• 8 ಸೆಪ್ಟೆಂಬರ್ 2024

ಮೊಬೈಲ್‌ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಅಂತ್ಯಗೊಳಿಸಿದ ಯುವತಿ!

 ಮೊಬೈಲ್‌ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಅಂತ್ಯಗೊಳಿಸಿದ ಯುವತಿ!
Digiqole Ad

ಮೊಬೈಲ್‌ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಅಂತ್ಯಗೊಳಿಸಿದ ಯುವತಿ!

ಹೈದರಾಬಾದ್‌: ಕೆಟ್ಟು ಹೋದ ಫೋನ್ ರಿಪೇರಿ ಮಾಡಿಸಿಕೊಡಲು ಪಾಲಕರು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜೈಪುರ ಮಂಡಲದ ವಲ್ಲಲ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ವಲ್ಲಲ ಗ್ರಾಮದ ಪ್ಯಾಗ ಸರಕ್ಕ ಮತ್ತು ಸ್ವಾಮಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು.

ಈ ಸುದ್ದಿಯನ್ನು ಓದಿದ್ದೀರಾ.?ವಿದೇಶಗಳಿಂದ 4009ಮಕ್ಕಳ ದತ್ತು ಸ್ವೀಕಾರ

ಮಗಳು ಸೈಶುಮಾ (19) ಮಂಚೇರಿಯಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ತಾನು ಬಳಸುತ್ತಿದ್ದ ಸ್ಮಾರ್ಟ್‌ಫೋನ್‌ ಕೆಟ್ಟು ಹೋಗಿತ್ತು. ಹೀಗಾಗಿ ರಿಪೇರಿ ಮಾಡಿಸಿಕೊಡುವಂತೆ ತಾಯಿ ಬಳಿ ಕೇಳಿಕೊಂಡಿದ್ದಳು. ಆದರೆ, ತಾಯಿ, ನೀನು ಆಗಾಗ ಫೋನ್ ಡ್ಯಾಮೇಜ್ ಮಾಡುತ್ತೀಯ, ಇದೀಗ ನಮ್ಮ ಬಳಿ ಹಣವಿಲ್ಲ, ರಿಪೇರಿ ಮಾಡಿಸಿಕೊಡಲು ಆಗುವುದಿಲ್ಲ ಎಂದು ಏರು ಧ್ವನಿಯಲ್ಲಿ ಬೈದು ಕಳುಹಿಸಿದ್ದರು. ನಾನು ಕೇಳಿದ್ದನ್ನು ಅಣ್ಣ ಏನಾದರೂ ಕೇಳಿದ್ದರೆ ತಕ್ಷಣವೇ ರಿಪೇರಿ ಮಾಡಿಸಿಕೊಡುತ್ತಿದ್ದರು. ಆದರೆ, ನಾನು ಕೇಳಿದರೆ ಯಾವಾಗಲೂ ಯಾವುದನ್ನೂ ಇಲ್ಲ ಅಂತಾರೆ ಎಂದು ಸೈಶುಮಾ ನೊಂದುಕೊಂಡಿದ್ದಾಳೆ.

ಈ ಸುದ್ದಿಯನ್ನು ಓದಿದ್ದೀರಾ.?ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದು  ಮಲೆ ಮಹದೇಶ್ವರ ಸ್ವಾಮಿಗೆ ಬೆಳ್ಳಿ ಕಾಣಿಕೆ 

ಇದೇ ದುಃಖದಲ್ಲಿದ್ದ ಸೈಶುಮಾ, ಮನೆಯವರೆಲ್ಲ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲೇ ಉಳಿದುಕೊಂಡಿದ್ದಳು. ಬಳಿಕ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಗಳ ಸ್ಥಿತಿಯನ್ನು ನೋಡಿದ ಪಾಲಕರು ಆಘಾತದಿಂದ ಕುಸಿದುಬಿದ್ದಿದ್ದಾರೆ. ಮಗಳ ಸಾವಿನ ದುಃಖ ತಾಳಲಾರದೇ ಪಾಲಕರು ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ