ಈ ಕೆರೆಯಲ್ಲಿ ಮಿಂದೆದ್ದರೆ ಎಂಥಹಾ ಚರ್ಮರೋಗದಿಂದಲೂ ಮುಕ್ತಿ!
ಈ ಕೆರೆಯಲ್ಲಿ ಮಿಂದೆದ್ದರೆ ಎಂಥಹಾ ಚರ್ಮರೋಗದಿಂದಲೂ ಮುಕ್ತಿ!
ಮದುವೆ ಆಗದವರಿಗೆ ಕಂಕಣಭಾಗ್ಯ ಕೂಡಿಬರಲು, ಮಕ್ಕಳಿಲ್ಲದವರಿಗೆ ಸಂತಾನಪ್ರಾಪ್ತಿಗೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಂಪತ್ತು ವೃದ್ಧಿಗೆ, ಆರೋಗ್ಯ ಇಲ್ಲದರವಿಗೆ ಉತ್ತಮ ಆರೋಗ್ಯ ಕರುಣಿಸುವ ಅದೆಷ್ಟೋ ದೇಗುಲಗಳು ಭಾರತದಲ್ಲಿವೆ. ಇದು ಅಂಥಹದ್ದೇ ಒಂದು ದೇವಸ್ಥಾನ. ಎಂಥಹಾ ಚರ್ಮರೋಗವಿದ್ದರೂ ಈ ದೇವಸ್ಥಾನಕ್ಕೆ ಆಗಮಿಸಿ ಹರಕೆ ಸಲ್ಲಿಸಿದರೆ ವಾಸಿಯಾಗುತ್ತದೆ ಎಂಬ ನಂಬಿಕೆಯಿದೆ.
ಯಾಕೆಂದರೆ ಪ್ರಸಿದ್ಧ ದೇವಾಲಯದಲ್ಲಿರುವ ಈ ಕೆರೆಯಲ್ಲಿ ಮಿಂದೆದ್ದರೆ ಸಾಕು ಎಂಥಹದ್ದೇ ಚರ್ಮ ರೋಗವಿರಲಿ ವಾಸಿಯಾಗುತ್ತದೆ. ಅದೆಷ್ಟೋ ಕಡೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಯಾವುದೇ ಪ್ರಯೋಜನವಾಗದ ಮಂದಿ ಈ ದೇವಾಲಯಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸಿ, ಕಲ್ಯಾಣಿಯಲ್ಲಿ ಮಿಂದೆದ್ದು ಚರ್ಮರೋಗದಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಯಾವುದು ಆ ದೇವಸ್ಥಾನ, ಚರ್ಮರೋಗ ಕಳೆಯುವ ಆ ದೇವಸ್ಥಾನವೆಲ್ಲಿದೆ ತಿಳಿಯೋಣ ಬನ್ನಿ.
ಹೌದು,ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮುಜಂಗಾವು ಎಂಬ ಹೆಸರಿನ ದೇವಸ್ಥಾನ. ಈ ದೇವಾಲಯದಲ್ಲಿ ಪಾರ್ಥಸಾರಥಿ ಹೆಸರಿನಿಂದ ಕೃಷ್ಣನನ್ನು ಆರಾಧಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಚರ್ಮ ರೋಗದ ಪರಿಹಾರಕ್ಕಾಗಿಯೇ ಬರುತ್ತಾರೆ. ಚರ್ಮರೋಗವಿದ್ದಾಗ ದೇವಸ್ಥಾನಕ್ಕೆ ಆಗಮಿಸಿ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡು ಹರಕೆ ಹೇಳಿಕೊಳ್ಳಬೇಕು.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚರ್ಮರೋಗ ಕಡಿಮೆಯಾಗೋಕೆ ಇಲ್ಲಿನ ಕೆರೆಯೇ ಕಾರಣ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಹೀಗಾಗಿ ದೇವರ ಮುಂದೆ ನಿಂತು ಹರಕೆ ಕಟ್ಟಿಕೊಳ್ಳುವ ಭಕ್ತರು ಇಲ್ಲಿನ ಕೆರೆಯಲ್ಲಿ ಸ್ನಾನ ಮಾಡಲೇ ಬೇಕು. ಇನ್ನು ಈ ಕೆರೆಯಲ್ಲಿ ಪುಟ್ಟ ಪುಟ್ಟ ಮೀನುಗಳಿದ್ದು, ಹರಕೆ ಹೇಳಿಕೊಳ್ಳುವ ಭಕ್ತರು ಮೀನುಗಳಿಗೆ ದೇವಸ್ಥಾನದಿಂದ ನೀಡಲಾಗುವ ಅಕ್ಕಿ ಹಾಗೂ ಹುರುಳಿಯನ್ನು ನೀಡುತ್ತಾರೆ. ಕೆರೆಗೆ ಸುತ್ತು ಬರುತ್ತಾ ಕೆರೆಗೆ ಹುರುಳಿ, ಅಕ್ಕಿ ಹಾಕುವ ಮೂಲಕ ಪ್ರದಕ್ಷಿಣೆ ಮುಗಿಸಿ ಕೆರೆಯಲ್ಲಿ ಮಿಂದೆದ್ದು ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ.
ದೇವರಿಗೆ ಸೌತೆಕಾಯಿ ಅರ್ಪಿಸುವ ಹರಕೆ..!
ಇಲ್ಲಿ ಹರಕೆಯಾಗಿ ಯಾವುದನ್ನು ನೀಡುತ್ತಾರೆ ಅಂತ ಹೇಳಿದ್ರೆ ನಿಮಗೆ ಆಶ್ಚರ್ಯವಾಗುತ್ತೆ. ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ಮುಳ್ಳುಸೌತೆಯನ್ನು ನೀಡುವುದು ವಿಶೇಷ. ಇದರ ಜೊತೆಯಲ್ಲಿ ಹಣ್ಣು ಕಾಯಿಯನ್ನು ಸಹ ದೇವರಿಗೆ ಸಮರ್ಪಿಸಲಾಗುತ್ತದೆ.
ಇತಿಹಾಸ
ಈ ಹರಕೆಯ ಬಗ್ಗೆಯೂ ಇಲ್ಲಿನ ಸ್ಥಳ ಪುರಾಣ ಒಂದು ಕಥೆಯನ್ನು ಹೇಳುತ್ತೆ ದ್ವಾಪರ ಯುಗದಲ್ಲಿ ಮುಜುಕುಂದ ಮುನಿ ಇಲ್ಲಿ ಕೃಷ್ಣನ ಕುರಿತಾಗಿ ತಪಸ್ಸು ಮಾಡಿದ್ದರು. ಆಗ ಪ್ರತ್ಯಕ್ಷರಾದ ದೇವರಿಗೆ ಹತ್ತಿರದ ಬಳ್ಳಿಯಲ್ಲಿದ್ದ ಸೌತೆಕಾಯಿಯನ್ನು ನೈವೇದ್ಯವಾಗಿ ಅರ್ಪಿಸಿದ್ರು. ಹೀಗಾಗಿ ಇಲ್ಲಿ ಇಂದಿಗೂ ದೇವರಿಗೆ ಸೌತೆಕಾಯಿಯನ್ನು ಅರ್ಪಿಸಲಾಗುತ್ತೆ.
ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ ಕಾವೇರಿ
ಮುಜಂಗಾವು ಕೆರೆಯಲ್ಲಿ ಮಿಂದೆದ್ದರೆ ಚರ್ಮರೋಗಗಳು ಕಡಿಮೆಯಾಗುತ್ತದೆ ಅನ್ನೋದಕ್ಕೆ ಹಿನ್ನಲೆಯೂ ಇದೆ. ತಲಕಾವೇರಿಯಿಂದಲೇ ಈ ಕಲ್ಯಾಣಿಗೆ ನೀರು ಬರುತ್ತೆ ಅನ್ನೋದು ಭಕ್ತರ ನಂಬಿಕೆ. ವರ್ಷಕ್ಕೆ ಒಂದು ಬಾರಿ ಕಾವೇರಿ ಸಂಕ್ರಮಣದಂದು ಇಲ್ಲಿಗೆ ಕಾವೇರಿ ಗುಪ್ತಗಾಮಿನಿಯಾಗಿ ಹರಿದು ಬರುತ್ತಾಳೆ ಎನ್ನೋದು ಪ್ರತೀತಿ. ಹೀಗಾಗಿ ಔಷಧೀಯ ಗುಣಗಳಿರುವ ಕೆರೆಯ ನೀರಿನಿಂದ ಚರ್ಮರೋಗಗಳು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ. ಕಾವೇರಿ ಸಂಕ್ರಮಣದಂದು ಇಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ. ಮುಂಜಾನೆಯೇ ತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಹಾಗಾಗಿ,ಒಟ್ಟಿನಲ್ಲಿ ,ಕಾರಣಿಕ ಕ್ಷೇತ್ರ ಮುಜಂಗಾವು ಇತಿಹಾಸ ಪ್ರಸಿದ್ಧವಾಗಿದೆ..
ಸಾಧ್ಯವಾದಷ್ಟು ನಿಮ್ಮವರಿಗೆ ಹಂಚಿ….ಧನ್ಯವಾದಗಳು..ಸರ್ವರಿಗೂ ಸನಾತನದ ಪರಿಚಯ ಮಾಡಿಸೋಣ…..