• 8 ಸೆಪ್ಟೆಂಬರ್ 2024

ಸುಳ್ಯ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತ

 ಸುಳ್ಯ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತ
Digiqole Ad

ಸುಳ್ಯ ತಾಲೂಕು ಆಡಳಿತದ ವತಿಯಿಂದ ಸಂವಿಧಾನ ಜಾಗೃತಿ ಜಾಥಕ್ಕೆ ಸ್ವಾಗತ

ಕರ್ನಾಟಕ ಸರಕಾರದ ವತಿಯಿಂದ ನಡೆಸಲಾಗುತ್ತಿರುವ ಸಂವಿಧಾನ ಜಾಗೃತಿ ಜಾಥವು ಸುಳ್ಯ ನಗರವನ್ನ ಪ್ರವೇಶಿಸಿದ್ದು ಈ ಜಾಗೃತಿ ಜಾಥ ಕ್ಕೆ ಭರ್ಜರಿ ಸ್ವಾಗತ ದೊರಕಿದ್ದು
ರಾಜ್ಯದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಫೆ. 17ರಂದು ಸುಳ್ಯಕ್ಕೆ ಆಗಮಿಸಿತು. ಇಂದಿನಿಂದ 22ರ ವರೆಗೆ ಸುಳ್ಯ ತಾಲೂಕಿನ 25 ಗ್ರಾಮಗಳಲ್ಲಿ ಮತ್ತು ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಪುತ್ತೂರು ತಾಲೂಕಿನಿಂದ ಸುಳ್ಯ ತಾಲೂಕಿಗೆ ಪ್ರವೇಶಿಸಿದ ಜಾಥಾಕ್ಕೆ ಕನಕಮಜಲಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಜಾಥಾವನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು . ಸುಳ್ಯ ತಹಶೀಲ್ದಾ‌ರ್ ಜಿ.ಮಂಜುನಾಥ್‌, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ಕುಮಾ‌ರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಗ್ರಾ.ಪಂ.ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಕನಕಮಜಲು ಪಿಡಿಒ ಸರೋಜಿನಿ ಮತ್ತಿತರರು ಸೇರಿ ಜಾಥಾಕ್ಕೆ ಸ್ವಾಗತ ನೀಡಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾ ರ್ಪಣೆ ಮಾಡುವ ಮುಖಾಂತರ ಸ್ವಾಗತಿಸಲಾಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಜಾಗೃತಿಯ ಬೀದಿ ನಾಟಕ.ಜಾಗೃತಿ ರಥ, ಟ್ಯಾಬ್ಲೊ ಪ್ರದರ್ಶನಗೊಂಡವು.ಸಂವಿಧಾನ ರಚನೆಗೊಂಡು 75 ವರ್ಷ ಪೂರೈಸಿದ ಸವಿನೆನಪಿಗಾಗಿ ಸಂವಿಧಾನ ಜಾಗೃತಿ ಜಾಥ ರಾಜ್ಯಾದಂತ ನಡೆಯುತಿದೆ. ಜಾಗೃತಿ ಜಾಥಾ ಸಂಚಾರಿಸುವ ಪ್ರತಿ ಪಂಚಾಯಿತಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂವಿಧಾನ ಪೀಠಿಕೆಯ ಬೋಧನೆ ಇರುತ್ತದೆ. ಅಲ್ಲದೇ ಹತ್ತಿರದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳೀಯ ಸಂಘಟನೆಗಳು, ಸ್ವಸಹಾಯ ಸಂಘಗಳನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಮಕ್ಕಳಿಗಾಗಿ ಸಂವಿಧಾನದ ಬಗ್ಗೆ ಆಶುಭಾಷಣ, ಪ್ರಬಂಧ, ಹಾಡು ಮುಂತಾದ ಸ್ಪರ್ಧೆಗಳು ನಡೆಯಲಿದೆ. ಜಾಗೃತಿ ಜಾಥಾದ ಕಡೆಯಿಂದ ಸಂವಿಧಾನದ ಬಗ್ಗೆ ಬೀದಿ ನಾಟಕ ನಡೆಯಲಿದೆ. ಅಲ್ಲದೇ ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರಿಂದ ಬೈಕ್‌ ರ್ಯಾಲಿ ಅಥವಾ ಮೆರವಣಿಗೆ ನಡೆಯಲಿದೆ.

ಜಾಥಾ ಪ್ರಯಾಣದ ವಿವರ: ಕನಕಮಜಲಿನ ಕಾರ್ಯಕ್ರಮ ನಡೆದ ಬಳಿಕ ಜಾಲ್ಲೂರು ಗ್ರಾ.ಪಂ, ಸುಳ್ಯ ನಗರ, ಮಂಡೆಕೋಲು ಗ್ರಾಮ ನಂತರ ಅಜ್ಜಾವರ ಗ್ರಾಮದಲ್ಲಿ ಮೊದಲ ದಿನ ಜಾಥಾ ಸಂಚಾರಿಸಲಿದೆ. ಸಂಜೆ ಸುಳ್ಯ ನಗರಕ್ಕೆ ಪ್ರವೇಶ ಪಡೆದು ನಗರ ಪಂಚಾಯಿತಿಯಲ್ಲಿ ಉಳಿದುಕೊಳ್ಳಲಿದೆ.

ಫೆ. 18 ರಂದು ಬೆಳಿಗ್ಗೆ ಸುಳ್ಯ ನಗರ ಪಂಚಾಯಿತಿ ಕಾರ್ಯಕ್ರಮ ನಡೆದು ಬಳಿಕ ಸಂಪಾಜೆ, ಅರಂತೋಡು, ಮರ್ಕಂಜ ಮಡಪ್ಪಾಡಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಆಲೆಟ್ಟಿಯಲ್ಲಿ ಜಾಗೃತಿ ಜಾಥಾ ತಂಗಲಿದೆ. ಫೆ. 19ರಂದು ಬೆಳಿಗ್ಗೆ ಆಲೆಟ್ಟಿ, ಉಬರಡ್ಕ ಮಿತ್ತೂರು, ಐವರ್ನಾಡು, ಪೆರುವಾಜೆ ಗ್ರಾಮಗಳಲ್ಲಿ ಸಂಚಾರಿಸಿ ಬೆಳ್ಳಾರೆಯಲ್ಲಿ ರಾತ್ರಿ ಉಳಿದುಕೊಳ್ಳಲಿದೆ.

ಫೆ. 20 ರಂದು ಬೆಳ್ಳಾರೆ, ಕಳಂಜ, ಮುರುಳ್ಯ, ಬಾಳಿಲ ಗ್ರಾಮದಲ್ಲಿ ಸಂಚಾರ ಮಾಡಿ ಪಂಜದಲ್ಲಿ ರಾತ್ರಿ ನಿಲ್ಲಲಿದೆ. ಫೆ. 21 ರಂದು ಪಂಜ, ಕಲ್ಮಡ್ಕ, ಅಮರ ಮೂಡೂರು, ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ. 22 ರಂದು ದೇವಚಳ್ಳ ಗುತ್ತಿಗಾರು, ಹರಿಹರ ಪಲ್ಲತಡ್ಕ ಮತ್ತು ಕೊಲ್ಲಮೊಗ್ರ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಗೃತಿ ಕಾರ್ಯಕ್ರಮ ನಡೆಸಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ