• 22 ನವೆಂಬರ್ 2024

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ ಜಿಲ್ಲೆ ಹಾಗೂ ಕದಳಿ ಬೀಚ್ ಟೂರಿಸಂ ಇವರು ಅರ್ಪಿಸುವ ಮಂಗಳೂರಿನ ಪಣಂಬೂರಿನ ಕಡಲ ತಡಿಯಲ್ಲಿ

 ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ ಜಿಲ್ಲೆ ಹಾಗೂ ಕದಳಿ ಬೀಚ್ ಟೂರಿಸಂ ಇವರು ಅರ್ಪಿಸುವ ಮಂಗಳೂರಿನ ಪಣಂಬೂರಿನ ಕಡಲ ತಡಿಯಲ್ಲಿ
Digiqole Ad

ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ ಜಿಲ್ಲೆ ಹಾಗೂ ಕದಳಿ ಬೀಚ್ ಟೂರಿಸಂ ಇವರು ಅರ್ಪಿಸುವ ಮಂಗಳೂರಿನ ಪಣಂಬೂರಿನ ಕಡಲ ತಡಿಯಲ್ಲಿ

 

ಮಾರ್ಚ್ 1ರಿಂದ 3ರ ವರೆಗೆ ರೋಹನ್ಸ್ ಕಾರ್ಪೊರೇಷನ್ ಇವರ ಪ್ರಾಯೋಜಕತ್ವದ ಜಾನಪದ ಕಡಲೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದೆ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಘನ ಸರಕಾರದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಇವರು ಉದ್ಘಾಟಿಸಿ ಚಾಲನೆ ನೀಡಿ ಶುಭ ಕೋರಲಿದ್ದಾರೆ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಶಿಲ್ಪಿಗಳಾದ ಅಯೋಧ್ಯೆ ರಾಮ ಲಲ್ಲನ ವಿಗ್ರಹವನ್ನು ಕೆತ್ತಿರುವ ಅರುಣ್ ಯೋಗಿರಾಜ್ ಇವರು ಆಗಮಿಸಲಿದ್ದಾರೆ. ಕನ್ನಡ ಚಲನಚಿತ್ರದ ಖ್ಯಾತ ಚಲನಚಿತ್ರ ಗಾಯಕರು ರಾಜ್ಯ ಸರ್ಕಾರದ ಶ್ರೇಷ್ಠ ಗಾಯಕ ಪ್ರಶಸ್ತಿ ಪಡೆದ ರಮೇಶ್ಚಂದ್ರ ಬಳಗ ಮತ್ತು ಕಲಾವತಿ ಬಳಗದಿಂದ ಜಾನಪದ ರಸಸಂಜೆ ನಡೆಯಲಿದೆ ಖ್ಯಾತ ಚಲನ ಚಿತ್ರ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಮತ್ತು ಬಳಗದಿಂದ ಸಂಗೀತ ರಸಮಂಜರಿ ನಡೆಯುವುದು ಮಂಗಳೂರಿನವರೇ ಆಗಿರುವ ಕನ್ನಡ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ತಂಡದಿಂದ ಕಡಲಗೀತೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲಿದೆ.

ಜಾನಪದ ಲೋಕಕ್ಕೆ ಸಂಬಂಧಪಟ್ಟಂತಹ ಹಲವು ವಿಚಾರಗಳನ್ನು ತೆರೆದಿಡುವಂತಹ ಜಾನಪದ ಪ್ರದರ್ಶನ ನಡೆಯಲಿದೆ. ವಿವಿಧ ಬಗೆಯ ಆಕಾಶದಲ್ಲಿ ಹಾರಾಡುವಂತಹ ಗಾಳಿಪಟವನ್ನು ಕಾಣುವ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ರೀತಿಯ ಖಾದ್ಯಗಳು ವಿಭಿನ್ನ ರುಚಿಯ ಮಂಗಳೂರಿನ ವಿಶೇಷ ತಿಂಡಿ ತಿನಿಸುಗಳನ್ನು ಸವಿಯಲು ಅವಕಾಶವಿರುವ ಆಹಾರ ಮೇಳವನ್ನು ಆಯೋಜಿಸಲಾಗಿದೆ.ಮೂರು ದಿನಗಳ ಕಾಲ ನಡೆಯಲಿರುವ ಜಾನಪದ ಕಡಲೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಗೂ ಹೊರ ಜಿಲ್ಲೆಯ ಜಾನಪದ ಕಲಾಭಿಮಾನಿಗಳು ಕಲಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾನಪದ ಕಡಲೋತ್ಸವನ್ನು ಯಶಸ್ವಿಯಾಗಿ ಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ