ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಇರಲ್ಲ!: ಯಾಕೆ ಗೊತ್ತಾ?
ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಇರಲ್ಲ!: ಯಾಕೆ ಗೊತ್ತಾ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಹಾಗೂ ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಧನ ವಿದ್ದರೆ ಅದು ಸಂಪೂರ್ಣ ಖಾಲಿಯಾಗುವವರೆಗೆ ಬಳಸಬಹುದು , ಆದರೆ ಅವುಗಳಿಗೆ ಮತ್ತೆ ರಿಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ ಎಂದು RBI ಆದೇಶಿಸಿದೆ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್ಬಿಐ ಆದೇಶ ನೀಡಿ ನಂತರ ಮಾರ್ಚ್ 14ರವರೆಗೂ ವಿಸ್ತರಿಸಿತ್ತು.ಕೆವೈಸಿ ಅಕ್ರಮ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳು ಮಾರ್ಚ್ 15 ರಿಂದ ನಿರ್ಬಂಧಿಸಲ್ಪಡುತ್ತವೆ. ಆದರೆ, ಜನರು ಖರೀದಿ ಇತರೆ ಹಣಕಾಸು ಸಂದರ್ಭದಲ್ಲಿ ಬಳಕೆ ಮಾಡುವ ಪೇಟಿಎಂ ಯುಪಿಐ ಸೇವೆ ಮುಂದುವರೆಯುತ್ತದೆ. ಪೇಟಿಎಂ ಆಪ್ ಗೆ ಯೆಸ್ ಬ್ಯಾಂಕ್ ಜೊತೆ ಒಪ್ಪಂದಕ್ಕೆ ಎನ್ಪಿಸಿಐ ಅನುಮತಿ ನೀಡಿದೆ.ಪೇಟಿಎಂ ಬಳಕೆದಾರರು ಕಳುಹಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ. ಹೀಗಾಗಿ ಪೇಟಿಎಂ ಸೇವೆ ಮುಂದುವರೆಯುತ್ತದೆ. ಇದುವರೆಗೆ ಪೇಟಿಎಂ ಆಪ್ ಸೇವೆ ನಿರ್ಬಂಧಕ್ಕೆ ಒಳಗಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ನಡೆಯುತ್ತಿತ್ತು. ಈಗ ಯೆಸ್ ಬ್ಯಾಂಕ್ ಮೂಲಕ ನಡೆಯಲಿದ್ದು, ಪೇಟಿಎಂ ಯುಪಿಐ ಸೇವೆ ಮುಂದುವರೆಯಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತರ ಮೂರು ಬ್ಯಾಂಕ್ ಗಳ ಮೂಲಕ UPI ಅನ್ನು ಮುಂದುವರಿಸಲು Paytm ಅನುಮೋದನೆ ಪಡೆದಿದೆ.ಇನ್ಮುಂದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಗುರುವಾರ ಕಮ್ಯುನಿಕೇಷನ್ಸ್ ಬ್ರ್ಯಾಂಡ್ Paytm ಅನ್ನು ನಿರ್ವಹಿಸುತ್ತದೆ, ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ನಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.
ಈ ಸುದ್ದಿಯನ್ನು ಓದಿದ್ದೀರಾ:ಮೋದಿಯನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ; ಸಚಿವನ ಹೇಳಿಕೆ ವಿರುದ್ಧ ಎಫ್ಐಆರ್ ದಾಖಲು!
GOLD FACTORY NEWS
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.