• 11 ಜೂನ್ 2024

ಮೇನಾಲದಲ್ಲಿ ಬಸ್ ಗೆ ಸೈಡ್ ಕೊಡಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಜೀಪ್.

 ಮೇನಾಲದಲ್ಲಿ ಬಸ್ ಗೆ ಸೈಡ್ ಕೊಡಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಜೀಪ್.
Digiqole Ad

ಮೇನಾಲದಲ್ಲಿ ಸರಕಾರಿ ಬಸ್ ಗೆ ಸೈಡ್ ಕೊಡುವ ಆತುರದಲ್ಲಿ ಕರೆಂಟ್ ಕಂಬಕ್ಕೆ ಗುದ್ದಿದ ಜೀಪ್.

ಈಶ್ವರಮಂಗಲ: ಎದುರಿಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಸೈಡ್ ಕೊಡಲು ಹೋಗಿ ಜೀಪ್ ಒಂದು ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಈಶ್ವರಮಂಗಲ ದ ಮೇನಾಲ ಎಂಬಲ್ಲಿ ನಡೆದಿದೆ. ಕಾರಣವೆಂಬಂತೆ ಕಡಿದಾದ ದಾರಿ ಇದ್ದ ಕಾರಣ ಬಸ್ ಡ್ರೈವರ್ ಹಾಗೂ ಜೀಪ್ ಡ್ರೈವರ್ ( ವಿಶ್ವನಾಥ) ಈರ್ವರಿಗೂ ವಾಹನ ಚಲಾಯಿಸಲು ಕಷ್ಟಸಾಧ್ಯವಾಯಿತು.ಆದರೆ ಜೀಪು ನಿಯಂತ್ರಕ್ಕೆ ಸಿಗದೇ ಕರೆಂಟ್ ಕಂಬಕ್ಕೆ ಗುದ್ದಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.ಇತ್ತ ದೇಲಂಪಾಡಿ ಇಂದ ಪುತ್ತೂರಿಗೆ ಹೋಗುವ ಸರ್ಕಾರಿ ಬಸ್ ಹಾಗೂ ಈಶ್ವರಮಂಗಲದಿಂದ ದೇಲಂಪಾಡಿ ಗೆ ಜೀಪ್ ಹೊರಟಿತ್ತು. ಇದೇ ವೇಳೆ ಬಸ್ ಗೆ ದಾರಿ ಬಿಡಲೋಸುಗ ಜೀಪ್ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಗುದ್ದಿದೆ ಎನ್ನಲಾಗಿದೆ.ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ನೋವು ಸಂಭವಿಸಿಲ್ಲ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!