• 22 ನವೆಂಬರ್ 2024

ಸೀತಾರಾಘವ ಪದವಿ ಪೂರ್ವ ಕಾಲೇಜು;ಪುನಶ್ಚೇತನ ಶಿಬಿರ ಸಮಾಪನ ಸಮಾರಂಭ ಮತ್ತು ಪ್ರವೃತ್ತ ಭವಿಷ್ಯ ಆಡಳಿತ ಸಮ್ಮಿಲನ

 ಸೀತಾರಾಘವ ಪದವಿ ಪೂರ್ವ ಕಾಲೇಜು;ಪುನಶ್ಚೇತನ ಶಿಬಿರ ಸಮಾಪನ ಸಮಾರಂಭ ಮತ್ತು ಪ್ರವೃತ್ತ ಭವಿಷ್ಯ ಆಡಳಿತ ಸಮ್ಮಿಲನ
Digiqole Ad

ಸೀತಾರಾಘವ ಪದವಿ ಪೂರ್ವ ಕಾಲೇಜು;ಪುನಶ್ಚೇತನ ಶಿಬಿರ ಸಮಾಪನ ಸಮಾರಂಭ ಮತ್ತು ಪ್ರವೃತ್ತ ಭವಿಷ್ಯ ಆಡಳಿತ ಸಮ್ಮಿಲನ

ಪೆರ್ನಾಜೆ,ಫೆ.1:ಪುತ್ತೂರು ತಾಲೂಕಿನ ಶ್ರೀ ಸೀತಾರಾಘವ ವಿದ್ಯಾವರ್ಧಕ ಸಂಘ (ರಿ) ಇದರ ಆಶ್ರಯದಲ್ಲಿ ಜನವರಿ 30ರಂದು ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ ರಜತ ರೇಖೆ ಕಟ್ಟಡದಲ್ಲಿ ಆಡಳಿತ ಸಮಿತಿಯ ಪುನಃಶ್ವೇತನ ಶಿಬಿರ ಸಮಾಪನಾ ಸಮಾರಂಭ ಮತ್ತು ಪ್ರವೃತ್ತ ಭವಿಷ್ಯ ಆಡಳಿತ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಸಂಸ್ಥಾಪಕರಿಗೆ ಪುಷ್ಪಾರ್ಚನೆ ಮಾಡಿದ ಬಳಿಕ, ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ವೇದಮೂರ್ತಿ ಕೇಶವ ಜೋಯಿಸ ಕರ್ವಜೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಆಡಳಿತ ಕಾರ್ಯದರ್ಶಿಗಳಾದ ಕೊಚ್ಚಿ ಕೃಷ್ಣ ಪ್ರಸಾದ್‌ ಸ್ವಾಗತಿಸಿ, ಶೈಕ್ಷಣಿಕ ಕಾರ್ಯದರ್ಶಿ, ರಾಷ್ಟ್ರ ಪ್ರಶಸ್ತಿ ವಿಜೇತರ ಯು.ಶಿವಶಂಕರ್ ಭಟ್ ಪ್ರಾಸ್ತಾವಿಕವಾಗಿ ಆಡಳಿತ ಪುನಃ ಶ್ವೇತನ ಸಮಾಪನಾ ಮತ್ತು ಪ್ರವೃತ್ತ ಭವಿಷ್ಯ ಆಡಳಿತ ಸಮ್ಮಿಲನದ ರೂಪ ರೇಷಗಳನ್ನು ಸ್ಪಷ್ಟಪಡಿಸಿದರು. ಸಂಘದ ಸಹಯೋಗದಲ್ಲಿ ಶ್ರೀ ಗುರುನಾನಕ್ ಎಜುಕೇಶನಲ್ ಟ್ರಸ್ಟ್ ಮೈಸೂರು ಶುಭ ಹಾರೈಸಿದರು.

ಪುಷ್ಟಿಂದರ್ ಕೌರ್‌ ಶೋಭಾ ನಿಕಟ ಭವಿಷ್ಯ ಆಡಳಿತ ಸಮಿತಿ ವತಿಯಿಂದ ಭವಿಷ್ಯದ ಚಿಂತನೆ ಕುರಿತು ದಿಕ್ಕೂಚಿ ಭಾಷಣ ಮಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪೆರ್ನಾಜೆ ಶಂಕರನಾರಾಯಣ ಭಟ್ ಮಾತಾಡಿ ಸಂಸ್ಥೆಯ ಭವಿಷ್ಯದ ಅಭಿವೃದ್ಧಿಯ ಬಗ್ಗೆ ಗಮನಾರ್ಹವಾಗಿ ಚಿಂತಿಸಿ ಈ ಮಹತ್ವಪೂರ್ಣ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

ನಿಕಟ ಭವಿಷ್ಯ ಆಡಳಿತ ಸಮಿತಿ 2024 -25ರ ಪದಗ್ರಹಣ ನಡೆಯಿತು. ಸಮಾರಂಭದಲ್ಲಿ ಸ್ಮರಣಿಕೆಯಿತ್ತು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭವಿಷ್ಯ ಆಡಳಿತ ಕಾರ್ಯದರ್ಶಿ ಲಾಲೂ ಬಾಬು ಝಾ ಹಾಗೂ ಸಂಚಾಲಕಿ ಪುಷ್ಟಿಂದರ್ ಕೌರ್ ಶೋಭಾ ಇವರಿಗೆ ಸಂಸ್ಥೆಯ ಸಂಸ್ಥಾಪಕ ಸೀತಾರಾಮ್ ಭಟ್ಟರ ತೈಲ ಚಿತ್ರ ಹಾಗೂ ಪ್ರಮುಖ ದಾಖಲೆಗಳನ್ನಿತ್ತು ಶುಭ ಹಾರೈಸಲಾಯಿತು. ಸಂಸ್ಥೆಯ ಪ್ರಾಚಾರ್ಯ ಮಂಟ್ಯಯ್ಯ ವಂದಿಸಿದರು. ನಿವೃತ್ತ ಉಪನ್ಯಾಸಕಿ ಸುಕನ್ಯಾ ದೇಲಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ