• 9 ಡಿಸೆಂಬರ್ 2024

ಪಾಳ್ಯತಡ್ಕ ಊರ ಹೆಸರ ಹಿಂದಿನ ಕಥೆ! ಈಶ್ವರಮಂಗಲ ದ ಕಥೆ..

 ಪಾಳ್ಯತಡ್ಕ ಊರ ಹೆಸರ ಹಿಂದಿನ ಕಥೆ! ಈಶ್ವರಮಂಗಲ ದ ಕಥೆ..
Digiqole Ad
“ಪಾಳ್ಯತಡ್ಕ ” ಈ ಹೆಸರು ಈಗಿನ ಮಕ್ಕಳಿಗೆ ತಿಳಿದಿರಲಿಕ್ಕಿಲ್ಲ.. ಹಿಂದಿನ ಕಾಲದಲ್ಲಿ ರಾಜರು ಒಂದು ಊರಿಂದ

“ಪಾಳ್ಯತಡ್ಕ ” ಈ ಹೆಸರು ಈಗಿನ ಮಕ್ಕಳಿಗೆ ತಿಳಿದಿರಲಿಕ್ಕಿಲ್ಲ.. ಹಿಂದಿನ ಕಾಲದಲ್ಲಿ ರಾಜರು ಒಂದು ಊರಿಂದ ಮತ್ತೊಂದು ಊರಿನ ಮೇಲೆ ಯುದ್ದ ಮಾಡಲು ಕಳುಹಿಸುವ ಸೈನಿಕರ ಪಡೆ ದಂಡು ಪಾಳ್ಯ

ಈ ಪ್ರದೇಶದಲ್ಲಿ ಬೀಡು ಬಿಡುತ್ತದ್ದ ಜಾಗವೇ ಇದು.. ಸೈನಿಕ ಪಾಳ್ಯ ಸೇರಿದ “ಅಡ್ಕ ” ಅಂದರೆ ಸಮತಟ್ಟು ಪ್ರದೇಶ ಈ ಅಡ್ಕವೇ ಪಾಳ್ಯತಡ್ಕ.. ಎಲ್ಲಾ ದಂಡು ಪಾಳ್ಯಗಳು ಇಲ್ಲಿ ಸೇರುವ ಕಾರಣ ಈ ಸ್ಥಳ ಪಾಳ್ಯತಡ್ಕವಾಯಿತು…

ಈ ಜಾಗದಲ್ಲಿ ತುಳುನಾಡಿನ ವೀರ ಪುರುಷರಾದ “ಮುದ್ದ ಕಲಲರ ” ದೊಡ್ಡ ಇತಿಹಾಸವೆ ಇದೆ.. ಇಲ್ಲಿ ಸರ್ವರನ್ನೂ ಸಲಹಿ ಮಂಗಲವನ್ನು ಕರುಣಿಸೊ ಕಾರಣೀಕದ ಶಕ್ತಿಯಾದ ಈಶ್ವರ ದೇವರ ಆಲಯವು ಇರುವುದರಿಂದ ಈ ಕ್ಷೇತ್ರವು ಈಶ್ವರಮಂಗಲವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಪ್ರಸಿದ್ಧಿ ಪಡೆಯುತ್ತಿದೆ..

PALYATTADKA

✍️ ಯಂ.ರಾಮ ಈಶ್ವರಮಂಗಲ

(ನಾಟಕ ಬರಹಗಾರ , ನಿರ್ದೇಶಕ)

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ