• 22 ನವೆಂಬರ್ 2024

ದೇವರಿಗೆ ಚಿನ್ನದ ಕವಚ ನೀಡುವ ತನಕ ಚಿನ್ನ ಧರಿಸುವುದಿಲ್ಲ ಎಂಬ ಪತಿಯ ಮಹದಾಶೆಯನ್ನು ನೆರವೇರಿಸಲು ನಳೀಲು ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಕವಚವನ್ನು ಸೇವಾ ರೂಪದಲ್ಲಿ ಅರ್ಪಿಸಿದ ಡಾ.ವೀಣಾ ಸಂತೋಷ್ ರೈ

 ದೇವರಿಗೆ ಚಿನ್ನದ ಕವಚ ನೀಡುವ ತನಕ ಚಿನ್ನ ಧರಿಸುವುದಿಲ್ಲ ಎಂಬ ಪತಿಯ ಮಹದಾಶೆಯನ್ನು ನೆರವೇರಿಸಲು ನಳೀಲು ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಕವಚವನ್ನು ಸೇವಾ ರೂಪದಲ್ಲಿ ಅರ್ಪಿಸಿದ ಡಾ.ವೀಣಾ ಸಂತೋಷ್ ರೈ
Digiqole Ad

ದೇವರಿಗೆ ಚಿನ್ನದ ಕವಚ ನೀಡುವ ತನಕ ಚಿನ್ನ ಧರಿಸುವುದಿಲ್ಲ ಎಂಬ ಪತಿಯ ಮಹದಾಶೆಯನ್ನು ನೆರವೇರಿಸಲು ನಳೀಲು ಶ್ರೀ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ಕವಚವನ್ನು ಸೇವಾ ರೂಪದಲ್ಲಿ ಅರ್ಪಿಸಿದ ಡಾ.ವೀಣಾ ಸಂತೋಷ್ ರೈ

 ಕಾರಣಿಕ ಪ್ರಸಿದ್ಧ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅದ್ದೂರಿಯಾ ನಡೆಯುತ್ತಿದ್ದು ಈ ವೇಳೆ ಶ್ರೀ ದೇವರಿಗೆ ಚಿನ್ನದ ಕವಚವದ ಹರಕೆ ರೂಪದಲ್ಲಿ ಸಮರ್ಪಣೆಯಾಗಿದೆ ಆಡಳಿತ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಅವರ ಪತ್ನಿ ಡಾ.ವೀಣಾ ಸಂತೋಷ್ ರೈ ಯವರು ಇದನ್ನು ಸಮರ್ಪಿಸಿದ್ದಾರೆ. ಪತಿಯ ಇಚ್ಚೆಯನ್ನು ಈಡೇರಿಸುವ ಉದ್ದೇಶದಿಂದ ತನ್ನ ಸ್ವಂತ ದುಡಿಮೆಯಿಂದ ಡಾ. ವೀಣಾರವರು ಈ ಸಮರ್ಪಣೆ ಮಾಡಿದ್ದಾರೆ. ಸಂತೋಷ್ ಕುಮಾರ್ ರೈ ಅವರು ಪತ್ನಿ ಮಗಳು ಸಮೇತರಾಗಿ ಶ್ರೀ ದೇವರಿಗೆ ಸಮರ್ಪಿಸಿದರು.
ಬಳಿಕ ಸಂತೋಷ್‌ ಕುಮಾರ್ ರೈ ಅವರ ತಾಯಿ ಗಿರಿಜಾ ರೈ ನಳೀಲು ಅವರು ದೇವರಿಗೆ ಚಿನ್ನದ ಮೋಹನ ಮಾಲೆಯನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ವೀಣಾ ನಮ್ಮ ವಿವಾಹದ ಸಂದರ್ಭ ಇದೊಂದು ಸಣ್ಣ ದೇವಸ್ಥಾನವಾಗಿತ್ತು. ಬಳಿಕ ಇದು ಅಭಿವೃದ್ಧಿ ಪಥದತ್ತ ಸಾಗಿತ್ತು. ನನ್ನ ಪತಿ ಭಕ್ತರನ್ನು ಒಟ್ಟಾಗಿ ದೇವಸ್ಥಾನದ ಅಭಿವೃದ್ಧಿ ಮಾಡುತ್ತಾ ಸಾಗಿದರು ಎಂದು ಅವರು ಅನುಭವದ ಸವಿ ನೆನಪುಗಳನ್ನು ಮೆಲುಕು ಹಾಕಿದರು ಪ್ರಸಕ್ತ ಬ್ರಹ್ಮಕಲಶೋತ್ಸವದಲ್ಲಿ ನಾವೆಲ್ಲ ಇದ್ದೇವೆ. ಶ್ರೀ ಸುಬ್ರಹ್ಮಣ್ಯ ದೇವರು ನಮ್ಮ ಇಷ್ಠಾರ್ಥಗಳನ್ನು ಇಡೇರಿಸುತ್ತಾ ಬಂದಿದ್ದಾರೆ. ಈ ನಡುವೆ ನಮ್ಮ ಪತಿಯು ದೇವರಿಗೆ ಚಿನ್ನದ ಕವಚ ನೀಡುವ ತನಕ ತಾನು ಚಿನ್ನ ಧರಿಸುವುದಿಲ್ಲ ಎಂದು ಸಂಕಲ್ಪ ಮಾಡಿಕೊಂಡಿದ್ದರು. ಪತಿಯು ಮದುವೆಯಾದ ಬಳಿಕ ನನಗೆ ಶಿಕ್ಷಣ ನೀಡಿ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರ ಸಂಕಲ್ಪದಂತೆ ನನ್ನ ಸ್ವಂತ ಹಣದಿಂದ ಚಿನ್ನದ ಕವಚವನ್ನು ದೇವರಿಗೆ ಭಕ್ತಿ ಪೂರ್ವಕದಿಂದ ಸಮರ್ಪಿಸಿದ್ದೇವೆ. ಅಲ್ಲದೆ ಪತಿಗೆ ಚಿನ್ನದ ಸರವನ್ನು ನೀಡಿದ್ದೇನೆ ಎಂದು ತಿಳಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ