• 5 ಅಕ್ಟೋಬರ್ 2024

ಶ್ರೀ ಕ್ಷೇತ್ರ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ವಿಜೃಂಭಿಸಲಿದೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

 ಶ್ರೀ ಕ್ಷೇತ್ರ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ವಿಜೃಂಭಿಸಲಿದೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
Digiqole Ad

ಶ್ರೀ ಕ್ಷೇತ್ರ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ವಿಜೃಂಭಿಸಲಿದೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಕಾಣಿಯೂರು ಜಾತ್ರಾ ಗದ್ದೆಯ ಜಗಮಗಿಸುವ ಬೆಳಕಿನಾಟದ ಸುಂದರ ನೋಟದ ನಡುವೆ ಕಂಗೊಳಿಸಲಿದೆ ,ಗಂಡು ಮೆಟ್ಟಿದ ಕಲೆ, ಹೌದು,ನಮ್ಮ ಊರ ಹಾಗೂ ಪರ ಊರಿನ ನನ್ನ ಎಲ್ಲಾ ಬಂಧು ಮಿತ್ರರಿಗೆ ಚರಣ್ ಗೌಡ ಕಾಣಿಯೂರು (ಯಕ್ಷಗಾನ ಕಲಾವಿದ ಶ್ರೀ ಧರ್ಮಸ್ಥಳ ಮೇಳ) ಮಾಡುವ ನಮಸ್ಕಾರಗಳು🙏🏼

ಇದೇ ಬರುವ ದಿನಾಂಕ 4 ಫೆಬ್ರವರಿ 2024 ನೇ ಆದಿತ್ಯವಾರ ನಮ್ಮ ಮನೆಯ ಹರಕೆ ಬಯಲಾಟವಾಗಿ ನಮ್ಮ ಧರ್ಮಸ್ಥಳ ಮೇಳದಿಂದ ಸಂಜೆ ಗಂಟೆ 7 ರಿಂದ ರಾತ್ರಿ ಗಂಟೆ 12:30 ವರೆಗೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಬಯಲಾಟ ನಡೆಯಲಿಕ್ಕಿದೆ.

ಆ ಪ್ರಯುಕ್ತ ಸಂಜೆ ಗಂಟೆ 5:00 ಕ್ಕೆ ಕಾಣಿಯೂರು ಮಠದಿಂದ ಕಾಣಿಯೂರು ಜಾತ್ರಾ ಗದ್ದೆಯವರೆಗೆ ಮಹಾಗಣಪತಿ ದೇವರ ಮೆರವಣಿಗೆ, ವಿಶೇಷ ಆಕರ್ಷಣೆಯಾಗಿ ಕುಣಿತ ಭಜನೆ ಸಿಂಗಾರಿ ಮೇಳ ಇದೆ.

ಸಂಜೆ ಗಂಟೆ 7:00 ಕ್ಕೆ ಸರಿಯಾಗಿ ಚೌಕಿ ಪೂಜೆ ಬಳಿಕ ಅನ್ನಸಂತರ್ಪಣೆ, ಈ ಎಲ್ಲಾ ಕಾರ್ಯಕ್ರಮಕ್ಕೆ ಬಂದು ಮಹಾಗಣಪತಿ ದೇವರ ಪ್ರಸಾದವನ್ನು ಸ್ವಿಕರಿಸಿ ಯಕ್ಷಗಾನವನ್ನು ನೋಡಿ, ನಮ್ಮನ್ನು ಆಶೀರ್ವದಿಸಬೇಕಾಗಿ ಕೇಳಿಕೊಳ್ಳುತಿದ್ದೇನೆ.

ವಿ.ಸೂ : ಮಹಾಗಣಪತಿ ದೇವರಿಗೆ ಹಣ್ಣು ಕಾಯಿ ಮಾಡಿಸುವವರು ಚೌಕಿ ಪೂಜೆಯ ಬಳಿಕ ಕೊಟ್ಟು ರಾತ್ರಿಗಂಟೆ 12:30 ಮಂಗಳಾರತಿಯ ನಂತರ ಪಡೆದುಕೊಳ್ಳಬಹುದು ಮತ್ತು ಹರಕೆ ಸೀರೆ ಒಪ್ಪಿಸುವವರು ತರಬಹುದು.

ಧನ್ಯವಾದಗಳೊಂದಿಗೆ

ವೇದಾವತಿಲಕ್ಷ್ಮಣ ಗೌಡ ಮತ್ತು ಮಗ ಚರಣ್

“ಮಾತೃಶ್ರೀವೇದಾ ” ಕಟ್ಟತ್ತಾರು ಮನೆ ಕಾಣಿಯೂರು

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ