• 22 ನವೆಂಬರ್ 2024

ಸಮೋಸ ತಿಂದು ಅನಾಥಶ್ರಮದಲ್ಲಿದ್ದ ಮೂವರು ಬಾಲಕಿಯರು ಸಾವು.

 ಸಮೋಸ ತಿಂದು ಅನಾಥಶ್ರಮದಲ್ಲಿದ್ದ ಮೂವರು ಬಾಲಕಿಯರು ಸಾವು.
Digiqole Ad

ಸಮೋಸ ತಿಂದು ಅನಾಥಶ್ರಮದಲ್ಲಿದ್ದ ಮೂವರು ಬಾಲಕಿಯರು ಸಾವು.

ಅನಕಪಳ್ಳಿ: ಆಂಧ್ರಪ್ರದೇಶದ ಅನಕಪಳ್ಳಿ ಜಿಲ್ಲೆಯ ಕೊತ್ತುರತ್ತಲ ಮಂಡಲ್ ನ ಕೈಲಾಸ ಪಟ್ಟಣದಲ್ಲಿರುವ ಅನಾಥಾಶ್ರಮದಲ್ಲಿ ಸಮೋಸ ತಿಂದು ಮೂವರು ಬಾಲಕಿಯರು ಮೃತಪಟ್ಟ ಅಘಾತಕಾರಿ ಘಟನೆ ನಿನ್ನೆ ನಡೆದಿದೆ. ಒಂದನೇ ತರಗತಿಯ ವಿದ್ಯಾರ್ಥಿನಿ ಜೋಶ್ನಾ, ಮೂರನೇ ತರಗತಿ ವಿದ್ಯಾರ್ಥಿನಿಯರಾದ ಭವಾನಿ ಮತ್ತು ಶ್ರದ್ಧಾ ಮೃತಪಟ್ಟ ಬಾಲಕಿಯರು. ಫುಡ್ ಪೊಯಿಸನ್ ಆದ ಕಾರಣ ಈ ದುರ್ಘಟನೆ ಸಂಭವಿಸಿದ್ದು ಎಂದು ಶಂಕಿಸಲಾಗಿದೆ. ಆಸ್ಪತ್ರೆಯಲ್ಲಿ 24 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಗಂಭೀರ ಸ್ಥಿತಿಯಲ್ಲಿರುವ 17 ಮಂದಿಯನ್ನು ವಿಶಾಖಪಟ್ಟಣದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಕಪಳ್ಳಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ