ಹೀಗೊಂದು ಚಾಂಪಿಯನ್ ಪಟ್ಟ- ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಯುವತಿ!
ಹೀಗೊಂದು ಚಾಂಪಿಯನ್ ಪಟ್ಟ- ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಯುವತಿ!
ಬೆಂಗಳೂರು: ಹಣಗಳಿಸಲು ಹಲವು ವಿಧಾನಗಳಿವೆ, ಆದರೆ ಇಲ್ಲಿ ಯುವತಿಯೊಬ್ಬಳು ನಿದ್ದೆ ಮಾಡಿ 9 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡ ಪ್ರಸಂಗವೊಂದು ನಡೆದಿದೆ.
ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಎಂಬಾಕೆ ವೇಕ್ ಫಿಟ್ ನ ವಿಶಿಷ್ಟ ಇಂಟರ್ನ್ ಶಿಪ್ ಕಾರ್ಯಕ್ರಮದ 3ನೇ ಸೀಸನ್ ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ನಿದ್ರಿಸುವ ಇಂಟರ್ನ್ ಶಿಪ್ ಮೂಲಕ 9 ಲಕ್ಷ ರೂಪಾಯಿ ನಗದು ಬಹುಮಾನ ಗೆದ್ದಿದ್ದಾಳೆ.
ಈ ಕಾರ್ಯಕ್ರಮದಲ್ಲಿ ಪ್ರೀಮಿಯಂ ಹಾಸಿಗೆ ಮತ್ತು ಸಂಪರ್ಕವಿಲ್ಲದ ಟ್ರ್ಯಾಕರನ್ನು ಒದಗಿಸಲಾಗುತ್ತದೆ. ಇಂಟರ್ನ್ ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ಮಾರ್ಗದರ್ಶಕರ ಕಾರ್ಯಗಾರಗಳಲ್ಲಿ ಹಾಜರಾಗಬೇಕಿದೆ. ಇಂಟರ್ ಶಿಪ್ ನಲ್ಲಿ ಆಯ್ಕೆ ಆದವರಿಗೆ ಹಲವು ಪ್ರಕ್ರಿಯೆಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ವಿಡಿಯೋ ಕರೆಯಲ್ಲಿ ಅಭ್ಯರ್ಥಿಗಳು ನಿದ್ರೆ ಮಾಡುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ನಂತರ ಫೈನಲಿಸ್ಟುಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕುರಿತಾಗಿ ವೈಯಕ್ತಿಕ ಸಂದರ್ಶನಗಳಿಗೆ ಒಳಗಾದರು. ಅದರಂತೆ ಸಾಯಿಶ್ವರಿ ಪಾಟೀಲ್ ವೇಕ್ ಫಿಟ್ ನ ವಿಶಿಷ್ಟ ಇಂಟರ್ನ್ ಶಿಪ್ ಕಾರ್ಯಕ್ರಮದ ಮೂರನೇ ಸೀಸನ್ ನಲ್ಲಿ ‘ಸ್ಲೀಪ್ ಚಾಂಪಿಯನ್’ ಪಟ್ಟ ಗೆದ್ದಿದ್ದಾರೆ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.