ಪುತ್ತೂರು: ಕೋಟ್ಯಾಡಿ, ಈಶ್ವರಮಂಗಲ ಮಾರ್ಗದಲ್ಲಿ ಹೆಚ್ಚುವರಿ ಬಸ್ ನೀಡಲು ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ.
ಪುತ್ತೂರು: ಕೋಟ್ಯಾಡಿ, ಈಶ್ವರಮಂಗಲ ಮಾರ್ಗದಲ್ಲಿ ಹೆಚ್ಚುವರಿ ಬಸ್ ನೀಡಲು ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ.
ಪುತ್ತೂರು: ಕೋಟ್ಯಾಡಿ – ಈಶ್ವರಮಂಗಲ – ಪುತ್ತೂರು ಅಥವಾ ಕುಂಟಾರು -ಈಶ್ವರಮಂಗಲ – ಪುತ್ತೂರು ಈ ದಾರಿಗಳಲ್ಲಿ ಯಾವುದಾದರೂ ಒಂದು ಕಡೆಗೆ ಹೆಚ್ಚುವರಿ ಬಸ್ ನೀಡುವ ಬಗ್ಗೆ ಮನವಿಯನ್ನು ಹಲವು ವರ್ಷಗಳಿಂದ ವಿದ್ಯಾರ್ಥಿಗಳು ನೀಡುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನ ದೊರೆತಿಲ್ಲ. ಈ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಗಳು ಈಶ್ವರಮಂಗಲ ತಲುಪುವಾಗ ಫುಲ್ ಆಗುತ್ತಿದ್ದು ಬಸ್ಸಿನ ಬಾಗಿಲಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿಯಿದೆ. 8:20 ಕ್ಕೆ ಈಶ್ವರಮಂಗಲ ತಲುಪುವ ಬಸ್ ಮೇನಾಲ – ಬೆಳ್ಳಿಚೆಡವು ಬಸ್ ನಿಲ್ದಾಣಗಳಲ್ಲೇ ರಶ್ ಆಗುತ್ತವೆ. ಈ ಬಸ್ ಗಳಿಗೆ ಮೂರರಷ್ಟು ಪಟ್ಟು ಮಕ್ಕಳು ಹೆಚ್ಚಿದ್ದಾರೆ. ಈ ಸಮಯಕ್ಕೆ ಬರುವ ಬಸ್ ಒಂದೇ ಆಗಿದ್ದು, ವಿದ್ಯಾರ್ಥಿಗಳು ಜಾಸ್ತಿಯಾದ ಕಾರಣ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಹಾಗೂ ಮೊದಲ ತರಗತಿಗಳು ಮಕ್ಕಳಿಗೆ ಹಲವು ಸಲ ಮಿಸ್ ಆಗುತ್ತವೆ. ಇದರಿಂದಾಗಿ ಬೇರೆ ಬೇರೆ ಕಾಲೇಜಿನ ಹಲವು ವಿದ್ಯಾರ್ಥಿಗಳು ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರಲ್ಲಿ ಮನವಿ ನೀಡಲು ಸೆಪ್ಟೆಂಬರ್ 2ರಂದು ಬೆಳಗ್ಗೆ 10:30ರ ಸಮಯಕ್ಕೆ ಕಚೇರಿಗೆ ಹೋಗಿರುತ್ತಾರೆ.( ಸರಕಾರಿ ಕಾಲೇಜು ಕೊಂಬೆಟ್ಟು ಪುತ್ತೂರು, ಸರಕಾರಿ ಕಾಲೇಜು ಕುಂಬ್ರ, ಫಿಲೋಮಿನಾ ಕಾಲೇಜು ಪುತ್ತೂರು , ವಿವೇಕಾನಂದ ಕಾಲೇಜು ಪುತ್ತೂರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು )ಆ ವೇಳೆಯಲ್ಲಿ ಶಾಸಕರು ಕಚೇರಿಯಲ್ಲಿ ಇಲ್ಲದ ಕಾರಣ ಅವರಿಗೆ ಕರೆ ಮಾಡಿ ವಿದ್ಯಾರ್ಥಿಗಳಿಗೆ ಕೊಟ್ಟಿರುತ್ತಾರೆ. ಕೂಡಲೇ ಶಾಸಕರು ಸಂಬಂದಿಸಿದ ಅಧಿಕಾರಿಗಳ ಜೊತೆ ಕಾನ್ಫರೆನ್ಸ್ ಕಾಲ್ ನಲ್ಲಿ ಹಾಕಿ ವಿದ್ಯಾರ್ಥಿನಿಯೊಬ್ಬಳು ಬಸ್ ಸಮಸ್ಯೆಯ ಬಗ್ಗೆ ಸಂಪೂರ್ಣವಾಗಿ ಮಾತನಾಡಿರುತ್ತಾಳೆ. ನಾವು ಶಾಸಕರ ಕೈಯ್ಯಲ್ಲೇ ಮನವಿ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಕಚೇರಿ ಹತ್ತಿರ ಕಾದು ಕುಳಿತಿದ್ದು, ಅಂದು ಅವರ ಹುಟ್ಟುಹಬ್ಬದ ದಿನವಾದುದರಿಂದ ತಡವಾಗಿ ಸುಮಾರು 2:15 ರ ಹೊತ್ತಿಗೆ ಅವರ ಕಛೇರಿಗೆ ಬಂದಿರುತ್ತಾರೆ. ತದನಂತರ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯ ಬಗ್ಗೆ ಶಾಸಕರಲ್ಲಿ ಹೇಳಿ ಮನವಿ ಕೊಟ್ಟಿರುತ್ತಾರೆ. ವಿದ್ಯಾರ್ಥಿಗಳ ಕಷ್ಟವನ್ನು ಅರಿತ ಶಾಸಕರು ಗಂಭೀರವಾಗಿ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಮೂರು ದಿನಗಳೊಳಗೆ ಪರಿಹರಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಲಾಯರ್ ಚಂದ್ರಹಾಸ ಇವರು ವಿದ್ಯಾರ್ಥಿಗಳ ಪರವಾಗಿ ಶಾಸಕರಲ್ಲಿ ಮಾತನಾಡಿದ್ದಾರೆ. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಇವರೂ ಶಾಸಕರಲ್ಲಿ ಈ ಬಗ್ಗೆ ಮಾತನಾಡಿದರು.
ವರದಿ: ಸ್ಥಳೀಯರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.