• 18 ಅಕ್ಟೋಬರ್ 2024

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿಯ ದಶಾವತಾರ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 

 ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿಯ ದಶಾವತಾರ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 
Digiqole Ad

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿಯ ದಶಾವತಾರ ಯಕ್ಷಗಾನ ಶ್ರೀ ದೇವಿ ಮಹಾತ್ಮೆ 

ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸೇವಾ ಸಂಘ (ರಿ.) ಕಲ್ಲುಗುಂಡಿ ಸಂಪಾಜೆ ಇದರ ಆತಿಥ್ಯದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 34ನೇ ವರ್ಷದ ಸೇವಾರ್ಥವಾಗಿ *ಶ್ರೀ ದೇವಿ ಮಹಾತ್ಮೆ* ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಿರುವರು ದಿನಾಂಕ : 28-02-2024ನೇ ಬುಧವಾರ ಸಂಜೆ ಗಂಟೆ 5.30 ರಿಂದ ರಾತ್ರಿ ಗಂಟೆ 12.00ರ ವರೆಗೆ ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿ ಹಾಕಿರುವ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಸಂಪಾಜೆ ಹತ್ತು ಸಮಸ್ತರ ವತಿಯಿಂದ ಸೇವಾ ಯಕ್ಷಗಾನ ಬಯಲಾಟ ನಡೆಯಲಿದೆ .

ಆ ಪ್ರಯುಕ್ತ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಸಿರಿಪುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ ಮತ್ತು ಸಂಜೆ ಗಂಟೆ 5.00ಕ್ಕೆ ಚೌಕಿಯಲ್ಲಿ ನಡೆಯುವ ಶ್ರೀದೇವಿಯ ಪೂಜೆಗೆ ಹೂ ಮತ್ತು ಹಣ್ಣುಕಾಯಿಗಳನ್ನು ಒಪ್ಪಿಸಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ ಎಂದು ಆಡಳಿತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Digiqole Ad

ಈ ಸುದ್ದಿಗಳನ್ನೂ ಓದಿ