ಪೋಷಕರೇ ಎಚ್ಚರ! ಮೊಬೈಲ್, ಟಿವಿ ವೀಕ್ಷಣೆ ಗೋಳಿನಿಂದಾಗಿ ಮಕ್ಕಳಲ್ಲಿ ವ್ಯಾಪಕವಾಗಿ ದೃಷ್ಟಿದೋಷ ಹೆಚ್ಚಳ
ಪೋಷಕರೇ ಎಚ್ಚರ! ಮೊಬೈಲ್, ಟಿವಿ ವೀಕ್ಷಣೆ ಗೋಳಿನಿಂದಾಗಿ ಮಕ್ಕಳಲ್ಲಿ ವ್ಯಾಪಕವಾಗಿ ದೃಷ್ಟಿದೋಷ ಹೆಚ್ಚಳ
ಬದಲಾದ ದಿನಮಾನಗಳಲ್ಲಿ ಮೊಬೈಲ್, ಟಿವಿಗಳನ್ನು ಹೆಚ್ಚು ನೋಡಬೇಡಿ ಎಂದು ಪೋಷಕರು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ, ಮಕ್ಕಳೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪರಿಣಾಮ ಇಂದಿನ ಮಕ್ಕಳಲ್ಲಿ ದೃಷ್ಟಿದೋಷ ವ್ಯಾಪಕವಾಗುತ್ತಿದ್ದು ಸಣ್ಣವಯಸ್ಸಿನಲ್ಲೇ ಕನ್ನಡಕ ಹಾಕಬೇಕಾದ ಅನಿವಾರ್ಯತೆ ಒದಗಿ ಬಂದಿರುವುದು ಆರೋಗ್ಯ ಇಲಾಖೆ ಅಧ್ಯಯನದಿಂದ ತಿಳಿದು ಬಂದಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗಿನ 63,75,014 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿಗಳಿಗೆ ದೃಷ್ಟಿದೋಷ ಸಮಸ್ಯೆಯಿರುವುದು ಪತ್ತೆಯಾಗಿದೆ. ಇದು ಬಹಳ ಆತಂಕಕಾರಿ ಬೆಳವಣಿಗೆಯಾಗಿದೆ.
ರಾಜ್ಯದಲ್ಲಿ 6ರಿಂದ 16 ವರ್ಷದ ಸುಮಾರು 38 ಸಾವಿರ ಮಕ್ಕಳಲ್ಲಿ ದೃಷ್ಟಿ ದೋಷ ಕಾರಣ ಕನ್ನಡಕ ವಿತರಣೆ ಹೆಚ್ಚು ಹೊತ್ತು ಟಿವಿ ನೋಡಬೇಡಿ, ಮೊಬೈಲ್ ಜತೆಗೆ ಹೆಚ್ಚು ಹೊತ್ತು ಕಳೆಯಬೇಡಿ ಎಂದು ಹೆತ್ತವರು ಪದೇಪದೆ ಹೇಳಿದರೂ ಮಕ್ಕಳು ಕೇಳಿಸಿಕೊಳ್ಳದ ಪರಿಣಾಮ ಸಣ್ಣ ವಯಸ್ಸಿನವರಲ್ಲೂ ದೃಷ್ಟಿ ದೋಷ ಸಮಸ್ಯೆ ಗಂಭೀರವಾಗುತ್ತಿದೆ. ಆಟವಾಡುವ ಮಕ್ಕಳ ಕಣ್ಣಿಗೂ ಕನ್ನಡಕವೇ ಆಧಾರವಾಗುವುದು ಆರೋಗ್ಯವಂತ ಸಮಾಜದಲ್ಲಿ ಕೊಂಚ ಕಳವಳ ಸೃಷ್ಟಿಯಾಗುತ್ತಿದೆ. ಮಾಡಲಾಗಿದೆ.
ಕೆಲವು ಮಕ್ಕಳಲ್ಲಿ ಸಾಧಾರಣ ದೃಷ್ಟಿದೋಷವಾದರೆ ಇನ್ನು ಕೆಲವರಲ್ಲಿ ತೀವ್ರವಿದ್ದು, ಚಿಕಿತ್ಸೆಯ ಅನಿವಾರ್ಯವಾಗಿದೆ. ಕೆಲವೊಂದು ಮಕ್ಕಳಲ್ಲಿ ಹುಟ್ಟಿನಿಂದ ಸಮಸ್ಯೆ ಇರಬಹುದು. ಆದರೆ ಈಗಿನ ಕೆಲವು ಪ್ರಕರಣಗಳಲ್ಲಿ ಮೊಬೈಲ್, ಟಿವಿ ಸೇರಿ ನಾನಾ ತಂತ್ರಜ್ಞಾನದ ಬಳಕೆ, ಆಹಾರ ಪದ್ಧತಿ ಎಲ್ಲವೂ ದೃಷ್ಟಿ ದೋಷಕ್ಕೆ ಕಾರಣವಾಗುತ್ತಿದೆ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಬಂದಾಗ ತಕ್ಷಣ ವೈದ್ಯರನ್ನು ಕಾಣುವುದು ಉತ್ತಮ ತಮ್ಮ ಎಂದು ಮಂಗಳೂರಿನ ಖ್ಯಾತ ನೇತ್ರತಜ್ಞರಾದ ಶ್ರೀ ಪತಿ ಕಾಮತ್ ಇವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ*