• 8 ಸೆಪ್ಟೆಂಬರ್ 2024

ಕಡಬ:ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ “ಬದುಕು ಕಟ್ಟಿದ ಬಗೆಗಳು” ಪುಸ್ತಕ ಕಡಬ ವಲಯದ ಪ್ರೌಡಶಾಲೆ ಹಾಗೂ ಕಾಲೇಜು ಗ್ರಂಥಾಲಯಕ್ಕೆ ವಿತರಣೆ.

 ಕಡಬ:ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ “ಬದುಕು ಕಟ್ಟಿದ ಬಗೆಗಳು” ಪುಸ್ತಕ ಕಡಬ ವಲಯದ ಪ್ರೌಡಶಾಲೆ ಹಾಗೂ ಕಾಲೇಜು ಗ್ರಂಥಾಲಯಕ್ಕೆ ವಿತರಣೆ.
Digiqole Ad

ಕಡಬ:ಧರ್ಮಸ್ಥಳದ ಧರ್ಮಾಧಿಕಾರಿಗಳಿಂದ “ಬದುಕು ಕಟ್ಟಿದ ಬಗೆಗಳು” ಪುಸ್ತಕ ಕಡಬ ವಲಯದ ಪ್ರೌಡಶಾಲೆ ಹಾಗೂ ಕಾಲೇಜು ಗ್ರಂಥಾಲಯಕ್ಕೆ ವಿತರಣೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ॥ಡಿ. ವೀರೇಂದ್ರ ಹೆಗ್ಗಡೆಯವರಿಂದ ಕಡಬ ತಾಲೂಕಿನ ಕಡಬ ವಲಯದ ಪ್ರೌಡಶಾಲೆ ಹಾಗೂ ಕಾಲೇಜುಗಳಿಗೆ ಡಾ॥ಬಿ.ಎ ವಿವೇಕ ರೈ ಬರೆದಿರುವ ಬದುಕು ಕಟ್ಟಿದ ಬಗೆಗಳು ಎಂಬ ಶ್ರೇಷ್ಟ ಕೃತಿಯ ಪುಸ್ತಕವನ್ನು ವಿತರಿಸಲಾಯಿತು. ಈ ಪುಸ್ತಕದ ಕೃತಿಯಲ್ಲಿ ಭಾಷೆ-ಸಾಹಿತ್ಯ-ಸಂಸ್ಕ್ರತಿ ˌಅಗಲಿದವರ ನೆನವರಿಕೆ ಎಂಬ ಎರಡು ಭಾಗಗಳಲ್ಲಿ 39 ಅಪ್ರಕಟಿತ ಬರಹಗಳಿದ್ದು ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದಾಗ ದಕ್ಷಿಣಕನ್ನಡ ದ ಸಾಂಸ್ಕ್ರತಿಕ ಹಾಗೂ ಸಾಹಿತ್ಶ ಲೋಕವನ್ನೊಮ್ಮೆ ಮೆಲುಕು ಹಾಕುವಂತಿದ್ದು ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ.ಪ್ರೌಡಶಾಲೆ ಹಾಗೂ ಕಾಲೇಜು ಶಿಕ್ಷಣ ಸಂಸ್ಥೆಯ ಗ್ರಂಥಾಲಯದಲ್ಲಿ ಇಟ್ಟು ಪ್ರತೀ ವಿದ್ಶಾರ್ಥಿಗಳೂ ಓದಿ ಸದುಪಯೋಗ ಪಡೆದುಕೊಳ್ಳಲು ಪ್ರೇರೇಪಿಸಲು ಶಿಕ್ಷಣ ಸಂಸ್ಥೆಗಳಿಗೆ ಪೂಜ್ಶ ಹೆಗ್ಗಡೆಯವರ ಸಂದೇಶವಾಗಿರುತ್ತದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ಕಡಬ ಸರಕಾರಿ ಪದವಿಪೂರ್ವ ಕಾಲೇಜು ˌ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಕಡಬ, ˌಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲˌ ಸರಕಾರಿ ಪ್ರೌಡಶಾಲೆ ಕಡಬ ಸೈಂಟೇನ್ಸ್ ಪ್ರೌಡಶಾಲೆ ಕಡಬ ಹಾಗೂ ಸರಸ್ವತಿ ಪ್ರೌಡಶಾಲೆ ಹನುಮಾನ್ ನಗರ ಕಡಬ ಶಾಲೆಗಳಿಗೆ ಬದುಕು ಕಟ್ಟಿದ ಬಗೆಗಳು ಪುಸ್ತಕವನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತಾಲೂಕು ಯುವಜನ ಒಕ್ಕೂಟದ ಅಧ್ಶಕ್ಷರಾದ ಶಿವಪ್ರಸಾದ್ ರೈ ಮೈಲೇರಿ .ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ಕಾಲೇಜು ಪ್ರಾಂಶುಪಾಲರು ಮುಖ್ಶೋಪಾಧ್ಯಾಯರು ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಕಡಬ ವಲಯದ ಕಾಲೇಜು ಹಾಗೂ ಪ್ರೌಡಶಾಲಾ ಮುಖ್ಯಸ್ಥರು ಪೂಜ್ಶ ವೀರೇಂದ್ರ ಹೆಗ್ಗಡೆಯವರಿಗೆ ಪುಸ್ತಕ ನೀಡಿದಕ್ಕಾಗಿ ಧನ್ಶವಾದ ಸಮರ್ಪಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ