ಶೋಕದ ನಾಡು ವಯನಾಡಿನಲ್ಲಿ ಸತ್ತವರ ಸಂಖ್ಯೆ 270ಕ್ಕೆ, 200ಕ್ಕೂ ಹೆಚ್ಚು ಮಂದಿ ನಾಪತ್ತೆ.
ಶೋಕದ ನಾಡು ವಯನಾಡಿನಲ್ಲಿ ಸತ್ತವರ ಸಂಖ್ಯೆ 270ಕ್ಕೆ, 200ಕ್ಕೂ ಹೆಚ್ಚು ಮಂದಿ ನಾಪತ್ತೆ.
ವಯನಾಡಿನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸತ್ತವರ ಸಂಖ್ಯೆ 270 ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡಕೈಯಲ್ಲಿ ಭಾರೀ ಮಳೆಯಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು, ಮುಂಡಕೈ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರೂ ಸೇನೆ ಸೇತುವೆ ಕಾಮಗಾರಿ ಮುಂದುವರೆಸಿದೆ. ಕಳೆದ ದಿನ ಸೇನೆ ಸಿದ್ಧಪಡಿಸಿದ್ದ ಕಾಲುಸಂಕವೂ ಮುಳುಗಡೆಯಾಗಿತ್ತು. ಮಳೆಯಲ್ಲೂ ಯಾಂತ್ರೀಕೃತ ಹುಡುಕಾಟವನ್ನು ಮುಂದುವರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ತಂದಿರುವ ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಮನೆಗಳ ಅವಶೇಷಗಳು ಮತ್ತು ಮಣ್ಣನ್ನು ಸ್ಥಳಾಂತರಿಸುವ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೆಳಗ್ಗೆ ಇಲ್ಲಿ ಸೈನಿಕರು ತಪಾಸಣೆ ನಡೆಸಿದರೂ ಸಂಪೂರ್ಣವಾಗಿ ಅವಶೇಷಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಚಾಲಿಯಾರ್ ನಲ್ಲಿ ಇಂದಿನ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಗ್ಗೆ ಪುನರಾರಂಭವಾಗಲಿದೆ ಎಂದು ಹೇಳಲಾಗಿದೆ. ಇನ್ನು ಮುಂಡಕೈಗೆ ಆಗಮಿಸಿದ್ದ ಸಚಿವರಿಗೆ ಸ್ಥಳೀಯ ನಿವಾಸಿಗಳು ಅವಾಜ್ ಹಾಕಿದ ಘಟನೆಯು ನಡೆದಿದೆ. ಮೆಪ್ಪಾಡಿಯಿಂದ ದುರಂತ ನಡೆದ ಸ್ಥಳಕ್ಕೆ ವಾಹನಗಳನ್ನು ಸಾಗಿಸುತ್ತಿಲ್ಲ ಎಂಬ ಆರೋಪದ ಮೇಲೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಆಹಾರ ಸಾಾಗ್ರಿಗಳನ್ನು ಹೊತ್ತ ಗಾಡಿಗಳನ್ನೂ ಪೊಲೀಸರು ತಡೆದರು ಎಂದು ವಾಗ್ವಾದ ನಡೆದಿದೆ. ಭೂಕುಸಿತದ ಹಿನ್ನೆಲೆಯಲ್ಲಿ ಗುರುವಾರ 11.30ಕ್ಕೆ ಸರ್ವಪಕ್ಷ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಳ್ಳಲಿದ್ದಾರೆ. ತುರ್ತು ನಿಧಿಯನ್ನು ನಂತರ ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ. ವಯನಾಡಿನಲ್ಲಿನ 9 ಮಂದಿ ಸಚಿವರಿಗೆ ನಿಯಂತ್ರಣ ಕೊಠಡಿಗಳಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ವೈದ್ಯರನ್ನು ನೇಮಿಸಲು ಸಂಪುಟ ಸಭೆ ನಿರ್ಧರಿಸಿದೆ. ಮೈಸೂರಿಗೆ ಹೋಗುವವರು ವಯನಾಡು ಮಾರ್ಗವನ್ನು ತಪ್ಪಿಸಿ ಇರಿಟ್ಟಿ- ಕೂಟುಪುಳ ರಸ್ತೆಯಲ್ಲಿ ಹೋಗಬೇಕು ಎಂದು ಕಣ್ಣೂರು ಜಿಲ್ಲಾಡಳಿತ ತಿಳಿಸಿದೆ.
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.