• 7 ಸೆಪ್ಟೆಂಬರ್ 2024

ಗಡಿನಾಡ ಕರಾಡ ಸಮುದಾಯದ ಇತಿಹಾಸ.

 ಗಡಿನಾಡ ಕರಾಡ ಸಮುದಾಯದ ಇತಿಹಾಸ.
Digiqole Ad

ಗಡಿನಾಡ ಕರಾಡ ಸಮುದಾಯದ ಇತಿಹಾಸ.

Goddess Durga idol decorated at puja pandal in Kolkata, West Bengal, India. Durga Puja is biggest religious festival of Hinduism and is now celebrated worldwide.

ಚಾಲುಕ್ಯ ಅರಸರು ಕೆಲ ರಾಜಾಪುರ ಕರ್ಹಾಡ ಬ್ರಾಹ್ಮಣ ಕುಟುಂಬಗಳಿಗೆ ತೋಟಗಳನ್ನು ಉಂಬಳಿಯಾಗಿ ನೀಡಿ ಅವುಗಳ ಪಾಲನೆಯ ಜವಾಬ್ದಾರಿಯನ್ನು ಒಪ್ಪಿಸಿದ್ದರಂತೆ. ತಮ್ಮ ದೇವ ಸ್ಥಾನದ ಅಗತ್ಯಗಳಿಗೆ ಹೂ – ಹಣ್ಣು ಗಳನ್ನು ಪೂರೈಸುವುದು, ಯಜ್ಞ ಹೋಮಾದಿಗಳಿಗೆ ಸಮಿದೆ ಯನ್ನ ಪೂರೈಸುವುದು ಅವರ ಜವಾಬ್ದಾರಿ ಆಗಿತ್ತು. ಜತೆಗೆ ದೇವ ಸ್ಥಾನವನ್ನು ಆಶ್ರಯಿಸಿದ ಕುಟುಂಬಗಳ ಪಾಲನೆಯ ದಾಯಿತ್ವ ಅವರ ಮೇಲಿತ್ತು. ಆ ತೋಟಗಳಿಗೆ ‘ ಕರ್ಹಾಟಕ ‘ ಎಂದು ಹೆಸರು. ಈ ವೃತ್ತಿಯನ್ನು ಅವರು ಈಗಲೂ ಮುಂದುವರಿಸಿದ್ದಾರೆ.

ಎಲ್ಲಾ ಬ್ರಾಹ್ಮಣ ವರ್ಗಕ್ಕಿರುವಂತೆ ಕರಾಡಕ್ಕೂ ತನ್ನದೇ ಆದ ಆಚಾರ-ವಿಚಾರ-ಪರಂಪರೆ ಇದೆ.ಕರ್ಹಾಡ ಬ್ರಾಹ್ಮಣರು ದೇವಿ ಆರಾಧಕರಾದ ಋಗ್ವೇದಿ ಸ್ಮಾರ್ತರು. ಈಗ ದಕ್ಷಿಣ ಕನ್ನಡದ ಇತರ ಬ್ರಾಹ್ಮಣ ಪಂಗಡಗಳ ಜತೆಗೆ ಸಾಂಸ್ಕೃತಿಕ ವಾಗಿ ಬೆರೆತು ಹೋಗಿದ್ದಾರೆ. ಇವರು ತೋಟಗಾರಿಕೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಜತೆಗೆ ಅರ್ಚಕರೂ ಪುರೋಹಿತ ವೃತ್ತಿಯನ್ನು ಕೈಗೊಂಡವರೂ, ವಿದ್ವಾಂಸರೂ ಇದ್ದಾರೆ.

ತಾವು ವಾಸವಿರುವ ಪ್ರದೇಶದ ನಾಲ್ಕೂ ದಿಕ್ಕಿಗೆ ದುರ್ಗೆ/ದೇವಿ ದೇವಸ್ಥಾನಗಳನ್ನು ಸ್ಥಾಪಿಸುವುದು ಕರ್ಹಾಡರ ಪರಿಪಾಠ. ಇದು ಮಹಾರಾಷ್ಟ್ರದ ಕಾರ್ಹಾಡ ರಲ್ಲೂ ಕಾಣಬಹುದು. ಅಗಲ್ಪಾಡಿ ಅನ್ನಪೂರ್ಣೇಶ್ವರಿ , ಮಲ್ಲ , ತೈರೆ , ಆವಳ ದುರ್ಗಾ ಪರಮೇಶ್ವರಿ ದೇವಸ್ಥಾನಗಳು ಹೀಗೆ ಸ್ಥಾಪಿಸಿದವು. ಇವಲ್ಲದೆ ಹಲವಾರು ಚಿಕ್ಕ ಪುಟ್ಟ ದುರ್ಗಾ / ಶಕ್ತಿ ದೇವಾಲಯಗಳು ಕಾಸರಗೋಡಿನಲ್ಲಿ ಬೇರೆಯೂ ಇವೆ.

ಕರಾಡ ಬ್ರಾಹ್ಮಣರು ದಕ್ಷಿಣ ಭಾಗಕ್ಕೆ ವಲಸೆ ಬಂದ ಅನಂತರ ದುರ್ಗೆಯನ್ನು ತಮ್ಮ ಆರಾಧ್ಯ ದೇವತೆಯಾಗಿ ಪೂಜಿಸುತ್ತಾ ಬಂದಿದ್ದಾರೆ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ – ಅಗಲ್ಪಾಡಿ,ತೈರೆ,ಅವಳ ಪಂಜೆ ಹಾಗು ಕೊಂಗೂರು ಪ್ರದೇಶಗಳಲ್ಲಿ ಸುಮಾರು 500-600 ವರ್ಷಗಳಷ್ಟು ಹಿಂದೆ ಸ್ಥಾಪಿತವಾಯಿತೆಂದು ಅಲ್ಲಿನ ಕ್ಷೇತ್ರ ಪ್ರಶ್ನೆಗಳಿಂದ ತಿಳಿಯಲಾಗಿದೆ. . ಇಷ್ಟೇ ಅಲ್ಲದೆ, ಮಲ್ಲದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವೂ ನಮ್ಮವರ ಆಡಳಿತದಲ್ಲಿ ಬಹಳಷ್ಟು ಪುರೋಗತಿಯಲ್ಲಿ ಮುಂದುವರಿಯುತ್ತಿದೆ.ಈ ಪ್ರಮುಖ ದೇವಾಲಯಗಳಲ್ಲದೆ ಆಯಾ ಊರುಗಳಲ್ಲಿ ಕೆಲವು ಪ್ರಮುಖ ಮನೆತನದವರು ತಮ್ಮ ಕುಲದೇವರಾಗಿ ಮುನ್ನಡೆಸುವ ಅನೇಕ ದೇವಾಲಯಗಳಿವೆ.

ಉಪ್ಪಂಗಳ, ಚೆರ್ಕುಡ್ಲು, ಕುಂಟಿಕ್ಕಾನ, ಆಟಿಕುಕ್ಕೆ, ಕುಂಜಿರ್ಕಾನ,ನೆಕ್ಕಂಜೆ,ಬಡಕೆಕರೆ, ಇತ್ಯಾದಿ ಮನೆಯವರು ಶ್ರೀ ದುರ್ಗಾಪರಮೇಶ್ವರೀ ದೇವಿಯ ಪ್ರತ್ಯೇಕ ಗುಡಿ ಅಥವಾ ದೇವಾಲಯ ನಿರ್ಮಿಸಿ ಪೂಜಿಸುತ್ತಿದ್ದಾರೆ. ಅದೇ ರೀತಿ ಮೌವ್ವಾರು,ವಾಟೆತ್ತಿಲ ಜಾಲು,ಚಕ್ಕಣಿಕೆ, ಗುಲುಗುಂಜಿ ಮನೆಯವರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಗಳನ್ನು ನಡೆಸುತ್ತಿದ್ದಾರೆ.ಸೈಪಂಗಲ್ಲು,ಅಡ್ಕಾರು,ಕೊಟ್ಟ0ಗುಳಿ ಮನೆಯವರು ಶ್ರೀಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವರನ್ನು ಆರಾಧಿಸುತ್ತಿದ್ದಾರೆ.ಇಷ್ಟೇ ಅಲ್ಲದೆ,ತೈರೆ ಸಮೀಪದ ಶ್ರೀಮಹಾಲಕ್ಷ್ಮೀ ದೇವಸ್ಥಾನ, ಮುಂಡೋಳು ಮನೆತನದ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಮಂಗಳೂರಿನ ಶ್ರೀರಾಧಾಕೃಷ್ಣ ದೇವಾಲಯ -ಇವೂ ಕರಾಡ ಬ್ರಾಹ್ಮಣರಿಂದ ನಡೆದಲ್ಪಡುತ್ತಿರುವ ದೇವಾಲಯಗಳು.

ಭಾಷೆಯ ಆಧಾರದಲ್ಲಿ ಇವರಲ್ಲಿ ಕನಿಷ್ಠ ಮೂರು ಪಂಗಡಗಳಿವೆ:

೧. ಕಾಸರಗೋಡಿನ ಕರ್ಹಾಡಿ ಭಾಷೆ ( ಇದು ಹಳೆ ಕೊಂಕಣಿಯ ಒಂದು ರೂಪ. ಈಗ ಕನ್ನಡ, ತುಳು, ಮಲಯಾಳಂ ಗಳಿಂದ ಬಹಳಷ್ಟು ಪ್ರಭಾವಿತ ವಾಗಿದೆ) ಮಾತನಾಡುವ ಜನಸಂಖ್ಯೆ ಯಲ್ಲಿ ಹೆಚ್ಚಿರುವ ಕರಾಡ ಬ್ರಾಹ್ಮಣರು. ಗೋವಾದ ಕಾರ್ಹಾಡೆ ಬ್ರಾಹ್ಮಣರ ಉಪಪಂಗಡ ವಾದ ಗುರ್ಜರ್ ಪದ್ಯೆ/ ಉಪಾಧ್ಯಾಯ ರು ಇವರು ಎಂದು ಅಂದಾಜು.

೨. ಬೇಕಿಲ ಭಾಸ ಎಂಬ ಕರ್ಹಾಡಿಯ ಉಪಭಾಷೆ ಯನ್ನ ಮಾತನಾಡುವ ಒಂದು ವಿಭಾಗ ಕಾಸರಗೋಡಿನ ಬೇಕಲ ದ ಆಸು ಪಾಸು ವಾಸವಿದೆ. ಇವರು ರಾಜಾಪುರ ದಿಂದ ವಲಸೆ ಬಂದವರು ಇರಬೇಕು, ಇವರನ್ನು ರಾಜಾಪುರ ಕರಾಡ ಬ್ರಾಹ್ಮಣರು ಎನ್ನುತ್ತಾರೆ.

೩. ಮಂಗಳೂರು ಮತ್ತು ಉಡುಪಿ ಭಾಗಗಳಲ್ಲಿ ನೆಲೆಸಿರುವ ಈ ಪಂಗಡ ದವರಿಗೆ ಕನ್ನಡ ಮನೆ ಮಾತು. ಕಾರ್ಹಾಡೆ ಬ್ರಾಹ್ಮಣ ರ ಪೈಕಿ ದಕ್ಷಿಣ ಕನ್ನಡಕ್ಕೆ ಬಂದ ಕೊನೆಯ ಗುಂಪು ಇದು. ಇವರು ಮರಾಠರ ಆಳ್ವಿಕೆಯ ಕಾಲದಲ್ಲಿ ಕೊಂಕಣದಿಂದ ಜೀವನೋಪಾಯ ಅರಸಿ ಬಂದವರೆಂದು ಕಾಣುತ್ತದೆ. “ಇವರ ಮನೆ ಮಾತು ಮರಾಠಿ. ನಿಧಾನವಾಗಿ ಕನ್ನಡಕ್ಕೆ ಪರಿವರ್ತನೆಯಾಗುತ್ತಿದೆ‌. ಆದರೂ ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಮಾತಾಡುವವರು ಇದ್ದೇ ಇದ್ದಾರೆ.ಇವರಿಗೆ ಮಹಾರಾಷ್ಟ್ರದಲ್ಲಿರುವ ಕರ್ಹಾಡೆ ಬ್ರಾಹ್ಮಣರಿಗಿರುವಂತೆ ಕುಲನಾಮ(surname)ಗಳಿವೆ. (ಸಪ್ರೆ, ಮೋಘೆ, ಪರಾಡ್ಕರ್, ಪಂಡಿತ್,,ಘಾಟೆ,ದೇವ್,ಕಾನಿಟ್ಕರ್ ಇತ್ಯಾದಿ.).ಪಟವರ್ಧನ್ ಡೋಂಗರೆ ಇತ್ಯಾದಿ ಕೆಲವು ಕುಲನಾಮಗಳು ಚಿತ್ಪಾವನರಿಗೂ,ಕರ್ಹಾಡೆ ಯವರಿಗೂ ಸಾಮಾನ್ಯವಾಗಿವೆ.ಕರ್ನಾಟಕದ ಬೆಂಗಳೂರು, ಸುಳ್ಯ, ಪುತ್ತೂರು, ಮಂಗಳೂರುಗಳಲ್ಲಿ, ಕೇರಳದ ಕಾಸರಗೋಡು, ಪೆರ್ಲ, ಬದಿಯಡ್ಕಗಳಲ್ಲಿ ಕರಾಡ ಸಮುದಾಯದ ಜನ ವಾಸವಾಗಿದ್ದು ಕರಾಡ ಎಂದೇ ಕರೆಯಲ್ಪಡುವ ಭಾಷೆಯನ್ನು ಮಾತನಾಡುತ್ತಾರೆ.ಇದೀಗ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,ಕರಾಡರಲ್ಲಿ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆಯಿಂದ ಜನ ಮನಸ್ಸನ್ನು ಗೆದ್ದವರಿದ್ದಾರೆ. ಶ್ರೀ ಗಿರೀಶ್ ಭಾರದ್ವಾಜ್ ಇವರು ತೂಗುಸೇತುವೆಗಳ ನಿರ್ಮಾತೃ. ಶ್ರೀ ಬಾಲಕೃಷ್ಣ ಭಟ್ ಇವರು ವಿಧಾನ ಪರಿಷತ್ ಕರ್ನಾಟಕದ ಸದಸ್ಯರಾಗಿದ್ದವರು. ಶ್ರೀ ಬಳ್ಳಪದವು ಮಾಧವ ಭಟ್ಟರು ವೈದಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಶ್ರೀ ಪೆರ್ಲ ಕೃಷ್ಣ ಭಟ್, ಪೆರ್ಲ ಮಾಧವ ಭಟ್ ಇವರು ಬರಹಗಾರರು. ಶ್ರೀ ಯೋಗೀಶ ಶರ್ಮ, ಜಗದೀಶ್ ಕೊರೆಕ್ಕಾನ, ಬಾಲರಾಜ್ ಬೆದ್ರಡಿ ಇವರುಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ಪ್ರಾಕಾರಗಳಲ್ಲಿ ಪ್ರಖ್ಯಾತರು ಹಾಗೆಯೇ ಅನೇಕ ಕ್ಷೇತ್ರಗಳಲ್ಲಿ ಮಿಂಚಿದವರು ಅನೇಕರಿದ್ದಾರೆ . ಅಂತೆಯೇ ತಮ್ಮದೇ ಆದ “ಕರಾಡ ಸಿರಿ” ಮಾಸಪತ್ರಿಕೆಯು ಸಮುದಾಯದ ಆಗು – ಹೋಗುಗಳನ್ನು ಹಂಚುವಂತಹ ಕೆಲಸವನ್ನು ಮಾಡುತ್ತಿದೆ.

GOLD FACTORY NEWS

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

 

Digiqole Ad

ಈ ಸುದ್ದಿಗಳನ್ನೂ ಓದಿ