ತುಳುನಾಡಿನ ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳದಲ್ಲಿ ಸ್ವರ್ಣ ಪ್ರಶ್ನಾ ಚಿಂತನೆ.
ತುಳುನಾಡಿನ ಮೂಲ ದೇವರಾದ ಬಿರ್ಮೆರೆ ದಿವ್ಯ ಸಾನಿಧ್ಯ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ಪುಣ್ಯ ಸ್ಥಳದಲ್ಲಿ ಸ್ವರ್ಣ ಪ್ರಶ್ನಾ ಚಿಂತನೆ.
ಪುತ್ತೂರು: (ಆ24)ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ‘ಬ್ರಹ್ಮರಗುಂಡ’ ದಲ್ಲಿ ತುಳುನಾಡಿನ ಮೂಲ ದೇವರಾದ ಬಿರ್ಮರ ಬಗ್ಗೆ ಹಾಗೂ ಮೊಗೇರ ದೈವಗಳಾದ ಅವಳಿ ವೀರರಾದ ಮುದ್ದ -ಕಳಲರ ಐಕ್ಯ ಸ್ಥಳ ತಿಳಿಯಲು ‘ಸ್ವರ್ಣ ಪ್ರಶ್ನಾ ಚಿಂತನೆ’ ನಡೆಸಲಾಯಿತು. ಬೋರ್ಕರ್ ಕುಟುಂಬಸ್ಥರ ತರವಾಡಿನ ದಿವಾಕರ ರಾವ್ ಅವರ ಮನೆಯಲ್ಲಿ ನಡೆದ ಪ್ರಶ್ನಾ ಚಿಂತನೆಯನ್ನು ಮನಮೋಹನ್ ಬಲ್ಯಾಯ ಹಾಗೂ ಧನೇಶ್ ವೆಳ್ಳಿಕ್ಕೋಡ್ ನೆರವೇರಿಸಿದರು ಈ ಸಂದರ್ಭದಲ್ಲಿ ತುಳುನಾಡಿನ ಮೂಲ ದೇವರು ‘ಬಿರ್ಮರ ಗುಂಡ ‘ ಈ ಜಾಗದಲ್ಲಿಯೇ ಇದೆ ಮತ್ತು ಮೊಗೇರ ದೈವಗಳಾದ ಮುದ್ದ ಕಳಲರು ಐಕ್ಯವಾದ ‘ಬಿರ್ಮೆರ ಗುಂಡಿ / ಕಯ’ ಇದೇ ಎಂಬುದು ಸ್ಪಷ್ಟವಾಗಿ ಗೋಚರವಾಗಿದೆ ಇದು ಬಹಳ ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಬಿರ್ಮೆರ ಗುಂಡ (ಬ್ರಹ್ಮ ರ ಗುಂಡ) ವು ಮೊಗೇರರ ಆರಾಧ್ಯ ದೇವರ ಮೂಲ ಕ್ಷೇತ್ರವಾಗಲಿದೆ ಆದರೆ ಸ್ಥಳ ಜೀರ್ಣೋದ್ಧಾರ ಬಗ್ಗೆ ಪ್ರಶ್ನಾ ಚಿಂತನೆಯು ಮುಂದುವರಿಯಲಿದ್ದು,
ಅದಕ್ಕೂ ಮೊದಲು ಮೊಗೇರ ದೈವಗಳ ಪ್ರೀತ್ಯರ್ಥವಾಗಿ ‘ಮಂಜಸೇವೆ’ ಕೊಡಬೇಕೆಂದು ಕಂಡುಬಂದಿದೆ ಮುಂದಿನ ದಿನಗಳಲ್ಲಿ ಸರ್ವ ಮೊಗೇರ ಬಾಂಧವರ ಕೂಡುವಿಕೆಯೊಂದಿಗೆ ಇದೂ ನಡೆಯಲಿದೆ, ನಿನ್ನೆಯ ದಿನ ನಡೆದ ಪ್ರಶ್ನಾ ಚಿಂತನೆಯಲ್ಲಿ ದೂರದ ಮೂಡಿಗೆರೆ, ಹಾಸನ, ಕಾಸರಗೋಡು , ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.
REPORTED BY- SAVITA ISHWARAMANGALA
ಈ ಸುದ್ದಿ ಓದಿದ್ದೀರಾ: ಈಶ್ವರಮಂಗಲ ಊರ ಹೆಸರ ಇತಿಹಾಸ? ಇಲ್ಲಿದೆ! 👈
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.