕವಿ, ಲೇಖಕ, ಬಹುಮುಖ ಪ್ರತಿಭೆ, ಮಾರ್ಗದರ್ಶಿ ಪ್ರೊ. ಕೆ ಏನ್ ಮೂಡಿತಾಯ ಸರ್ ಇವರೀಗೆ, ಕನ್ನಡ ಭವನ ದ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಗುರುನಮನ…ಗೌರವ ಅರ್ಪಣೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ವಿ ಬಿ ಕುಳಮರ್ವ, ಕನ್ನಡ ಭವನ ನಿರ್ದೇಶಕರಾದ ರವಿ ನಾಯ್ಕಪು, ಡಾ ಜಯಪ್ರಕಾಶ್ ತೋಟ್ಟೆತೋಡಿ, ಡಾ ಕೃಷ್ಣ ಭಟ್, ಡಾ ಖಂಡಿಗೆ, ಡಾ ಪ್ರಮೀಳಾ ಮಾಧವ್ ಮುಂತಾದವರಿದ್ದರು.
ಶಂಪಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಕಾಸರಗೋಡಿನ ಮೂಡಿತ್ತಾಯರ ಅಭಿಮಾನಿ ಬಳಗ ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ,ಹಾಗೂ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.