• 8 ಸೆಪ್ಟೆಂಬರ್ 2024

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಲಕ್ಷಾಂತರ ಹಣ ಕಳೆದುಕೊಂಡ ಯುವಕ.!

 ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಲಕ್ಷಾಂತರ ಹಣ ಕಳೆದುಕೊಂಡ ಯುವಕ.!
Digiqole Ad

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಲಕ್ಷಾಂತರ ಹಣ ಕಳೆದುಕೊಂಡ ಯುವಕ.!

ಮಂಗಳೂರು: ಆನ್ಲೈನ್ ಮೂಲಕ ಷೇರು ಮಾರುಕಟ್ಟೆ ವ್ಯವಹಾರದಲ್ಲಿ 72.32 ಲಕ್ಷ ಹಣವನ್ನು ವ್ಯಕ್ತಿಯೊಬ್ಬರು ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಮಂಗಳೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಂಚನೆಗೊಳಗಾದವರನ್ನು ಪ್ರಭಾಕ‌ರ್ ಎಂದು ಗುರುತಿಸಲಾಗಿದೆ. ಪ್ರಭಾಕ‌ರ್ ಅವರು ತನ್ನ ಮೊಬೈಲ್‌ ಮೂಲಕ ಫೇಸ್‌ಬುಕ್‌ ಪೇಜ್‌ನಲ್ಲಿ ಬಂದ ಷೇರು ಮಾರುಕಟ್ಟೆಯ ಜಾಹೀರಾತಿನಲ್ಲಿದ್ದ ಸಬ್‌ಸ್ಕ್ರೈಬ್ ಆಯ್ಕೆಯನ್ನು ಕ್ಲಿಕ್ ಮಾಡಿದ್ದಾರೆ. ಈ ವೇಳೆ ಆ ಲಿಂಕ್ ಮೂಲಕ ಎರಡು ಆ್ಯಪ್‌ಗಳು ಡೌನ್‌ಲೋಡ್ ಆಗಿದ್ದು ಅದಕ್ಕೆ ತನ್ನ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿಳಾಸವನ್ನು ಹಾಕಿದಾಗ ಹೊಸ ವಾಟ್ಸ್ ಆ್ಯಪ್ ಗ್ರೂಪ್ ಗೆ ಸೇರಿಸಿಕೊಂಡಿದ್ದಾರೆ. ಮೊದಲಿಗೆ 50,000 ರೂ.ಅನ್ನು ಹೂಡಿಕೆ ಮಾಡಲು ಗ್ರೂಪ್ ನಲ್ಲಿ ತಿಳಿಸಿದ್ದಾರೆ. ಬಳಿಕ ಹಂತ ಹಂತವಾಗಿ ಷೇರುಗಳನ್ನು ಖರೀದಿಸಲು ಸೂಚಿಸಿದರು. ಅದರಂತೆ ಅವರು ಒಟ್ಟು 72,31,017 ರೂಪಾಯಿನ್ನು ವರ್ಗಾಯಿಸಿದ್ದರು.

ಈ ಸುದ್ಧಿ ಓದಿದ್ದೀರಾ: ಚೀನಾದ ವ್ಯಾಪಾರಿಗೆ ಒಲಿಯಿತು ಕೋಟಿ ಕೋಟಿ ಹಣ…

ಈ ನಡುವೆ ತನ್ನ ಷೇರುಗಳನ್ನು ಮಾರಾಟ ಮಾಡಲು ಮುಂದಾದಾಗ ಅದಕ್ಕೆ 10ರಷ್ಟು ತೆರಿಗೆ ಕಟ್ಟುವಂತೆ ತಿಳಿಸಲಾಯಿತು. ಈ ವೇಳೆ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂತು ಎಂದು ಪ್ರಭಾಕ‌ರ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ