• 3 ಡಿಸೆಂಬರ್ 2024

ಹಣ ಪಾವತಿಸಲು ಯುಪಿಐ ವಿಧಾನ ಬಳಸುವವರಿಗೆ ಸಿಹಿ ಸುದ್ದಿ!

 ಹಣ ಪಾವತಿಸಲು ಯುಪಿಐ ವಿಧಾನ ಬಳಸುವವರಿಗೆ ಸಿಹಿ ಸುದ್ದಿ!
Digiqole Ad

ಹಣ ಪಾವತಿಸಲು ಯುಪಿಐ ವಿಧಾನ ಬಳಸುವವರಿಗೆ ಸಿಹಿ ಸುದ್ದಿ!

ನವದೆಹಲಿ : ಹಣ ಪಾವತಿಸಲು ಫೋನ್ ಪೇ, ಗೂಗಲ್ ಪೇ ಮುಂತಾದ ಯುಪಿಐ( ಯುನಿಫೈಡ್ ಪೇಮೆಂಟ್ ಇಂಟರ್ಫೇಸ್) ವಿಧಾನ ಬಳಸುವವರಿಗೊಂದು ಸಿಹಿ ಸುದ್ದಿ ಬಂದಿದೆ. ಈಗ ಯುಪಿಐ ಟ್ರಾನ್ಸಾಕ್ಷನ್ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಸಾಮಾನ್ಯವಾಗಿ ಯುಪಿಐ ಮೂಲಕ ಹಣ ಪಾವತಿಸುವಾಗ ಒಂದು ಟ್ರಾನ್ಸ್ಯಾಕ್ಷನ್ ನಲ್ಲಿ 1 ಲಕ್ಷ ರೂ.ವರೆಗೆ ಮಾತ್ರ ಹಣ ಪಾವತಿಸಬಹುದಿತ್ತು. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ತನ್ನ ಪಾವತಿ ಮಿತಿಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಈಗ ಒಂದೇ ಬಾರಿಗೆ ರೂ. 5 ಲಕ್ಷ ವರೆಗೆ ಪಾವತಿ ಮಾಡಬಹುದು. ತೆರಿಗೆ ಪಾವತಿಗಳಿಗೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ, ಐಪಿಓ ಮತ್ತು ಆರ್ ಬಿ ಐ ರೀಟೇಲ್ ಡೈರೆಕ್ಟ್ ಸ್ಕೀಮ್ ಗಳಿಗೂ ಯುಪಿಐ ಮೂಲಕ ಈಗ ಒಂದೇ ಬಾರಿಗೆ 5 ಲಕ್ಷ ರೂ. ವರೆಗೆ ಪಾವತಿ ಮಾಡಬಹುದು. ಒಂದೇ ವೈವಾಟಿನಲ್ಲಿ 5 ಲಕ್ಷ ರೂ ವರೆಗೆ ಪಾವತಿಸಲು ಅವಕಾಶ ಇರುವುದರಿಂದ ಚೆಕ್ ಅಥವಾ ಕಾರ್ಡ್ ಬಳಕೆ ಅಗತ್ಯವಿರುವುದಿಲ್ಲ. ಈಗಾಗಲೇ ಉಲ್ಲೇಖಿಸಲಾದ ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರವೇ ಈ ಮಿತಿ ಹೆಚ್ಚಳ ಅನ್ವಯವಾಗುತ್ತದೆ. ಈ ಕುರಿತು ಎನ್ಪಿಸಿಐ ಹೊಸ ಯುಪಿಐ ಟ್ರಾನ್ಸಾಕ್ಷನ್ ಅಪ್ಪರ್ ಲಿಮಿಟೆಡ್ ಬಗ್ಗೆ ಮೊದಲೇ ಸೂಚನೆ ನೀಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ