• 8 ಸೆಪ್ಟೆಂಬರ್ 2024

ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೇ 5.63 ಲಕ್ಷ ರೂ. ಕಳ್ಳತನ!

 ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೇ 5.63 ಲಕ್ಷ ರೂ. ಕಳ್ಳತನ!
Digiqole Ad

ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೇ 5.63 ಲಕ್ಷ ರೂ. ಕಳ್ಳತನ!

ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಕರ್ನೂಲ್ ಜಿಲ್ಲೆಯ ಅಡೋಲು ಪಟ್ಟಣದ ಟೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ನಗದು ಕಾಣಿಯಾಗಿದೆ. ಬೀರುವಿನ ಲಾಕರ್‌ಗಳಲ್ಲಿ ಇರಿಸಲಾಗಿದ್ದ 5.63 ಲಕ್ಷ ರೂ. ನಾಪತ್ತೆಯಾಗಿದೆ. ಲಕ್ಷ ಲಕ್ಷ ನಗದು ನಾಪತ್ತೆಯಾಗಿದ್ದರೂ ಕೂಡ ಬೀರುವಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಬೀಗಗಳು ಇದ್ದಂತೆಯೇ ಇದ್ದುದ್ದರಿಂದ ಇದು ಹೊರಗಿನವರ ಕೆಲಸವಲ್ಲ, ಠಾಣೆಯ ಒಳಗಿನವರ ಕೆಲಸ ಎಂದು ಸ್ಪಷ್ಟವಾಗಿದೆ. ಈ ವೇಳೆ ತನಿಖೆ ನಡೆಸಿದಾಗ ಬೀರುವಿನಲ್ಲಿದ್ದ ಹಣವನ್ನು ಗೃಹರಕ್ಷಕ ದಳದ ಸಿಬ್ಬಂದಿಯೇ ಕದ್ದಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿ ಓದಿದ್ದೀರಾ?:ಎಸ್ಸೆಸ್ಸೆಲ್ಸಿ ಮೊದಲ ಬ್ಯಾಂಕ್ ವಿಧ್ಯಾರ್ಥಿನಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಬಹಳ ನಂಬಿಕಸ್ಥನಾಗಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ವಿವಿಧ ಪ್ರಕರಣಗಳಲ್ಲಿ ಸಿಕ್ಕ ನಗದನ್ನು ನೋಡಿಕೊಳ್ಳಲು ಮನೋಜ್ ಅವರಿಗೆ ಜವಬ್ದಾರಿ ನೀಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ 5.63 ಲಕ್ಷ ರೂ ದೋಚಿ ತನಗೇನೂ ಗೊತ್ತಿಲ್ಲದವರಂತೆ ಪೊಲೀಸ್ ಠಾಣೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ. ಆದರೆ ಬೀರುವಿನಲ್ಲಿದ್ದ ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಪೊಲೀಸರನ್ನು ಕಾಡತೊಡಗಿದೆ. ಇದಾದ ಬಳಿಕ ಗೃಹರಕ್ಷಕ ದಳದ ಸಿಬ್ಬಂದಿ ಮನೋಜ್ ನನ್ನು ವಶಕ್ಕೆ ಪಡೆದಿದ್ದು, ತಾನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಪೊಲೀಸರು ಆತನಿಂದ 3 ಲಕ್ಷ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ರಿಮಾಂಡ್‌ಗೆ ಕಳುಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಸೂಟ್ ಕೇಸ್ ನಲ್ಲಿ ಅನಕೊಂಡ ಕೊಂಡೊಯ್ಯುತ್ತಿದ್ದ ವ್ಯಕ್ತಿ ಪೋಲಿಸ್ ವಶ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ