ಮಾರ್ಚ್ 2ರಂದು “ತುಳುವೆರೆ ಬೆನ್ನಿ ಬದ್ಕ್” ಗೇನದ ಪೊಲಬು
ಮಾರ್ಚ್ 2ರಂದು “ತುಳುವೆರೆ ಬೆನ್ನಿ ಬದ್ಕ್” ಗೇನದ ಪೊಲಬು
ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ“ತುಳುವೆರೆ ಬೆನ್ನಿ ಬದ್ಕ್ ” ಗೇನ ಪೊಲಬುದ ಪರಪು 156ನೇ ಸರಣಿ ಕಾರ್ಯಕ್ರಮವು ಮಾ.2 ಶನಿವಾರ ಸಂಜೆ ಆನ್ ಲೈನ್ ಮುಖಂತರ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರಾದ ಸುರೇಶ್ ಕುಮಾರ್ ಬಿ. ನಾವೂರು ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ವ್ಯವಸ್ಥಾಪಕರಾದ ಬಿ. ಬಾಲಕೃಷ್ಣ ಪೂಜಾರಿ ಜ್ಞಾನದ ಪರಿಚಯ ನೀಡಲಿರುವರು.ಮುಖ್ಯ ಅತಿಥಿಗಳಾಗಿ ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕ ಜೋಗಿ ಮತ್ತು ಕಾಪು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್ ಕುಮಾರ್ ಪೆಜಮಾಡಿ ಉಪಸ್ಥಿತರಿರುವರು.ಈ ಕಾರ್ಯಕ್ರದಲ್ಲಿ ಎಲ್ಲಾರು ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕರಾದ ವೇದಸ್ಮಿತಾ, ಪ್ರಸಾದ್ ಅಂಚನ್, ಶ್ರೀ ಧ.ಮಂ.ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಡಾ. ಮಾಧವ ಎಂ.ಕೆ, ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.