ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ಮಾಡಲ್ಲ – ಸಿಎಂ ಪಿಣರಾಯಿ ವಿಜಯನ್.
ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ಮಾಡಲ್ಲ – ಸಿಎಂ ಪಿಣರಾಯಿ ವಿಜಯನ್.
ತಿರುವನಂತಪುರ : ಲೋಕಸಭಾ ಚುನಾವಣೆಗಳಿಗೆ ಕೆಲವೇ ವಾರಗಳು ಬಾಕಿಯಿರುವಂತೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿ ಎ ಎ)ಯು ಜಾರಿಗೊಳ್ಳುತ್ತಿದ್ದು,ಈ ಸಂಬಂಧ ಅಧಿಸೂಚನೆಯನ್ನು ಕೇಂದ್ರ ಸರಕಾರವು ಸೋಮವಾರ ಸಂಜೆ ಹೊರಡಿಸಿದೆ.
ಈ ಸುದ್ದಿಯನ್ನು ಓದಿದ್ದೀರಾ.? ದೈವತ್ವದ ಅಪ್ಪುಗೆಯ ಅಮ್ಮ, ಅಮೃತಾನಂದಮಯಿ
ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿ ಮಾಡಿದ ಈ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ನಮ್ಮ ರಾಜ್ಯದಲ್ಲಿ ಈ ಕಾಯ್ದೆ (ಸಿಎಎ) ಜಾರಿ ಮಾಡಲ್ಲ ಎಂದಿದ್ದಾರೆ.
ಮೊದಲ ಬಾರಿಗೆ ಧರ್ಮವನ್ನು ಭಾರತೀಯ ಪೌರತ್ವಕ್ಕೆ ಮಾನದಂಡವನ್ನಾಗಿ ಮಾಡಿರುವ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲು ಬಳಕೆಯಾಗಬಹುದು ಎಂಬ ಭೀತಿಯನ್ನು ಸೃಷ್ಟಿಸಿರುವ ಸಿ ಎ ಎ ಅನ್ನು ಡಿಸೆಂಬರ್ 2019ರಲ್ಲಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ಸಂಸತ್ತು ಅಂಗೀಕರಿಸಿತ್ತು. ಈ ಪ್ರತಿಭಟನೆಗಳಲ್ಲಿ 100ಕ್ಕೂ ಅಧಿಕ ಜನರು ಮೃತಪಟ್ಟಿದ್ದರು.
ಈ ಸುದ್ದಿಯನ್ನು ಓದಿದ್ದೀರಾ.?ಅಮೃತ್ ಭಾರತ್ ಸ್ಟೇಷನ್ ಯೋಜನೆ: ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಅಭಿವೃದ್ಧಿಗೆ ಚಾಲನೆ
ಈ ಬಗ್ಗೆ ಕೇರಳ ಸಿಎಂ ವಿಜಯನ್ ಪ್ರತಿಕ್ರಿಯೆ ನೀಡಿ, ” ಸಿಎಎ ಎಂಬುವುದು ಕೋಮು ವಿಭಜಕ ಕಾನೂನು ಆಗಿದೆ. ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ನಮ್ಮ ಕೇರಳ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ” ಎಂದು ಕೇರಳ ಮುಖ್ಯಮಂತ್ರಿ ಪಿನರಯಿ ವಿಜಯನ್ ಪ್ರತಿಪಾದಿಸಿದ್ದಾರೆ.
GOLD FACTORY NEWS
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.