• 12 ಜೂನ್ 2024

ಬಾಳಿಗೆ ಬೆಳಕು, ಹೊತ್ತಗೆಯ ಸುತ್ತ ಒಂದು ಅವಲೋಕನ: ದೇವರಾಜು.ಸಿ

 ಬಾಳಿಗೆ ಬೆಳಕು, ಹೊತ್ತಗೆಯ ಸುತ್ತ ಒಂದು ಅವಲೋಕನ: ದೇವರಾಜು.ಸಿ
Digiqole Ad

ಬಾಳಿಗೆ ಬೆಳಕು, ಹೊತ್ತಗೆಯ ಸುತ್ತ ಒಂದು ಅವಲೋಕನ: ದೇವರಾಜು.ಸಿ

“ಬಾಳಿಗೆ ಬೆಳಕು” ಕವನ ಸಂಕಲನದ ಮಾತೆಯಾದ “ಯುವ ಕವಯಿತ್ರಿ” ರವರಾದ “ಶ್ರೀಮತಿ ಪ್ರಿಯಾ ಸುಳ್ಯ” ರವರೇ. ತಮ್ಮ ಕವನ ಸಂಕಲನವನ್ನು ಮುಖ ಪುಟದ ಮೊದಲಕ್ಷರದಿಂದ ಹಿಂಪುಟದ ಬೆನ್ನುಡಿಯ ಅಂತ್ಯಾಕ್ಷರದವರೆಗೂ ಸಂಪೂರ್ಣವಾಗಿ ಸ್ಥಿತ ಮನಸ್ಸಿನಿಂದ ಓದಿ ಮನನ ಮಾಡಿಕೊಂಡೆ. ಓದುವಾಗ ನಾನೊಬ್ಬ ಕೇಳುಗನಾಗಿ ಆಲಿಸುತ್ತಲಿದ್ದೆ. ಆದರೆ ನನ್ನ ನೇತ್ರಗಳು ಸೆರೆ ಹಿಡಿದ ಅಕ್ಷರಗಳಿಗೆ ತಮ್ಮ ರೂಪ ಕೊಟ್ಟು ನನ್ನ ಮನಸ್ಸು ಮುಂದೆ ಬಂದು ಒಂದೊಂದು ಅಕ್ಷರವನ್ನು ಪದಕಟ್ಟಿ ಕವನ ವಾಚನ ಮಾಡುವಾಗ ಕಣ್ಣಾಲಿಗಳು ತುಂಬಿ ಕಣ್ಣೀರು ಜಿನುಗಿದ್ದು, ಮರೆಮಾಚಲಾಗದೇ ಕರವಸ್ತ್ರಕ್ಕೆ ಮೊರೆ ಹೋಗಬೇಕಾಯಿತು. ಒಮ್ಮೆ ಮಾತಾ ಪಿತೃಗಳ ಮೇಲಿನ ವಾತ್ಸಲ್ಯಕ್ಕೆ ಮನಸೋತು ಹೆತ್ತವರು ನೆನಪಾದರು.

ಈ ಸುದ್ದಿ ಓದಿದ್ದೀರಾ?: ಮುಖವಾಡದ ಬದುಕು ಸರಿಯಲ್ಲ ಭಾಸ್ಕರ ಕೋಡಿಂಬಾಳ 

ಬಾಲ್ಯದ ಕವನದಲ್ಲಿ ಒಂದು ಕ್ಷಣ ಪುಳಕಿತನಾಗಿ ಬಾಲ್ಯವೇ ಇರಬಾರದಿತ್ತೇ ಎಂದನಿಸಿತು. ಬಾಳ ಸಂಗಾತಿಯ ನೆನೆದು ಬರೆದಿರುವ ಸಾಲುಗಳು ಮನಮುಟ್ಟಿ ಹೃದಯವನ್ನೇ ಕಲಕಿ ರಾಡಿ ಮಾಡಿ ಸ್ತಬ್ಧನಾದೆ, ಎಚ್ಚೆತ್ತು ಮುಂದೆ ಕರುಳ ಬಳ್ಳಿಯ ಕುರಿತಾದ ಸಾಲುಗಳಲ್ಲಿ ತಲ್ಲೀನನಾಗಿ ನನ್ನ ಕೂಸುಗಳನ್ನು ಸ್ಮರಿಸುತ್ತಾ ಸ್ವಪ್ನ ಲೋಕದಿ ವಿಹರಿಸಿ ಬಂದೆ. ಗುರುಗಳಿಗೆ ನುಡಿ ನಮನ ಸಲ್ಲಿಸಿರುವ ರೀತಿ ಶ್ಲಾಘನೀಯ. ನಾವೆಲ್ಲಾ ಸಾಂಕೇತಿಕವಾಗಿ ಗುರುವಂದನೆ ಸಲ್ಲಿಸಿ ಕೈಚೆಲ್ಲಿ ಕೂತಿರುವಾಗ ನೂರಾರು ವರ್ಷವೂ ಓದುಗರ ಮನದಲ್ಲಿ ದೈವ ರೂಪದ ಗುರುವಿನ ಮೇಲಿನ ಭಕ್ತಿ ಸದಾ ಚಿರಾಯು. ತಮ್ಮ ಬದುಕಿನ ಪ್ರತಿ ಹೆಜ್ಜೆ ಗುರುತುಗಳನ್ನು ಅಕ್ಷರ ರೂಪ ಕೊಟ್ಟು ಸನ್ನಿವೇಶಕ್ಕೆ ತಕ್ಕ ಹಾಗೆ ಬದುಕಿನ ಒಡನಾಟದಲ್ಲಿ ಬಂದು ಹೋದ ಎಲ್ಲರ ಕುರಿತಾಗಿ ಗಧ್ಯ ಮಾದರಿಯ ಕವನಗಳನ್ನು ಸುಂದರವಾಗಿ ಮೂಡಿಸಿದ್ದೀರಿ. ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದೀರಿ. ಹೋದಲ್ಲೆಲ್ಲಾ ಹೆಜ್ಜೆಗುರುತನ್ನು ಮೂಡಿಸಿದ್ದೀರಿ. ತಮ್ಮ ಕವನ ಸಂಕಲನದ ಕಿರುಹೊತ್ತಿಗೆಯನ್ನು ನನ್ನ ಕೈಗಿರಿಸಿದ ಸಹೃದಯಿ ಸಹೋದರರಿಗೊಂದು ಸಲಾಂ ತಿಳಿಯ ಪಡಿಸುತ್ತಾ, ತಮ್ಮ ಸಾಹಿತ್ಯ ಕ್ಷೇತ್ರದ ಕೃಷಿ ಮುಂದುವರೆಯಲಿ. ಬೆವರು ಬಸಿದು ಬಂದ ಬೆಳೆ ಕಳೆಯ ನೆರಳಿಲ್ಲದೇ ಬೆಳೆದು ಹೆಮ್ಮರವಾಗಿ ನೆರಳನ್ನೀವ ಬೋಧೀವೃಕ್ಷವಾಗಲಿ. ನಾ ಕಂಡ ಜಗತ್ತಿನ ಎಲ್ಲಾ ದಾರ್ಶನಿಕರ ಕೃಪಾಶೀರ್ವಾದದಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸುವ ಗಧ್ಯ ಪದ್ಯಗಳು ಕವನ ಕಾದಂಬರಿಗಳು ಸುಲಲಿತವಾಗಿ ಮೂಡಿ ಬಂದು ಒದುಗರ ಕಪಾಟು ಸೇರಲೆಂದು ತುಂಬು ಹೃದಯದಿಂದ ಆಶಿಸುತ್ತಾ ಹೃದಯ ಸ್ಪರ್ಶಿ ನಮನಗಳನ್ನು ಸಮರ್ಪಿಸುತ್ತಿದ್ದೇನೆ. ದಿಟ ದೈವಗಳಾದ ಜನನಿ ಜನಕರ ದಿವ್ಯಾಶೀರ್ವಾದ ನೆರಳಂತೆ ಸದಾ ತಮ್ಮೆಲ್ಲರ ಮೇಲಿರಲಿ. ತಮ್ಮನ್ನು ಬಣ್ಣಿಸಲು ಪದ ದಾರಿದ್ರ್ಯ ಕಾಡುತ್ತಲಿದೆ. ಅನ್ಯತಾ ಭಾವಿಸದೇ ಸ್ವೀಕರಿಸಿ.

ಈ ಸುದ್ದಿ ಓದಿದ್ದೀರಾ?: ಯುವ ಕವಯತ್ರಿ ಪ್ರಿಯಾ ಸುಳ್ಯರವರ ಬಾಳಿಗೆ ಬೆಳಕು ಕೃತಿ ಬಿಡುಗಡೆ 

ದೇವರಾಜು.ಸಿ

ಆರಕ್ಷಕ ಇಲಾಖೆ.

ಬೆಂಗಳೂರು ನಗರ.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!