• 21 ನವೆಂಬರ್ 2024

ಬೆಂಗಳೂರು: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಟೋಪಿ ಬಿಟ್ಟು ಹೋದ ಬಾಂಬರ್.

 ಬೆಂಗಳೂರು: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಟೋಪಿ ಬಿಟ್ಟು ಹೋದ ಬಾಂಬರ್.
Digiqole Ad

ಬೆಂಗಳೂರು: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಟೋಪಿ ಬಿಟ್ಟು ಹೋದ ಬಾಂಬರ್.

ರಾಮೇಶ್ವರಂ ಕೆಫೆ ಸ್ಪೋಟದ ಆರೋಪಿ ಹೂಡಿಯ ಬಳಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಿಸಿ ಹೋದ ವಿಚಾರ ಈಗ ಬೆಳಕಿಗೆ ಬಂದಿದೆ. ಬಿಎಂಟಿಸಿ ಬಸ್ಸಿನಲ್ಲಿ ಹೂಡಿಗೆ ಬಂದಿದ್ದ ಆರೋಪಿ ಬಟ್ಟೆ ಬದಲಾಯಿಸಿ ಟೋಪಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ ಎಂಬ ವಿಷಯ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಬಾಂಬ್ ಸ್ಫೋಟ ನಡೆದ ದಿನವಾದ ಮಾರ್ಚ್ 1 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಬೀದರ್‌ಗೆ ಹೋಗುವ ಬಸ್ ಹತ್ತಿದ್ದಾನೆ. ಸಂಜೆ 4:30ಕ್ಕೆ ತುಮಕೂರಿನ ಕಳ್ಳಂಬೆಳ್ಳ ಟೋಲ್, ಸಂಜೆ 5 ಗಂಟೆಗೆ ಶಿರಾವನ್ನು ಬಸ್ ದಾಟಿದೆ. ಬಸ್ ಬಳ್ಳಾರಿಗೆ ತಲುಪಿದ ನಂತರ ಇಳಿದಿದ್ದಾನೆ

ಈ ಸುದ್ದಿಯನ್ನು ಓದಿದ್ದೀರಾ.? ಹಣ ಪಾವತಿ ಮಾಡದಿದ್ದಕ್ಕೆ ಪಾಕ್ ವಿಮಾನ ವಶಕ್ಕೆ.!

. ಬೆಂಗಳೂರಿನಿಂದ ದೀರ್ಘ ಪ್ರಯಾಣ ಮಾಡಿದರೂ ಆತ ಯಾವುದೇ ನಿಲ್ದಾಣದಲ್ಲಿ ಇಳಿಯದೇ ಬಸ್‌ನಲ್ಲಿ ಕುಳಿತಿದ್ದ. ಬಳ್ಳಾರಿಯಿಂದ ಬೀದರ್ ಅಥವಾ ಭಟ್ಕಳಕ್ಕೆ ಹೋಗಿರುವ ಅನುಮಾನ ಈಗ ವ್ಯಕ್ತವಾಗಿದೆ. ಎನ್‌ಐಎ ಮತ್ತು ಸಿಸಿಬಿ ಪೊಲೀಸರಿಗೆ ಶಂಕಿತನ ಸ್ಪಷ್ಟವಾದ ಚಿತ್ರ ಸಿಕ್ಕಿದೆ. ಶಂಕಿತ ಹಿಂದಿ ಮಾತನಾಡುತ್ತಿದ್ದು ಹೊರ ರಾಜ್ಯದವನು ಇರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ. ಶಂಕಿತ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Digiqole Ad

ಈ ಸುದ್ದಿಗಳನ್ನೂ ಓದಿ