• 8 ಸೆಪ್ಟೆಂಬರ್ 2024

ಲೋಕಸಭಾ ಚುನಾವಣೆ ಸಮೀಕ್ಷೆ !!

 ಲೋಕಸಭಾ ಚುನಾವಣೆ ಸಮೀಕ್ಷೆ !!
Digiqole Ad

ಲೋಕಸಭಾ ಚುನಾವಣೆ ಸಮೀಕ್ಷೆ !!

ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈಗಾಗಲೇ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆಗೊಳಿಸಿವೆ.

ಈ ಸುದ್ದಿ ಓದಿದ್ದೀರಾ?:ಭಾರತ-ಆಸಿಯಾನ್ ಸಹಕಾರ ಬಲಪಡಿಸಲು 12 ಅಂಶಗಳ ಯೋಜನೆ ಪ್ರಸ್ತಾಪಿಸಿದ ಮೋದಿ

ಈ ಬೆನ್ನಲ್ಲೇ ಕೆಲವು ಪತ್ರಿಕೆಗಳು, ಮಾಧ್ಯಮಗಳು ಚುನಾವಣಾ ಸಮೀಕ್ಷೆಗಳನ್ನು ಕೈಗೊಳ್ಳುತ್ತಿವೆ. ಅಂತೆಯೇ ಇದೀಗ ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು ದೇಶದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದೆಂದು ತಿಳಿಸಿದೆ.

ಹೌದು, ಇಂಡಿಯಾ ಟೀವಿ-ಸಿಎನ್‌ಎಕ್ಸ್‌ ಚುನಾವಣಾ ಪೂರ್ವ ಜಂಟಿ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಎನ್‌ಡಿಎ 378 ಹಾಗೂ ತೃಣಮೂಲ ಕಾಂಗ್ರೆಸ್‌ ಹೊರತಾದ ಇಂಡಿಯಾ ಕೂಟ 98 ಸ್ಥಾನ ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ.

ಈ ಸುದ್ದಿ ಓದಿದ್ದೀರಾ?:ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಮನವಿ ಬಂದರೆ ಪರಿಗಣಿಸುತ್ತೇವೆ: ವಿಶ್ವಸಂಸ್ಥೆ

ಅಲ್ಲದೆ ಈ ಪೈಕಿ ಬಿಜೆಪಿ 335 ಸ್ಥಾನ ಪಡೆಯಲಿದ್ದು, ಕಳೆದ ಸಲಕ್ಕಿಂತ 32 ಸ್ಥಾನ ಹೆಚ್ಚು ಸಂಪಾದಿಸಲಿದೆ. ಕಳೆದ ಸಲ 52 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈ ಸಲ ಕೇವಲ 37ಕ್ಕೆ ಕುಸಿಯಲಿದೆ. ಇದು ಕಾಂಗ್ರೆಸ್ ಇತಿಹಾಸದಲ್ಲಿ ಹೀನಾಯ ಸೋಲಾಗಿದೆ. ಬಳಿಕ ತೃಣಮೂಲ ಕಾಂಗ್ರೆಸ್‌ 21 ಸ್ಥಾನ ಪಡೆದು 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಚ್ಚರಿ ಭವಿಷ್ಯ ನುಡಿದಿದೆ.

 

Digiqole Ad

ಈ ಸುದ್ದಿಗಳನ್ನೂ ಓದಿ