• 13 ಜೂನ್ 2024

ನೂತನ ಹೆದ್ದಾರಿ ಸಂಚಾರಕ್ಕೆ ಹೈಟೆಕ್ ಹೈವೆ: ಚೆನೈ, ಆಂಧ್ರ, ಮಂಗಳೂರು ಪ್ರಯಾಣ ಇನ್ನಷ್ಟು ವೇಗವಾಗಿ!

 ನೂತನ ಹೆದ್ದಾರಿ ಸಂಚಾರಕ್ಕೆ ಹೈಟೆಕ್ ಹೈವೆ: ಚೆನೈ, ಆಂಧ್ರ, ಮಂಗಳೂರು ಪ್ರಯಾಣ ಇನ್ನಷ್ಟು ವೇಗವಾಗಿ!
Digiqole Ad

ನೂತನ ಹೆದ್ದಾರಿ ಸಂಚಾರಕ್ಕೆ ಹೈಟೆಕ್ ಹೈವೆ: ಚೆನೈ, ಆಂಧ್ರ, ಮಂಗಳೂರು ಪ್ರಯಾಣ ಇನ್ನಷ್ಟು ವೇಗವಾಗಿ!

ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಗಂಟೆ ಗಟ್ಟಲೆ ಕಾದು ನಿಲ್ಲಬೇಕು. ವಾಹನ ಸವಾರರಿಗೆ ಇದೀಗ ಸಿಟಿ ಹೊರವಲಯ ಹೈವೆಗಳನ್ನ ತಲುಪಲು ನೂತನ ಹೆದ್ದಾರಿ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿರುವುದು.

ಈ ಸುದ್ದಿ ಓದಿದ್ದೀರಾ?;KSRTC ಗೆ ನೂತನ ಮಾದರಿಯ ನಾನ್ ಎಸಿ ಸ್ವೀಪರ್ ಬಸ್ ಗಳ ಸೇರ್ಪಡೆ

ಕೋಲಾರ ಬೆಂಗಳೂರು ಹೆದ್ದಾರಿಯಿಂದ ಆರಂಭವಾಗುವ ನೂತನ ಹೆದ್ದಾರಿ ದೇವನಹಳ್ಳಿ ದೊಡ್ಡಬಳ್ಳಾಪುರ ಮೂಲಕ ಪಟ್ಟಣಗಳನ್ನ ಪ್ರವೇಶಿಸದೆ ಹೊರವಲಯದ ಫ್ಲೈ ಓವರ್ಗಳ ಮೂಲಕ ಸಾಗಿದ್ದು ಎಲ್ಲೆಡೆ ಕಿಲೋ ಮೀಟರ್ಗೆ ಒಂದರಂತೆ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಜೊತೆಗೆ ಒಂದು ಬದಿಯಲ್ಲಿ ಎರಡು ಹಾಗೂ ಮೂರು ಪಥಗಳ ಹೆದ್ದಾರಿಯನ್ನ ಮಾಡಲಾಗಿದ್ದು ಇಷ್ಟು ದಿನ ಹೊಸಕೋಟೆಯಿಂದ ದಾಬಸ್ ಪೇಟೆಗೆ ಮೂರು ಗಂಟೆಗೂ ಹೆಚು ಕಾಲ ಸಂಚರಿಸುತ್ತಿದ್ದ ವಾಹನ ಸವಾರರು ಇದೀಗ ಒಂದು ಗಂಟೆಯಲ್ಲೆ ಹೊಸಕೋಟೆಯಿಂದ ದಾಬಸ್ ಪೇಟೆಯನ್ನ ತಲುಪುತ್ತಿದ್ದಾರೆ.

ನೂತನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್ನ್ನು ಸಹ ದೂರದಿಂದಲೆ ರೀಡ್ ಮಾಡಬಹುದಾದಂತ ಹೈಟೆಕ್ ಕ್ಯಾಮೆರಾಗಳನ್ನ ಅಳವಡಿಸಿದ್ದು ಟೋಲ್ ಪ್ಲಾಜಾ ಬಳಿ ಕೂತು ವಾಹನಗಳ ಮೇಲೆ ಹದ್ದಿನ ಕಣ್ಣಿಡಬಹುದಾಗಿದೆ. ಜೊತೆಗೆ ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೂ ನೂತನ ಹೆದ್ದಾರಿ ಸಹಕಾರಿಯಾಗಿದೆ.

ಈ ಸುದ್ದಿ ಓದಿದ್ದೀರಾ?:ಕುಮಾರಪರ್ವತ ಚಾರಣಕ್ಕೆ ಇಂದಿನಿಂದ ಅವಕಾಶ

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!