• 22 ನವೆಂಬರ್ 2024

ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ವಾರ್ಷಿಕ ಪ್ರತಿಷ್ಠೆ ಮತ್ತು ವರ್ಷಾವಧಿ ಜಾತ್ರ ಮಹೋತ್ಸವ

 ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ವಾರ್ಷಿಕ ಪ್ರತಿಷ್ಠೆ ಮತ್ತು ವರ್ಷಾವಧಿ ಜಾತ್ರ ಮಹೋತ್ಸವ
Digiqole Ad

ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ವಾರ್ಷಿಕ ಪ್ರತಿಷ್ಠೆ ಮತ್ತು ವರ್ಷಾವಧಿ ಜಾತ್ರ ಮಹೋತ್ಸವ

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ವಾರ್ಷಿಕ ಪ್ರತಿಷ್ಠೆ ಮತ್ತು ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ ಫೆ.20 ರಂದು ಬೆಳಿಗ್ಗೆ 9:00ಕ್ಕೆ ಗಂಟೆಯಿಂದ ಹಸಿರು ಕಾಣಿಕೆ ಸಮರ್ಪಣೆ , ಮಧ್ಯಾಹ್ನ 12:00ಕ್ಕೆ ಮಹಾಪೂಜೆ, ಮದ್ಯಾಹ್ನ 12:30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ರಾತ್ರಿ 8:15 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 6:00 ರಿಂದ 7:00 ರವರೆಗೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ . ರಾತ್ರಿ 7:00 ರಿಂದ 8:00 ರವರೆಗೆ ಶ್ರೀ ಲಕ್ಷ್ಮಣ ಆಚಾರ್ಯ ಇವರ ಸಾರಥ್ಯದಲ್ಲಿ ಸ.ಕಿ.ಪ್ರಾ ಶಾಲೆ ಕರಂಗಲ್ಲು ಇಲ್ಲಿನ ವಿದ್ಯಾರ್ಥಿಗಳಿಂದ ಏಕಾದಶಿ ದೇವಿ ಮಹಾತ್ಮೆ , 8:00 ರಿಂದ 9:00 ರವರೆಗೆ ದೇವಾಲಯ ಸಂವರ್ಧನಾ ಸಮಿತಿ ಬೆಂಗಳೂರು ಕರ್ನಾಟಕ ರಾಜ್ಯ ಇದರ ಸಂಯೋಜಕರಾಗಿರುವ ಮನೋಹರ್ ಮಠದ್ ಇವರಿಂದ “ಗುಡಿ-ಜನರ ಜೀವನಾಡಿ” ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ , ಸುಳ್ಯ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 9:00 ರಿಂದ 10:00 ರವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಂದ “ವಿವಿಧ ವಿನೋದಾವಳಿಗಳು”, 10:00 ರಿಂದ 10:45 ರವರೆಗೆ ಅಕ್ಷರಗಾನ ಸುಧೆ ತಂಡ ಕುಕ್ಕೆ ಸುಬ್ರಹ್ಮಣ್ಯ ಇವರಿಂದ, 10:45ರಿಂದ 11:45 ರವರೆಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ(ರಿ.) ಕಾಸರಗೋಡು ಇವರಿಂದ “ನರಕಾಸುರ ವಧೆ-ಗರುಡ ಗರ್ವಭಂಗ” ಯಕ್ಷಗಾನ ಗೊಂಬೆಯಾಟ ನಡೆಯಲಿದ್ದು ನಡೆಯಲಿದೆ 11:45 ರಿಂದ 12:30 ರವರೆಗೆ ವಿವಿಧ ಸಂಘ- ಸಂಸ್ಥೆಗಳಿಂದ “ಸಾಂಸ್ಕೃತಿಕ ಕಾರ್ಯಕ್ರಮಗಳು” ನಡೆಯಲಿವೆ.

ಫೆ.21 ರಂದು ಬೆಳಿಗ್ಗೆ 6:00 ಗಂಟೆಯಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ 12:00 ಗಂಟೆಯಿಂದ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಾಯಂಕಾಲ 6:00 ಗಂಟೆಗೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 8:00 ಗಂಟೆಗೆ ಮಹಾಪೂಜೆ, ನಂತರ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. ಜೊತೆಗೆ ಬೆಳಿಗ್ಗೆ ಸಮಯ 6:00 ರಿಂದ ಸಂಜೆ 6:00ವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ಕ್ಕೆ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ರೋಫೋನ್ ವಾದನ.

ಸಂಜೆ 6:00 ರಿಂದ 7:00 ರವರೆಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಇವರಿಂದ ಶ್ರೀ ಸತ್ಯನಾರಾಯಣ ಸತ್ಯಕಥೆ ರೂಪಕ ಕಾರ್ಯಕ್ರಮ ನಡೆಯಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ