• 8 ಸೆಪ್ಟೆಂಬರ್ 2024

ರಾಜ್ಯಸರಕಾರದ ಆರೋಗ್ಯ ವ್ಯವಸ್ಥೆ ವೈಫಲ್ಯದ ಬಗ್ಗೆ ಪುತ್ತಿಲ ಪರಿವಾರ ಆಕ್ರೋಶ.!

 ರಾಜ್ಯಸರಕಾರದ ಆರೋಗ್ಯ ವ್ಯವಸ್ಥೆ ವೈಫಲ್ಯದ ಬಗ್ಗೆ ಪುತ್ತಿಲ ಪರಿವಾರ ಆಕ್ರೋಶ.!
Digiqole Ad

ರಾಜ್ಯಸರಕಾರದ ಆರೋಗ್ಯ ವ್ಯವಸ್ಥೆ ವೈಫಲ್ಯದ ಬಗ್ಗೆ ಪುತ್ತಿಲ ಪರಿವಾರ ಆಕ್ರೋಶ..!

ನಿನ್ನೆ ಮಾ.3ರಂದು ಕುಕ್ಕೆ ಸುಬ್ರಮಣ್ಯದಲ್ಲಿ ಬಿಪಿ ಲೋ ಆಗಿ ಕುಕ್ಕೆಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಿವೇಕಾನಂದ ದೇವರಗದ್ದೆ ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ ಆರೋಗ್ಯ ವ್ಯವಸ್ಥೆ ವೈಫಲ್ಯದ ಬಗ್ಗೆ ಸರ್ಕಾರವನ್ನು ಎಚ್ಚರಿಸಿದರು.

ರಾಜ್ಯದ ನಂ.1 ಆದಾಯ ಇರುವ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲೇ ಆಸ್ಪತ್ರೆ ವ್ಯವಸ್ಥೆ ಸರಿಯಿಲ್ಲದಿರುವುದು ಸರ್ಕಾರದ ಇಚ್ಚಾಶಕ್ತಿಯ ಕೊರತೆಯನ್ನು ಎತ್ತಿತೋರಿಸುತ್ತದೆ ಎಂದರು.

💥ಕುಕ್ಕೆ ಸುಬ್ರಮಣ್ಯ ದಲ್ಲಿ ಇಂದಿಗೂ ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದು ವಿಪರ್ಯಾಸ.

ಲಕ್ಷಾಂತರ ಭಕ್ತರು ಬರುವ ಕುಕ್ಕೆ ಸುಬ್ರಹ್ಮಣ್ಯದಲ್ಲೇ ಹಾಸ್ಪಿಟಲ್ ವ್ಯವಸ್ಥೆ ಸರಿಯಿಲ್ಲದ ಕಾರಣ ಹಾಗೂ ಸರಿಯಾದ ಆಕ್ಸಿಜನ್ ಇರುವಂತಹ ಆಂಬುಲೆನ್ಸ್ ಇಲ್ಲದ ಕಾರಣ ಇಂದು ಸಜ್ಜನ ವ್ಯಕ್ತಿ ವಿವೇಕಾನಂದರನ್ನು ಕಳೆದುಕೊಂಡಿದ್ದೇವೆ.

ಆಸ್ಪತ್ರೆಯ ವ್ಯವಸ್ಥೆ ಸರಿಯಿಲ್ಲದ್ದನ್ನು ಖಂಡಿಸಿ ಸರ್ಕಾರ ಹಾಗೂ ಅಧಿಕಾರಿಗಳು ಆದಷ್ಟು ಬೇಗ ಸುಬ್ರಹ್ಮಣ್ಯದಲ್ಲಿ 24*7 ಹಾಸ್ಪಿಟಲ್ ವ್ಯವಸ್ಥೆ ಹಾಗೂ ಸುಸಜ್ಜಿತ ಆಕ್ಸಿಜನ್ ವ್ಯವಸ್ಥೆ ಇರುವ ಆಂಬ್ಯುಲೆನ್ಸ್ ಅಗತ್ಯವಾಗಿ ಇರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಹಾಗೂ ಅಂತರರಾಜ್ಯ ಭಕ್ತರ ಹಾಗೂ ಊರಿನ ಜನತೆಯ ಬೇಡಿಕೆಯನ್ನು ಸರ್ಕಾರ ಆದಷ್ಟು ಶೀಘ್ರ ಈಡೇರಿಸಬೇಕು ಇಲ್ಲವಾದರೆ ಜನರ ಬೇಡಿಕೆಗಾಗಿ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಕೆ ಕೊಟ್ಟರು.

ಈ ಸಂದರ್ಭ ರವಿ ಕಕ್ಕೆಪದವು, ಕಿಶೋರ್ ಶಿರಾಡಿ, ಸತೀಶ್ ಪ್ರಭು, ನಿತಿನ್ ಭಟ್, ಅಶೋಕ್ ಸುಬ್ರಹ್ಮಣ್ಯ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು

Digiqole Ad

ಈ ಸುದ್ದಿಗಳನ್ನೂ ಓದಿ