• 8 ಸೆಪ್ಟೆಂಬರ್ 2024

ಸಹನಾ ಮಾತೆಯರು: ಅಂಗನವಾಡಿ ಸಹಾಯಕಿಯರ ಬಗ್ಗೆ ಒಂದಿಷ್ಟು

 ಸಹನಾ ಮಾತೆಯರು: ಅಂಗನವಾಡಿ ಸಹಾಯಕಿಯರ ಬಗ್ಗೆ ಒಂದಿಷ್ಟು

_exposure _upscale

Digiqole Ad

ಸಹನಾ ಮಾತೆಯರು: ಅಂಗನವಾಡಿ ಸಹಾಯಕಿಯರ ಬಗ್ಗೆ ಒಂದಿಷ್ಟು!

ಸರಕಾರದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ .. ಹೊಗಳಿ ಬರೆದ ಲೇಖನವು ಬಂದಿದೆ ತೆಗಳಿ ಖಂಡಿಸುವ ಲೇಖನವು ಬಂದಿದೆ…

ಹಲವಾರು ಕೆಲಸಗಳ ನಡುವೆ ಅತೀ ಕಷ್ಟದ ಕೆಲಸವೆಂದರೆ ಅದು ಅಂಗನವಾಡಿಯ ಸಹಾಯಕಿಯ ಕೆಲಸ ಆಗಿರಬಹುದು ಎಂದು ನನ್ನ ಅನಿಸಿಕೆ…

ಮನೆಯನ್ನು ನಡೆಸಲು, ಅಥವ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಸಲುವಾಗಿ ಕೆಲವರು ಈ ಕೆಲಸಕ್ಕೆ ಸೇರಿಕೊಂಡಿರುತ್ತಾರೆ..

ಸರಕಾರದ ಕೆಲಸ. ನಾಳೆ ಏನಾದರು ಒಂದು ಪ್ರಯೋಜನ ಆದಿತು ಎಂಬ ನಂಬಿಕೆ ಅವರಲ್ಲಿದೆ…

ಇವರು ಕೆಲಸವನ್ನು ನಿಭಾಸಿಕೊಂಡು ಹೋಗುದನ್ನು ಮೆಚ್ಚಲೇಬೇಕು.. ಯಾಕಂದ್ರೆ ಕಾಲಿ ಅಡಿಗೆ ಮಾಡಿ ಮಕ್ಕಳಿಗೆ ಬಡಿಸಿ ಪಾತ್ರ ತೋಳೆಯುದು ಮಾತ್ರ ಇವರ ಕೆಲಸವಲ್ಲ.. ಮನೆಯಲ್ಲಿ ಒಂದು ಮಗುವನ್ನೇ ನೋಡಿ ಕೊಳ್ಳೊದು ಕಷ್ಟ ಇರುವ ಈ ಕಾಲದಲ್ಲಿ ಹತ್ತು ಇಪ್ಪತೈದು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೊಳ್ಳೊದು ಒಂದು ದೊಡ್ಡ ಕೆಲಸ… ಮಕ್ಕಳು ಗಲೀಜು ಮಾಡಿದರೆ ತೊಳೆದು ಸ್ವಚ್ಛ ಮಾಡಬೇಕು… ಮಕ್ಕಳು ಹೊರಗೆ ಹೋಗದಂತ್ತೆ ನೋಡಿ ಕೊಳ್ಳಬೇಕು… ಟೀಚರ್ ಮೀಟಿಂಗ್ ಆಫೀಸ್ ಕೆಲಸದ ನಿಮಿತ್ತ ಹೋದರೆ .. ಮತ್ತೂ ಜಾಗ್ರತೆಯಿಂದ ಸಹನೆಯಿಂದ ಮಕ್ಕಳನ್ನು ನೋಡಿಕೊಂಡು ಅವರಿಗೆ ಆಟ ಪಾಠಗಳನ್ನು ಹೇಳಿಕೊಡಬೇಕು.. ಒಟ್ಟಿಗೆ ಅವರು ತಿಂದ ಪಾತ್ರೆಗಳನ್ನು ತೊಳೆದು ಸ್ವಚ್ಛ ಮಾಡ್ಬೇಕು.. ಅದರೊಟ್ಟಿಗೆ ತಾಯಂದಿರಿಗೆ ಅಲ್ಲಿಂದ ಕೊಡುವ ಆಹಾರ ಪದಾರ್ಥಗಳನ್ನು ತೂಕ ಮಾಡಿ ಕಟ್ಟಿ ಕೊಡಬೇಕು.. ಇಷ್ಟೆಲ್ಲ ಕೆಲಸಗಳ ಮಧ್ಯೆ ತರಕಾರಿ ಕೃಷಿ ಅಂಗನವಾಡಿಯ ಸುತ್ತ ಇದ್ದ ಹುಲ್ಲು ತೆಗೆಯುವುದು.. ಅದರೊಂದಿಗೆ ಕೆಲವು ಪೋಷಕರ ಬಿಟ್ಟಿ ಬೈಗುಳ.. ..ಹೀಗೆ ಹಲವಾರು ಕೆಲಸಗಳು…. ಇಷ್ಟೆಲ್ಲ ಕಷ್ಟಪಡುವ ಇವರನ್ನು ಕೆಲವು ಕೇಂದ್ರ ತಪಾಸಣೆಗೆ ಬರುವ ಮೇಲಿನ ಅಧಿಕಾರಿಗಳು ನೋಡಿ ಮಾತಾಡುವ ಸೌಜನ್ಯವು ಇಲ್ಲದವರು ಇದ್ದಾರೆ.. ಮಾತಾನಾಡಿದರೆ ತಮ್ಮ ಹುದ್ದೆಗೆ ಅವಮಾನವೇನೊ ಎನ್ನುವ ರೀತಿಯಲ್ಲಿ ವರ್ತಿಸುವರು ಇದ್ದಾರೆ… ಅದೇ ಮೇಲಧಿಕಾರಿಗಳು ಮಕ್ಕಳ ಬಗ್ಗೆ ಪೆನ್ನಲ್ಲಿ ಬರೆದರೆ. ಈ ತಾಯಂದಿರು ತಮ್ಮ ಬರೇ ಕೈಯಲ್ಲೇ ತಿದ್ದಿ ತೀಡಿ ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ನೀಡುವಲ್ಲಿ ಸಹಾಯಕಿರಾಗುತ್ತಾರೆ… ಅವರಿಗೆ ಅದಕ್ಕಾಗಿ ಹೆಚ್ಚು ಸಂಬಳವೂ ಬರುವುದಿಲ್ಲ.. ಬರುವ ಚಿಕ್ಕ ಮೊತ್ತವೇ ಅವರಿಗೆ ತೃಪ್ತಿ.. ಕೆಲವು ಸಲ ಅದನ್ನು ನೀಡಲು ಎರಡು ತಿಂಗಳು ಮೂರು ತಿಂಗಳು ಕಾಯಿಸುವುದು ಉಂಡು.. ಕೋಟಿ ಕೋಟಿ ಹಣ ಗುಳ್ಳುಂ ಮಾಡುವಾಗ ಯಾವುದೇ ಅಡೆ ತಡೆ ಬಾರದ್ದು ಇವರ ಸಣ್ಣ ಮೊತ್ತವನ್ನು ಕೊಡಲು ಕಾಯಿಸುವ ಮೇಲಧಿಕಾರಿಗಳು ಇದ್ದಾರೆ… ಹಲವಾರು ಸಂಘ ಸಂಸ್ಥೆಗಳಿಂದ ಸಾಲ ಪಡೆದವರು ಸಾಲದ ಕಂತು ಕಟ್ಟಲು ತಮ್ಮ ತಿಂಗಳ ಈ ಚಿಕ್ಕ ಮೊತ್ತಕ್ಕಾಗಿ ಕಾದು ಹಣ ಬಾರದೆ ಇದ್ದಾಗ ಸಾಲ ಕೊಟ್ಟವರ ಕಡೆಯಿಂದ ಬೈಗುಳಗಳನ್ನು ಕೇಳಬೇಕಾಗುತ್ತದೆ.. ಇವರ ಒಂದು ತಿಂಗಳ ಸಂಬಳದ ಹಣ.. ಅದೇ ಮೇಲಾಧಿಕಾರಿಗಳ ಒಂದು ದಿನದ ಖರ್ಚಿನ ಹಣ ಆಗಿರಬಹುದು.. ಅದಕ್ಕಾಗಿ ಆಯಾಯ ತಿಂಗಳಿಗೆ ಸರಿಯಾಗಿ ಸಂಬಳಗಳನ್ನು ನೀಡಿದರೆ ಅವರಿಗೂ ತಾವು ಮಾಡುವ ಕೆಲಸದಲ್ಲಿ ಜಾಸ್ತಿ ಗೌರವ ಬರುತ್ತದೆ.. ತಿಂಗಳಿಗೆ ಅರ್ವತ್ತು ಎಪ್ಪತ್ತು ಸಾವಿರ ಸಂಬಳ ಪಡೆಯುವರಿಗೆ.. ಈ ತಿಂಗಳಿಡೀ ಆರು ಸಾವಿರಕ್ಕೆ ದುಡಿಯುವ ಈ ತಾಯಂದಿರ ಕಷ್ಟ ತಿಳಿದರೆ ಉತ್ತಮ.. ಎಲ್ಲರೂ ತಮ್ಮ ಹೊಟ್ಟೆಪಾಡಿಗಾಗಿ ದುಡಿಯುವಾಗ.. ಎಲ್ಲರ ಮೇಲಿರಲಿ ನಮ್ಮ ಗೌರವ.. ಗೌರವ ಕೊಡುದ್ದಕ್ಕೂ. ಪಡೆಯುವುದಕ್ಕೂ ಯಾವುದೇ ಲಂಚವಿಲ್ಲ.. ಅದಕ್ಕೆ ಮಾನವೀಯತೆಯೊಂದೇ ಸಾಕು..

ಹಾಗಾಗಿ ಎಲ್ಲರು ಶ್ರೇಷ್ಠರೇ.. ಅಂಗನವಾಡಿಯಲ್ಲಿ ಶ್ರಮ ಬರುವ ಎಲ್ಲಾ ಸಹನಾ ಮೂರ್ತಿ ತಾಯಂದಿರಿಗೂ ಒಂದು ದೊಡ್ಡ ಸಲಾಮ್…

ಇದು ಕೇವಲ ನನ್ನ ಅನಿಸಿಕೆಯ ಬರಹ ಮಾತ್ರ… ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ